logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

open day
ನಾಮವಾಚಕ
ತೆರೆದ ದಿನ; ಮುಕ್ತಾವಕಾಶದ ದಿನ; ಯಾವುದಾದರೊಂದು ಸ್ಥಳವನ್ನು ಸಾರ್ವಜನಿಕರು ಬಂದು ನೋಡಬಹುದಾದ ದಿನ (ಈ ಸ್ಥಳವನ್ನು ಬೇರೆಯ ದಿನಗಳಲ್ಲಿ ನೋಡಲು ಅವಕಾಶವಿರುವುದಿಲ್ಲ).

open door
ನಾಮವಾಚಕ
ತೆರೆದ ಬಾಗಿಲು; ಮುಕ್ತದ್ವಾರ; ಮುಕ್ತ, ಅನಿರ್ಬಂಧ ಪ್ರವೇಶ; ಒಂದು ದೇಶದೊಳಕ್ಕೆ ವಲಸೆ ಬರಲು ಯಾ ಅದರಲ್ಲಿ ವ್ಯಾಪಾರ ಮಾಡಲು ವಿದೇಶೀಯರಿಗೆ ಯಾವ ನಿರ್ಬಂಧಗಳೂ ಇಲ್ಲದೆ ಅವಕಾಶ ಕೊಡುವುದು.

open ears
ನಾಮವಾಚಕ
ತೆರೆದ ಕಿವಿಗಳು; ಆಸಕ್ತಿಯಿಂದ ಕೇಳುವ, ಗಮನಿಸುವ ಕಿವಿಗಳು.

open face
ನಾಮವಾಚಕ
ಸಾಚಾ, ಸರಳ, ಆಕೃತ್ರಿಮ, ನಿಷ್ಕಪಟ–ಮುಖ.

open hearth
ನಾಮವಾಚಕ
ತೆರೆದೊಲೆ; ಉಕ್ಕು ತಯಾರಿಕೆಗೆ ಉಪಯೋಗಿಸುವ, ಮೇಲ್ಗಡೆಯ ಅನಿಲಗಳಿಂದ ಕಾಯಿಸುವ, ಪ್ರತಿರಣನ (reverberatory) ಕುಲುಮೆಯ ನೆಲ.

open house
ನಾಮವಾಚಕ
ತೆರೆದ ಮನೆ; ಮುಕ್ತಗೃಹ; ಬರುವವರಿಗೆಲ್ಲ ಬಯಸುವ ಸ್ವಾಗತ ಯಾ ಮಾಡುವ ಆದರಾತಿಥ್ಯ.

open ice
ನಾಮವಾಚಕ
ಯಾನಸಾಧ್ಯ ಹಿಮ; ಹಡಗಿನ ಪ್ರಯಾಣಕ್ಕೆ ತೆರಪು ಕೊಡುವ, ಅಡ್ಡಿಪಡಿಸದ ನೀರ್ಗಲ್ಲ ಹರವು.

open letter
ನಾಮವಾಚಕ
ಬಹಿರಂಗ ಪತ್ರ; ಒಬ್ಬ ವ್ಯಕ್ತಿಯ ಹೆಸರಿಗೆ ಬರೆದ, ಮುಖ್ಯವಾಗಿ ಪ್ರತಿಭಟನೆ ಸೂಚಿಸುವ, ವರ್ತಮಾನ ಪತ್ರಿಕೆಯಲ್ಲೋ ನಿಯತಕಾಲಿಕದಲ್ಲೋ ಪ್ರಕಟಿಸಿದ ಪತ್ರ.

open market
ನಾಮವಾಚಕ
ಮುಕ್ತ ಮಾರುಕಟ್ಟೆ; ಕೊಳ್ಳುವವರು ಮಾರುವವರು ನಡುವೆ ಯಾವ ನಿರ್ಬಂಧವೂ ಇಲ್ಲದೆ ಪೈಪೋಟಿಗೆ ಅವಕಾಶವಿರುವ ಮಾರುಕಟ್ಟೆ.

open mind
ನಾಮವಾಚಕ
ತೆರೆದ, ಮುಕ್ತ–ಮನಸ್ಸು:
  • ಹೊಸ ಭಾವಗಳಿಗೆ ತೆರೆದ ಮನಸ್ಸು.
  • ನಿಷ್ಪಕ್ಷಪಾತ ಮನಸ್ಸು; ಪೂರ್ವಗ್ರಹವಿಲ್ಲದ ಯಾ ಪೂರ್ವ ನಿಶ್ಚಯವಿಲ್ಲದ ಮನಸ್ಸು.


  • logo