ತೆರೆದ ಸಮಾಜ; ಮುಕ್ತ ಸಮಾಜ; ಕಟ್ಟುನಿಟ್ಟಾದ ರಚನೆ ಮತ್ತು ನಿಷ್ಠುರವಾದ ನಂಬಿಕೆಗಳಿಲ್ಲದ ಸಮಾಜ; ವ್ಯಾಪಕವಾಗಿ ಹರಡಿದ ತಿಳಿವಳಿಕೆ ಮತ್ತು ನಂಬಿಕೆಗಳ ಸ್ವಾತಂತ್ರ್ಯ ಇರುವ ಸಮಾಜ.
Open University
ನಾಮವಾಚಕ
(ಯುನೈಟ್‍ಡ್ ಕಿಂಗ್ಡಮ್‍ನಲ್ಲಿ) ಮುಕ್ತ ವಿಶ್ವವಿದ್ಯಾನಿಲಯ; ವಿಧ್ಯುಕ್ತ ಶೈಕ್ಷಣಿಕ ಅರ್ಹತೆಯಿಲ್ಲದವರಿಗೆ ರೇಡಿಯೋ ಮತ್ತು ಅಂಚೆಯ ಮೂಲಕ ಶಿಕ್ಷಣ ಒದಗಿಸುವ ವಿಶ್ವವಿದ್ಯಾನಿಲಯ.
open verdict
ನಾಮವಾಚಕ
ಅನಿಶ್ಚಿತ ತೀರ್ಪು; ಅಪರಾಧ ನಡೆದಿದೆ ಎಂದು ದೃಢೀಕರಿಸುವ, ಆದರೆ ಅಪರಾಧಿ ಯಾರು ಎಂಬುದನ್ನು ಹೆಸರಿಸದ ಅಥವಾ (ಅಸಹಜ, ಕ್ರೂರ ಮರಣದ ಸಂದರ್ಭದಲ್ಲಿ) ಮರಣದ ಕಾರಣವನ್ನು ತಿಳಿಸದ ತೀರ್ಪು, ತೀರ್ಮಾನ.
open weather
ನಾಮವಾಚಕ
ಹಿಮವಿಲ್ಲದ ಹವಾಮಾನ.
open weave
ನಾಮವಾಚಕ
(ಬಟ್ಟೆಯ ವಿಷಯದಲ್ಲಿ) ಜಾಳು ನೇಯ್ಗೆ; ಎಳೆಗಳ ನಡುವೆ ಖಾಲಿ ಜಾಗ ಕಾಣುವಂತೆ ನೇಯ್ದ ನೇಯ್ಗೆ.
open winter
ನಾಮವಾಚಕ
ಹಿಮವಿಲ್ಲದ ಚಳಿಗಾಲ.
open-air
ಗುಣವಾಚಕ
ಹೊರಾಂಗಣದ; ಬಯಲಿನ.
open-and-shut
ಗುಣವಾಚಕ
(ವಾದ, ವ್ಯಾಜ್ಯ, ಮೊದಲಾದವುಗಳ ವಿಷಯದಲ್ಲಿ) ನೇರವಾದ ಮತ್ತು ನಿರ್ಣಾಯಕವಾದ.
open-armed
ಗುಣವಾಚಕ
ತೆರೆದ ತೋಳಿನ; ಅದರದ; ಹಾರ್ದಿಕ; ಹೃತ್ಪೂರ್ವಕ.
open-door
ಗುಣವಾಚಕ
ತೆರೆದ ಬಾಗಿಲಿನ; ಎಲ್ಲರಿಗೂ ಪ್ರವೇಶವಿರುವ; ಸಾರ್ವಜನಿಕವಾದ; ಮುಕ್ತಾವಕಾಶದ.