ಅನುಕೂಲವಾದ; ಅನುಕೂಲ ಮನಸ್ಸುಳ್ಳ: inclinable to a plea ಮನವಿಗೆ ಅನುಕೂಲ ಮನಸ್ಸುಳ್ಳ.
inclination
ನಾಮವಾಚಕ
ಬಾಗು; ಓರೆ; ಓಲು; ಇಳುಕಲು; ಇಳಿಜಾರು; ಪ್ರವಣತೆ; ಉತಾರು.
(ಕಾಂತಸೂಜಿಯ) ನಮನ; ತಿರುಗಾಣಿಯ ಮೇಲೆ ಕೂರಿಸಿರುವ ಕಾಂತಸೂಜಿಯನ್ನೊಳಗೊಳ್ಳುವ ಊರ್ಧ್ವಮುಖ ಸಮತಲದಲ್ಲಿ ಆ ಸೂಜಿಗೂ ಅಲ್ಲಿಯ ಕ್ಷಿತಿಜೀಯ ರೇಖೆಗೂ ನಡುವೆ ಇರುವ ಕೋನ.
ನತಿ; ಪ್ರವಣ ಪ್ರಮಾಣ; ಎರಡು ಸರಳರೇಖೆಗಳ ಯಾ ಸಮತಲಗಳ ದಿಕ್ಕುಗಳ ನಡುವಣ (ಮುಖ್ಯವಾಗಿ ಅವುಗಳ ನಡುವಣ ಕೋನದ ಅಳತೆಯಿಂದ ಮಾಡಿದ) ವ್ಯತ್ಯಾಸ.
ಒಲವು; ಪ್ರವೃತ್ತಿ.
ಇಷ್ಟ; ಪ್ರೀತಿ; ಒಲುಮೆ.
incline
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
ನುಡಿಗಟ್ಟು
incline one’s ear (ಉಪಕಾರ ಮಾಡುವ ದೃಷ್ಟಿಯಿಂದ) ಕಿವಿಗೊಡು; ಕಿವಿಗೊಟ್ಟು ಕೇಳು.
(ತಲೆ, ಮೈ, ಮೊದಲಾದವನ್ನು ಯಾ ತನ್ನನ್ನೇ ಮುಂದಕ್ಕೆ ಯಾ ಕೆಳಕ್ಕೆ) ಬಾಗಿಸು; ಬಗ್ಗಿಸು; ಓಲಿಸು.
(ಮನುಷ್ಯನನ್ನು, ಮನವನ್ನು, ಹೃದಯವನ್ನು, ಯಾವುದೇ ವಸ್ತುವಿನ ಯಾ ವಿಷಯದ ಕಡೆಗೆ ಯಾ ಯಾವುದೇ ಕಾರ್ಯ ಮಾಡಲು) ಒಲಿಸು; ಒಲವುಗೊಳಿಸು; ಪ್ರವೃತ್ತಗೊಳಿಸು: incline our hearts to keep this law ಈ ಕಾನೂನನ್ನು ಪಾಲಿಸಲು ನಮ್ಮ ಮನವೊಲಿಸು. I am inclined to think so ಹಾಗೆಂದು ಯೋಚಿಸುವ ಪ್ರವೃತ್ತಿಯುಳ್ಳವನಾಗಿದ್ದೇನೆ.