logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

open-eared
ಗುಣವಾಚಕ
ತೆರೆದ ಕಿವಿಗಳುಳ್ಳ; ಆಸಕ್ತಿಯಿಂದ ಕೇಳುವ, ಗಮನಿಸುವ ಕಿವಿಗಳುಳ್ಳ.

open-ended
ಗುಣವಾಚಕ
ತೆರೆದ ತುದಿಯ; ಪೂರ್ವ ನಿರ್ಧಾರಿತವಾದ ಎಲ್ಲೆ ಯಾ ಮಿತಿ ಇರದ.

open-eyed
ಗುಣವಾಚಕ
  • ತೆರದ ಕಣ್ಣಿನ.
  • ಅಚ್ಚರಿಗಣ್ಣಿನ; ಆಶ್ಚರ್ಯದಿಂದ ಬಿಟ್ಟ ಕಣ್ಣುಗಳುಳ್ಳ.
  • ಎಚ್ಚರಿಕೆಯುಳ್ಳ; ಜಾಗರೂಕ.
  • ತಿಳಿದೇ ಆದ; ಪ್ರಜ್ಞಾಪೂರ್ವಕ; ಕಣ್ಣು ಬಿಟ್ಟುಕೊಂಡು ಯಾ ಗೊತ್ತಿದ್ದೂ ಮಾಡಿದ ಯಾ ಅನುಭವಿಸಿದ: an open-eyed commission of crime ಕಣ್ಣುಬಿಟ್ಟುಕೊಂಡು, ಗೊತ್ತಿದ್ದೂ ಮಾಡಿದ ಅಪರಾಧ.

  • open-faced
    ಗುಣವಾಚಕ
    ಸಾಚಾ, ಸರಳ, ಆಕೃತ್ರಿಮ, ನಿಷ್ಕಪಟ–ಮುಖವುಳ್ಳ; ಮರೆಮಾಚದ ಮುಖವುಳ್ಳ.

    open-handed
    ಗುಣವಾಚಕ
    ಬಿಚ್ಚುಗೈಯುಳ್ಳ; ಧಾರಾಳ ಸ್ವಭಾವದ; ಮುಕ್ತಹಸ್ತದ.

    open-handedly
    ಕ್ರಿಯಾವಿಶೇಷಣ
    ಧಾರಾಳವಾಗಿ; ಮುಕ್ತಹಸ್ತದಿಂದ; ಉದಾರವಾಗಿ.

    open-handedness
    ನಾಮವಾಚಕ
    ಧಾರಾಳತನ; ಔದಾರ್ಯ.

    open-heart
    ನಾಮವಾಚಕ
    ತೆರೆದ ಹೃದಯ:
  • ಮುಚ್ಚುಮರೆಯಿಲ್ಲದಿರುವುದು.
  • ಸಂಶಯ ಪಡದಿರುವಿಕೆ; ಸಂಶಯರಾಹಿತ್ಯ; ನಿಷ್ಕಪಟತೆ.
  • ದಯಾಪರತೆ.
  • ಸ್ನೇಹಭಾವ; ಸೌಹಾರ್ದ; ಹಾರ್ದಿಕತೆ.

  • open-heart surgery
    ನಾಮವಾಚಕ
    ತೆರೆದ ಹೃದಯದ ಶಸ್ತ್ರಕ್ರಿಯೆ, ಶಸ್ತ್ರಚಿಕಿತ್ಸೆ; ಹೃದಯ ಹೊರಗೆ ಕಾಣಿಸುವಂತೆ ತೆರೆದು, ರಕ್ತವು ಕವಲುದಾರಿಯಲ್ಲಿ ಸಾಗುವಂತೆ ಮಾಡಿ ನಡೆಸುವ ಶಸ್ತ್ರಕ್ರಿಯೆ ಯಾ ಶಸ್ತ್ರಚಿಕಿತ್ಸೆ.

    open-hearted
    ಗುಣವಾಚಕ
    ತೆರೆದ ಹೃದಯದ:
  • ಮುಚ್ಚುಮರೆಯಿಲ್ಲದ; ನಿಷ್ಕಪಟವಾದ.
  • ಸ್ನೇಹಭಾವದಿಂದ ಪಡೆದಿರುವ.
  • ದಯಾಪರ.
  • ಸ್ನೇಹಭಾವದಿಂದ ಕೂಡಿದ; ಸೌಹಾರ್ದದ; ಹಾರ್ದಿಕ.


  • logo