logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

leaser
ನಾಮವಾಚಕ
= lessee.

leash
ನಾಮವಾಚಕ ನುಡಿಗಟ್ಟು
  • (ಬೇಟೆಯ ಯಾ ಬೇಟೆಯಟ್ಟಿಕೊಂಡು ಹೋಗುವ ನಾಯಿಗಳನ್ನು ಹಿಡಿದಿರುವ) ತೊಗಲ – ಪಟ್ಟಿ, ಹಗ್ಗ, ಬಾರು.
  • (ಬೇಟೆನಾಯಿ, ಮೊಲ, ಮೊದಲಾದವುಗಳ) ತ್ರಿಕ; ತ್ರಯ; ಮೂರರ ತಂಡ.
  • (ನೇಯ್ಗೆ) ಬೆದ; ಹಾಸು ನೂಲೆಳೆಗಳನ್ನೆತ್ತುವ ಸಾಲುಕುಣಿಕೆ ಹುರಿಗಳಲ್ಲೊಂದು.

  • leash
    ಸಕರ್ಮಕ ಕ್ರಿಯಾಪದ
  • (ತೊಗಲು ಬಾರಿನಿಂದ) ಒಟ್ಟಿಗೆ ಕಟ್ಟು; (ಕಟ್ಟಿ) ಹಿಡಿದುಕೊ.
  • ತಡೆ; ನಿಗ್ರಹಿಸು.

  • leasing
    ನಾಮವಾಚಕ
    (ಬೈಬ್‍ಲ್‍) ಸುಳ್ಳು; ಸುಳ್ಳಾಟ; ಸುಳ್ಳು ಹೇಳುವುದು.

    least
    ಗುಣವಾಚಕ ಪದಗುಚ್ಛ ನುಡಿಗಟ್ಟು
    line of least resistance ಅತ್ಯಂತ ಸುಲಭವಾದ ದಾರಿ; ಅಬಾಧಿತ ಮಾರ್ಗ; ಅಡೆತಡೆಗಳಿಲ್ಲದ, ಪ್ರತಿರೋಧವಿಲ್ಲದ ಹಾದಿ; ಅಪ್ರತಿಹತ ಪಥ.
  • ಅತ್ಯಂತ – ಸಣ್ಣ, ಸ್ವಲ್ಪ; ಅತ್ಯಲ್ಪ; ಕನಿಷ್ಠ ಪ್ರಮಾಣದ; ಲಘುತಮ.
  • (the ನಂತರ, ಮುಖ್ಯವಾಗಿ ನಿಷೇಧಾರ್ಥಕ ಪದದೊಂದಿಗೆ) ಸ್ವಲ್ಪವೂ; ಚೂರೂ: it does not make the least difference ಸ್ವಲ್ಪವೂ ವ್ಯತ್ಯಾಸವಿಲ್ಲ; ಅದು ಸ್ವಲ್ಪವೂ ವ್ಯತ್ಯಾಸವಾಗುವುದಿಲ್ಲ.
  • (ಒಂದು ಜಾತಿಯ ಯಾ ಬಗೆಯ ವಿಷಯದಲ್ಲಿ) ಅತಿ ಚಿಕ್ಕ; ಅತ್ಯಂತ ಸಣ್ಣ; ಪುಟ್ಟ: least sparrow ಅತಿ ಚಿಕ್ಕ ಗುಬ್ಬಚ್ಚಿ.

  • least
    ನಾಮವಾಚಕ ಪದಗುಚ್ಛ ನುಡಿಗಟ್ಟು
    ಅತ್ಯಂತ ಸಣ್ಣದು; ಅತಿ ಸ್ವಲ್ಪದ್ದು; ಕನಿಷ್ಠ ಪ್ರಮಾಣದ್ದು.
  • at least
    1. ಕನಿಷ್ಠ ಪಕ್ಷ; ಅಷ್ಟಾದರೂ ಯಾವ ಸಂದರ್ಭದಲ್ಲೇ ಆದರೂ; ಏನೇ ಆದರೂ.
    2. ಕನಿಷ್ಠ ಪಕ್ಷ; ಬಹಳ ಕಡಿಮೆ ಎಂದರೆ; ಎಷ್ಟು ಕೊಂಚವೆಂದರೂ.
  • at the least = ಪದಗುಚ್ಛ \((1b)\).
  • in the least (ಸಾಮಾನ್ಯವಾಗಿ ನಿಷೇಧಾರ್ಥಕ ಪದಗಳ ಮುಂದೆ ಬಂದಾಗ)
    1. ಅತ್ಯಲ್ಪವಾಗಿ; ಬಹಳ ಕಡಿಮೆ; ಕನಿಷ್ಠ ಪ್ರಮಾಣದಲ್ಲಿ.
    2. ಕೊಂಚವೂ; ಸ್ವಲ್ಪವೂ: not in the least offended ಕೊಂಚವೂ ಮನಸ್ಸಿಗೆ ನೋವಾಗಿಲ್ಲ, ಅಸಮಾಧಾನವಾಗಿಲ್ಲ.
  • the least = ಪದಗುಚ್ಛ \((3)\).

  • least
    ಕ್ರಿಯಾವಿಶೇಷಣ
    ಅತಿ; ತೀರಾ; ಅತ್ಯಲ್ಪವಾಗಿ; ಕನಿಷ್ಠ ಪ್ರಮಾಣದಲ್ಲಿ: the least important of the reasons ಅವುಗಳಲ್ಲಿ ತೀರಾ ಅಮುಖ್ಯ ಕಾರಣವೆಂದರೆ.

    leastways
    ಕ್ರಿಯಾವಿಶೇಷಣ
    (ಅಸಂಸ್ಕೃತ ಯಾ ಪ್ರಾಂತೀಯ ಪ್ರಯೋಗ) ಅಥವಾ ಎಷ್ಟೇ ಕಡಿಮೆಯಾದರೂ; ಅಥವಾ ಅಷ್ಟಾದರೂ.

    leastwise
    ಕ್ರಿಯಾವಿಶೇಷಣ
    = leastways.

    leat
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಬೀಸುವ, ಸುತ್ತುವ ಯಂತ್ರ, ಮೊದಲಾದವುಗಳಿಗೆ ನೀರು ಸಾಗಿಸುವ) ತೆರೆಗಾಲುವೆ; ಮುಚ್ಚಿರದ ಕಾಲುವೆ.


    logo