logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

open mouth
ನಾಮವಾಚಕ
  • (ಹೊಟ್ಟೆಬಾಕತನ, ಮರೆಮಾಚದ ಸ್ವಭಾವ, ಮೊದಲಾದವುಗಳಲ್ಲಿ) ತೆರೆದ ಬಾಯಿ; ಹರಕು ಬಾಯಿ.
  • (ಮುಖ್ಯವಾಗಿ ಅತಿ ಹೆಡ್ಡತನ ಯಾ ಆಶ್ಚರ್ಯ ತೋರಿಸುವ) ಬಿಟ್ಟ ಬಾಯಿ; ತೆರೆದ ಬಾಯಿ.

  • open order
    ನಾಮವಾಚಕ
    (ಸೈನ್ಯ, ನಾವೆಗಳ ವಿಷಯದಲ್ಲಿ) ವಿರಲವಿನ್ಯಾಸ; ಸೈನಿಕರ ಯಾ ಹಡಗುಗಳ ಮಧ್ಯೆ ಹೆಚ್ಚು ಅಂತರ ಬಿಟ್ಟಿರುವ ವಿನ್ಯಾಸ.

    open prison
    ನಾಮವಾಚಕ
    ಮುಕ್ತಸೆರೆಮನೆ; ಬಯಲು ಬಂದಿಖಾನೆ; ಸೆರೆಯಾಳುಗಳಿಗೆ ಕನಿಷ್ಠ ದೈಹಿಕ ನಿರ್ಬಂಧಗಳನ್ನು ಹಾಕಿರುವ ಸೆರೆಮನೆ.

    open question
    ನಾಮವಾಚಕ
    ತೆರೆದ ಪ್ರಶ್ನೆ:
  • ನ್ಯಾಯವಾಗಿ ಭಿನ್ನಾಭಿಪ್ರಾಯಗಳಿರಬಹುದಾದ ವಿಷಯ.
  • ಇನ್ನೂ ಬಗೆಹರಿಸದ ಯಾ ಇತ್ಯರ್ಥವಾಗಿಲ್ಲದ ವಿಷಯ.

  • open sandwich
    ನಾಮವಾಚಕ
    ಬೋಳು ಸ್ಯಾನ್‍(ನ್ಡ್‍)ವಿಚ್‍; ಮೇಲುಗಡೆಯ ಬ್ರೆಡ್‍ ಹಲ್ಲೆಯನ್ನಿಡದ ಸ್ಯಾಂಡ್‍ವಿಚ್‍.

    open sea
    ನಾಮವಾಚಕ
    ಮುಕ್ತಸಮುದ್ರ; ಭೂಪ್ರದೇಶದಿಂದ ದೂರವಿರುವ ವಿಶಾಲವಾದ ಸಮುದ್ರ.

    open season
    ನಾಮವಾಚಕ
    ಬೇಟೆಕಾಲ; ಬೇಟೆಯ ಪ್ರಾಣಿಗಳನ್ನು ಕೊಲ್ಲುವುದರ ಮೇಲೆ ನಿರ್ಬಂಧಗಳನ್ನು, ನಿಷೇಧಗಳನ್ನು ತೆಗೆದುಹಾಕಿರುವ ಕಾಲ, ಅವಧಿ.

    open secret
    ನಾಮವಾಚಕ
    ಬಹಿರಂಗ ರಹಸ್ಯ; ಗುಟ್ಟೆಂದು ಭಾವಿತವಾಗಿರುವ, ಆದರೆ ಬಹುತೇಕ ಜನರಿಗೆ ತಿಳಿದಿರುವ ರಹಸ್ಯ.

    open sesame
    ನಾಮವಾಚಕ
    (“ಅರೇಬಿಯನ್‍ ನೈಟ್ಸ್‍” ಎಂಬ ಕಥಾವಳಿಯ ಒಂದು ಕಥೆಯ ಸಂದರ್ಭದಿಂದ) ತೆಗೆತಿಲ; ಸಾಮಾನ್ಯವಾಗಿ ಯಾರೂ ಪಡೆಯಲಾಗದ್ದನ್ನು ಪಡೆಯುವಂತೆ ಮಾಡುವ ಮಂತ್ರ ಯಾ ಮಾಂತ್ರಿಕ ಸಾಧನ.

    open shop
    ನಾಮವಾಚಕ
    ಮುಕ್ತ ಅಂಗಡಿ:
  • ನೌಕರರು ಕಾರ್ಮಿಕ ಸಂಘದ ಸದಸ್ಯರಾಗಬೇಕಾದ ಆವಶ್ಯಕತೆಯಿಲ್ಲದ ವ್ಯಾಪಾರ ಮೊದಲಾದವು.
  • ಇಂಥ ವ್ಯವಸ್ಥೆ.


  • logo