logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inch
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
(ಸ್ವಲ್ಪಸ್ವಲ್ಪವಾಗಿ) ಸರಿಸು; ಜರುಗಿಸು; ನುಸುಳಿಸು. ಸ್ವಲ್ಪಸ್ವಲ್ಪವಾಗಿ, ಅಂಗುಲ ಅಂಗುಲವಾಗಿ ಸರಿ, ಜರುಗು, ನುಸುಳು.

inch
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) (ಮುಖ್ಯವಾಗಿ ಸ್ಕಾಟ್ಲೆಂಡಿನಲ್ಲಿ, ವಿಶೇಷವಾಗಿ ಸ್ಥಳಗಳ ಅಂಕಿತನಾಮಗಳಲ್ಲಿ ಬಳಕೆ) ಸಣ್ಣ ದ್ವೀಪ.

inchoate
ಗುಣವಾಚಕ
  • ಅಪೂರ್ಣಾವಸ್ಥೆಯ; ಈಗ ತಾನೇ ತೊಡಗಿದ, ಹೊಮ್ಮುತ್ತಿರುವ; ಇನ್ನೂ ಪ್ರಾರಂಭದಲ್ಲೇ ಇರುವ; ಪೂರ್ಣವಾಗಿ ರೂಪುಗೊಂಡಿಲ್ಲದ ಯಾ ರಚನೆಗೊಂಡಿಲ್ಲದ.
  • (ಭಾವನೆ ಮೊದಲಾದವುಗಳ ವಿಷಯದಲ್ಲಿ) ಅಸ್ಪಷ್ಟ; ಅಸ್ಫುಟ: vague longings and inchoate needs ಅನಿರ್ದಿಷ್ಟ ಹಂಬಲಗಳು ಮತ್ತು ಅಸ್ಫುಟ ಅಗತ್ಯಗಳು.

  • inchoate
    ಸಕರ್ಮಕ ಕ್ರಿಯಾಪದ
    ಶುರುಮಾಡು; ಮೊದಲು ಮಾಡು; ಆರಂಭಿಸು; ಉಪಕ್ರಮಿಸು: how he conceives and inchoates the argument ಹೇಗೆ ಅವನು ಆ ವಾದವನ್ನು ಕಲ್ಪಿಸಿಕೊಳ್ಳುತ್ತಾನೆ ಮತ್ತು ಆರಂಭಿಸುತ್ತಾನೆ ಎಂಬುದು.

    inchoation
    ನಾಮವಾಚಕ
  • ಮೊದಲು; ಆರಂಭ; ಪ್ರಾರಂಭ; ಆದಿ; ಉಪಕ್ರಮ.
  • ಆರಂಭಿಸುವುದು; ಉಪಕ್ರಮಿಸುವುದು.
  • ಆರಂಭದಶೆ; ಪ್ರಾರಂಭಾವಸ್ಥೆ.

  • inchoative
    ಗುಣವಾಚಕ
  • ಆರಂಭದಶೆಯ; ಪ್ರಾರಂಭಾವಸ್ಥೆಯ; ಅಪೂರ್ಣ ಸ್ಥಿತಿಯಲ್ಲೇ ಇರುವ.
  • ಅಸ್ಪಷ್ಟ; ಅಸ್ಫುಟ.
  • (ವ್ಯಾಕರಣ) = inceptive (2).

  • incidence
    ನಾಮವಾಚಕ ಪದಗುಚ್ಛ
    angle of incidence (ಭೌತವಿಜ್ಞಾನ) ಆಪಾತ ಕೋನ; ಬೆಳಕಿನ ಕಿರಣವೊಂದು ಮೇಲ್ಮೈ ಮೇಲೆ ಎರಗಿದಾಗ ಅದಕ್ಕೂ ಆ ಬಿಂದುವಿನಲ್ಲಿನ ಲಂಬ ರೇಖೆಗೂ ಮಧ್ಯೆ ಇರುವ ಕೋನ.
  • (ಹೆಗಲ, ತಲೆಯ) ಮೇಲೆ ಬೀಳುವುದು; (ಒಬ್ಬನಿಗೆ) ತಗುಲುವುದು; ಹೊರೆ; ಭಾರ: what is the incidence of the tax? ಆ ಕರಭಾರ, ಆ ತೆರಿಗೆಯ ಹೊರೆ ಎಷ್ಟು ಬೀಳುತ್ತದೆ?
  • (ರೋಗ, ತೆರಿಗೆ, ಮೊದಲಾದವುಗಳ ವಿಷಯದಲ್ಲಿ) ವ್ಯಾಪ್ತಿ; ಪ್ರಮಾಣ; ತಗಲುವ ಯಾ ಬೀಳುವ ವಿಧಾನ, ಕ್ಷೇತ್ರ, ವ್ಯಾಪ್ತಿ, ಪ್ರಮಾಣ.
  • ಪ್ರಭಾವದ ಹರವು, ವ್ಯಾಪ್ತಿ, ವಿಸ್ತಾರ.
  • (ಭೌತವಿಜ್ಞಾನ) ಆಪಾತ; ನೇರಗತಿಯಲ್ಲಿ ಚಲಿಸುವ ಬೆಳಕಿನ ರಶ್ಮಿ ಮೊದಲಾದವು ಒಂದು ತಲದ ಮೇಲೆ ಬಂದು ಬೀಳುವುದು.

  • incident
    ನಾಮವಾಚಕ
  • ಆನುಷಂಗಿಕ ಸಂಗತಿ; ಪ್ರಾಸಂಗಿಕ ಘಟನೆ; ಯಾವುದಕ್ಕೋ ಅಧೀನವಾದ ಯಾ ಸಹಾಯಕವಾದ ಘಟನೆ.
  • ಆದದ್ದು; ನಡೆದದ್ದು; ಘಟನೆ; ಸಂಗತಿ; ಪ್ರಸಂಗ.
  • (ಯುದ್ಧ ಮಾಡುತ್ತಿರುವ ದೇಶಗಳ, ಸೈನ್ಯಗಳ ನಡುವೆ ಸಂಭವಿಸುವ) ಕದನ; ಹೊಡೆದಾಟ; ಸಂಘರ್ಷ: frontier incident ಗಡಿಯ ಘಟನೆ; ಸರಹದ್ದಿನ ಸಂಘರ್ಷ.
  • (ಎಲ್ಲರಿಗೂ ತೊಂದರೆ ತರುವ, ಹಾನಿ ಉಂಟುಮಾಡುವ) ಸಾರ್ವಜನಿಕ ಘಟನೆ ಯಾ ದುರ್ಘಟನೆ.
  • (ಎಲ್ಲರ ಗಮನವನ್ನೂ ಸೆಳೆಯುವ) ವಿಶೇಷ – ಘಟನೆ, ಪ್ರಸಂಗ.
  • (ನಾಟಕದಲ್ಲಿ ಯಾ ಕವಿತೆಯಲ್ಲಿ) ನಿರ್ದಿಷ್ಟ ಘಟನೆ, ಪ್ರಸಂಗ.
  • (ನ್ಯಾಯಶಾಸ್ತ್ರ) ಅನುಗತ; ಆಸ್ತಿ, ಅಧಿಕಾರ, ಮೊದಲಾದವುಗಳೊಡನೆ ಅನುಗತವಾಗಿ ಬರುವ, ಬಾಧ್ಯತೆ, ಹಕ್ಕು, ಹೊರೆ, ಮೊದಲಾದವು.

  • incident
    ಗುಣವಾಚಕ
  • ಸಂಭಾವ್ಯ; ಸಂಭವಿಸಬಹುದಾದ; ನಡೆಯಬಹುದಾದ; ಘಟಿಸಬಹುದಾದ.
  • (ಯಾವ ಸಂಗತಿಗೇ ಆಗಲಿ) ಸಹಜವಾದ; ಅನುಬಂಧಿಯಾದ; ಸಂಬಂಧಿಸಿದ: the noise incident on the striking of the tents ಡೇರೆಗಳನ್ನು ಹೊಡೆಯುವುದಕ್ಕೆ ಸಂಬಂಧಿಸಿದ ಗದ್ದಲ.
  • (ನ್ಯಾಯಶಾಸ್ತ್ರ) (ಆಸ್ತಿ ಮೊದಲಾದವುಗಳಿಗೆ) ಅನುಗತವಾದ; ತಗುಲಿದ.
  • (ಬೆಳಕು ಮೊದಲಾದವುಗಳ ವಿಷಯದಲ್ಲಿ) (ಮೇಲೆ) ಬೀಳುವ; ಆಪಾತ(ವಾಗುವ).

  • incidental
    ಗುಣವಾಚಕ ಪದಗುಚ್ಛ
  • ಗೌಣ; ಪ್ರಾಸಂಗಿಕ; ಆನುಷಂಗಿಕ; ಮುಖ್ಯವಲ್ಲದ; ಅಮುಖ್ಯ.
  • ಸಂಭವನೀಯ; ಸಂಭವಿಸಬಹುದಾದ; ನಡೆಯಬಹುದಾದ; ಘಟಿಸಬಹುದಾದ.
  • ಅನುಗತವಾದ.


  • logo