(ಸ್ಥಳ, ವ್ಯಕ್ತಿ, ಮೊದಲಾದವನ್ನು) ಬಿಡು; ಬಿಟ್ಟು ಹೊರಡು; ಹೊರಟುಹೋಗು; ಬಿಟ್ಟು ಹೋಗು; ಅಲ್ಲಿ ಇರದಾಗು: left him an hour ago ಅವನನ್ನು ಒಂದು ಗಂಟೆಯ ಹಿಂದೆ ಬಿಟ್ಟು ಹೋದೆ. leave the track ರಸ್ತೆ ಬಿಟ್ಟು ಹೋಗು; ಜಾಡು ತಪ್ಪು; ದಾರಿ ತಪ್ಪಿ ನಡೆ. leave here (ವಾಹನ, ಪಾದರಕ್ಷೆ, ಮೊದಲಾದವನ್ನು) ಇಲ್ಲಿ ಬಿಡು.
(ವಸ್ತು, ಗುರುತು, ಮೊದಲಾದವನ್ನು) ಬಿಡು; ಬಿಟ್ಟು ಹೋಗು; ಉಳಿಸಿ ಹೋಗು; ಉಳಿಸು; ಜೊತೆಯಲ್ಲಿ ತೆಗೆದುಕೊಂಡು ಹೋಗದಿರು: left a slimy trail ಲೋಳೆಯ ಜಾಡು ಉಳಿಸಿ ಹೋಯಿತು. left a bad impression ಕೆಟ್ಟ ಅಭಿಪ್ರಾಯ ಬಿಟ್ಟು ಹೋಗಿದ್ದಾನೆ. has left his gloves ಕೈಗವಸನ್ನು ಬಿಟ್ಟು ಹೋಗಿದ್ದಾನೆ. leave a permanent scar ಶಾಶ್ವತವಾದ ಗಾಯದ ಕಲೆಯನ್ನು ಉಳಿಸು. six from seven leaves one ಏಳರಲ್ಲಿ ಆರು ತೆಗೆದರೆ ಒಂದು ಉಳಿಯುತ್ತದೆ.
(ವಾಸಸ್ಥಳ, ಹಾಜರಾತಿ, ಕೆಲಸ, ಸಂಸ್ಥೆ, ಹುದ್ದೆ, ಮೊದಲಾದವನ್ನು) ಬಿಡು; ತ್ಯಜಿಸು; ತೊರೆ ( ಅಕರ್ಮಕ ಕ್ರಿಯಾಪದ ಸಹ): has left the school ಶಾಲೆಯನ್ನು ಬಿಟ್ಟುಹೋದ; ಶಾಲೆಗೆ ಹಾಜರಾಗುತ್ತಿಲ್ಲ. I am leaving for another firm ನಾನು ಬೇರೊಂದು ಕಂಪನಿ ಸೇರಲು (ಇದನ್ನು) ಬಿಡುತ್ತಿದ್ದೇನೆ.
ಕೈಬಿಡು; ತ್ಯಜಿಸು; ತೊರೆ; ಕೈಬಿಡು; (ಪರಿ)ತ್ಯಾಗಮಾಡು.
(ಒಬ್ಬನು ಸತ್ತ ಅನಂತರದಲ್ಲಿ ಇರುವಂತೆ) ಬಿಡು; ಬಿಟ್ಟು, ಉಳಿಸಿ – ಹೋಗು: leaves a wife and three children ಹೆಂಡತಿ ಮತ್ತು ಮೂರು ಮಕ್ಕಳನ್ನು ಬಿಟ್ಟು ಹೋಗಿದ್ದಾನೆ.
(ಉತ್ತರಾಧಿಕಾರಿಗೆ ಆಸ್ತಿ, ಗುಣ, ಮೊದಲಾದವನ್ನು) ಬಿಟ್ಟುಹೋಗು.
(ವ್ಯಕ್ತಿ, ವಸ್ತು, ಮೊದಲಾದವನ್ನು ಅಡ್ಡಿಪಡಿಸದೆ ಯಾ ನೆರವು ನೀಡದೆ ತಮ್ಮಷ್ಟಕ್ಕೆ ತಾವು ಒಂದು ಕೆಲಸ ಮೊದಲಾದವನ್ನು ಮಾಡಲು) ಬಿಡು; ಅವಕಾಶ ಕೊಡು: he left him to shift for himself ಅವನ ಪಾಡು ಅವನೇ ನೋಡಿಕೊಳ್ಳಲಿ ಎಂದು ಅವನನ್ನು ಬಿಟ್ಟ. leave the future to take care of itself ಭವಿಷ್ಯ ಯಾ ಮುಂದಕ್ಕೆ ಏನಾದರೂ ಆಗಲಿ ಎಂದು ಸುಮ್ಮನಿರು.
(ಅಪ್ಪಣೆ, ಸಲಹೆ, ಪತ್ರ, ಸುದ್ದಿ, ಮೊದಲಾದವನ್ನು ಒಬ್ಬನ ಜವಾಬ್ದಾರಿಗೆ) ಬಿಡು; ಕೊಟ್ಟು ಹೋಗು; ಬಿಟ್ಟುಹೋಗು; ವಹಿಸಿ ಯಾ ಒಪ್ಪಿಸಿ ಹೋಗು; ಇಟ್ಟುಹೋಗು: he left his servant in charge of the house ಅವನು ಮನೆಯನ್ನು ತನ್ನ ಆಳಿಗೆ ವಹಿಸಿಹೋದ. I’ll leave the matter in your hands ನಾನು ಈ ವಿಷಯವನ್ನು ನಿನ್ನ ಕೈಯಲ್ಲಿಟ್ಟಿದ್ದೇನೆ, ನಿನಗೆ ಒಪ್ಪಿಸಿದ್ದೇನೆ. leave it to me ಅದನ್ನು ಯಾ ಅದರ ವಿಷಯ ನನಗೆ ಬಿಡು. leave nothing to chance ಯಾವುದನ್ನೂ ಅದೃಷ್ಟಕ್ಕೆ ಬಿಡಬೇಡ.
ಬಳಸದೆ, ವ್ಯವಹರಿಸದೆ – ಬಿಡು; ಕೈಬಿಡು: leaving aside many a detail ಅನೇಕ ವಿವರಗಳನ್ನು ಬಿಟ್ಟು.
(ಕರ್ಮಣಿಪ್ರಯೋಗ) ಉಳಿ; ಮಿಗು; ಉಳಿದುಬಿಡು; ಉಳಿತಾಯವಾಗು: one ton of coal is left ಒಂದು ಟನ್ ಕಲ್ಲಿದ್ದಲು ಮಿಕ್ಕಿದೆ, ಉಳಿದಿದೆ.
ಒಂದು ನಿರ್ದಿಷ್ಟ ಸ್ಥಿತಿಯಲ್ಲಿ ಯಾ ಸ್ಥಾನದಲ್ಲಿ ಇರಲು ಬಿಡು ಯಾ ಇರುವಂತೆ ಮಾಡು: leave the door open ಬಾಗಿಲು ತೆರೆದಿರುವಂತೆ ಬಿಡು. the performance left them unmoved ಪ್ರದರ್ಶನ ಅವರನ್ನು ಉತ್ಸಾಹಗೊಳಿಸದೆ ಹೋಯಿತು. leave nothing that is necessary undone ಅಗತ್ಯವಾದುದನ್ನು ಮಾಡದೆ ಬಿಡಬೇಡ, ಇರಬೇಡ.
(ತನ್ನ ಗೈರುಹಾಜರಿಯಲ್ಲಿ ಕೆಲಸವೊಂದನ್ನು ಮಾಡುವುದು, ನೋಡಿಕೊಳ್ಳುವುದು, ಸಂಗ್ರಹಿಸುವುದು, ತಲುಪಿಸುವುದು, ಮೊದಲಾದವುಗಳಿಗಾಗಿ ವಸ್ತುವೊಂದನ್ನು ಬೇರೆಯವರಿಗೆ) ಬಿಡು; ವಹಿಸು: leave it to you, sir ಅದನ್ನು ನಿಮಗೇ ಬಿಡುತ್ತೇನೆ ಯಾ ಬಿಟ್ಟಿದ್ದೇನೆ, ಸ್ವಾಮಿ; ನಿಮ್ಮಿಷ್ಟ ಬಂದಂತೆ ಮಾಡಿ.
ಬಿಡು; ವರ್ಜಿಸು; ತಿನ್ನುವುದನ್ನು, ಸೇವಿಸುವುದನ್ನು ಯಾ ವ್ಯವಹಾರವನ್ನು ಬಿಡು.
(ಸ್ಥಳ ಮೊದಲಾದವನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿರುವಂತೆ) ಬಿಡು; ಬಿಟ್ಟುಕೊಂಡು ಹೋಗು, ನಡೆ, ಹಾದುಹೋಗು: leave the college on the left ಕಾಲೇಜು ಕಟ್ಟಡವನ್ನು ಎಡಕ್ಕೆ ಬಿಟ್ಟು ನಡೆ; ಕಾಲೇಜನ್ನು ಎಡಕ್ಕೆ ಬಿಟ್ಟು ಹಾದುಹೋಗು.
ಅಪ್ಪಣೆ; ಅನುಜ್ಞೆ; ಅನುಮತಿ.
(ಪೂರ್ಣ ಪ್ರಯೋಗ leave of absence) (ಗೈರುಹಾಜರಿ) ರಜೆ; ಸೂಟಿ; ಬಿಡತಿ; ಸೇನೆ, ನಾವೆ, ಕಚೇರಿ, ಪಾಠಶಾಲೆ, ಮೊದಲಾದವುಗಳಲ್ಲಿ ಕೆಲಸಕ್ಕೆ ಗೈರುಹಾಜರಾಗಲು ಪಡೆದ ಅನುಮತಿ.
(ಹೀಗೆ ಪಡೆದ) ರಜಾಕಾಲ; ರಜಾವಧಿ.