logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

leather
ನಾಮವಾಚಕ ಪದಗುಚ್ಛ
  • (ಉಪಯೋಗಕ್ಕೆ ಒದಗುವಂತೆ ಹದಗೊಳಿಸಿದ) ಚರ್ಮ; ಚಕ್ಕಳ; ತೊಗಲು.
  • ಉಜ್ಜುದೊಗಲು; ಮೆರುಗುದೊಗಲು; ಮೆರುಗು ಬರಲು ಉಜ್ಜುವ ತೊಗಲಿನ ತುಂಡು.
  • (ಯಾವುದೇ ಸಾಮಾನಿನ) ತೊಗಲಿನ ಭಾಗ.
  • (ಅಶಿಷ್ಟ) (ಕ್ರಿಕೆಟ್‍ ಯಾ ಕಾಲ್ಚೆಂಡಾಟದ) ಚೆಂಡು.
  • (ಬಹುವಚನ ದಲ್ಲಿ) ಚರ್ಮದ – ಬಟ್ಟೆಗಳು, ಉಡುಪುಗಳು (ಮುಖ್ಯವಾಗಿ ಕಣಕಾಲ ಕಾಪು ಯಾ ಮೊಣಕಾಲ ಷರಾಯಿ ಚಲ್ಲಣ); ಮೋಟಾರ್‍ ಸೈಕಲ್ಲಿನ ಸವಾರಿಗೆ ತೊಡುವ ಉಡುಪು.
  • ತೊಗಲಿನ ಹಗ್ಗ ಯಾ ಬಾರು: stirrup leather ರಿಕಾಪಿನ ತೊಗಲುಪಟ್ಟಿ; ಬಾರು.

  • leather
    ಗುಣವಾಚಕ
    ಚರ್ಮದ; ಚರ್ಮ, ತೊಗಲು – ಇವುಗಳಿಂದ ಮಾಡಿದ, ತಯಾರಿಸಿದ.

    leather
    ಸಕರ್ಮಕ ಕ್ರಿಯಾಪದ
  • ತೊಗಲು ಹೊದಿಸು; ತೊಗಲ ಕಾಪು ಹಾಕು.
  • ಬಾರಿಸು; ಹೊಡೆ.
  • ತೊಗಲಿನಿಂದ ಒರೆಸು ಯಾ (ಮೆರುಗು ಕೊಡಲು ಮೊದಲಿಗೆ ತೊಗಲಪಟ್ಟಿಯಿಂದ) ಉಜ್ಜು.

  • leather-head
    ನಾಮವಾಚಕ
    ಮಡ್ಡಿ; ದಡ್ಡ.

    leather-hunting
    ನಾಮವಾಚಕ
    (ಕ್ರಿಕೆಟ್‍ ಆಟದಲ್ಲಿ) ಹೀಲ್ಡ್‍ ಮಾಡುವುದು; ಚೆಂಡು ಕಾಯುವುದು.

    leather-jacket
    ನಾಮವಾಚಕ
  • (ಬ್ರಿಟಿಷ್‍ ಪ್ರಯೋಗ) ಗಟ್ಟಿಚರ್ಮದ – ಮರಿಹುಳು, ಕಂಬಳಿಹುಳು.
  • (‘ಮಾನಕ್ಯಾಂತಿಡೇ’ ವಂಶದ, ಗಟ್ಟಿ ಚರ್ಮದ) ಒಂದು ಬಗೆಯ ಕಡಲ ಮೀನು.

  • leather-neck
    ನಾಮವಾಚಕ
    (ನೌಕಾಯಾನ, ಅಶಿಷ್ಟ) (ಯಾ ಮುಖ್ಯವಾಗಿ ಅಮೆರಿಕನ್‍ ಪ್ರಯೋಗದಲ್ಲಿ) ಯುದ್ಧದ ಹಡಗಿನಲ್ಲಿ ಕೆಲಸ ಮಾಡುವ ಸೈನಿಕ.

    leather-wood
    ನಾಮವಾಚಕ
    ಚರ್ಮವೃಕ್ಷ; ಗಡುಸು ತೊಗಟೆಯುಳ್ಳ ಹಲವು ಬಗೆಯ ಮರಗಳು.

    leatherback
    ನಾಮವಾಚಕ
    ತೊಗಲು (ಬೆನ್ನಿನ) ಅಮೆರಿಕನ್‍ ಪ್ರಯೋಗ; ದಪ್ಪ ತೊಗಲಿನಂಥ ಚಿಪ್ಪುಳ್ಳ, ಕಡಲಿನ ದೊಡ್ಡ ಆಮೆ.

    leathercloth
    ನಾಮವಾಚಕ
    ತೊಗಲುಬಟ್ಟೆ; ತೊಗಲಿನಂತೆ ಕಾಣುವ ರೀತಿಯಲ್ಲಿ ಬಣ್ಣ ಬಳಿದ ಗಟ್ಟಿಯಾದ ಬಟ್ಟೆ.


    logo