logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

leap-frog
ನಾಮವಾಚಕ
(ಮುಂದುಗಡೆ ಬಗ್ಗಿ ನಿಂತವನ ಮೇಲೆ ಕಾಲು ಅಗಲಿಸಿಕೊಂಡು ಹಾರುವ) ಕಪ್ಪೆಕುಪ್ಪಳ ಆಟ.

leap-frog
ಅಕರ್ಮಕ ಕ್ರಿಯಾಪದ
  • ಕಪ್ಪೆ ಕುಪ್ಪಳ ಆಟ ಆಡು; ಕಪ್ಪೆ ಕುಪ್ಪಳಿಸುವಂತೆ ಮುಂದುವರಿ (ರೂಪಕವಾಗಿ ಸಹ).
  • (ರೂಪಕವಾಗಿ) ತಲೆ ಮೆಟ್ಟಿ ಹಾರು ( ಸಕರ್ಮಕ ಕ್ರಿಯಾಪದ ಸಹ).
  • (ಇಬ್ಬರು ಯಾ ಹೆಚ್ಚು ಜನರು ಯಾ ವಾಹನಗಳು ಮೊದಲಾದವುಗಳ ವಿಷಯದಲ್ಲಿ) ಒಬ್ಬರನ್ನೊಬ್ಬರು, ಒಂದನ್ನೊಂದು ಪರ್ಯಾಯವಾಗಿ ದಾಟಿ ಹೋಗು ( ಸಕರ್ಮಕ ಕ್ರಿಯಾಪದ ಸಹ).

  • leap-year proposal
    ನಾಮವಾಚಕ
    (ಹಾಸ್ಯ ಪ್ರಯೋಗ) ಅಧಿಕ ವರ್ಷದ ಮದುವೆ ಪ್ರಸ್ತಾಪ; ಅಧಿಕ ದಿನ ಬರುವ ವರ್ಷದಷ್ಟೇ ವಿರಳವಾದ, ಹೆಣ್ಣು ತಾನಾಗಿಯೇ ಗಂಡಸಿಗೆ ನೀಡುವ ಮದುವೆ ಸೂಚನೆ, ಪ್ರಸ್ತಾಪ.

    leaper
    ನಾಮವಾಚಕ
    ಕುಪ್ಪಳಿಸುವವನು; ಹಾರುವವನು(ಳು); ಲಂಘಕ; ನೆಗೆಯುವವನು(ಳು); ಮುಖ್ಯವಾಗಿ ಸರ್ಕಸ್‍ ಮೊದಲಾದವುಗಳಲ್ಲಿ ಹಾರುವ, ನೆಗೆಯುವ ಡೊಂಬರಾಟದವನು(ಳು).

    learn
    ಕ್ರಿಯಾಪದ ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ ನುಡಿಗಟ್ಟು
    (ಭೂತರೂಪ ಮತ್ತು ಭೂತಕೃದಂತ learned ಉಚ್ಚಾರಣೆ ಲರ್ನ್ಡ್‍ ಯಾ learnt ಉಚ್ಚಾರಣೆ ಲರ್ನ್ಟ್‍).learn by rote = learn(4) ಸಕರ್ಮಕ ಕ್ರಿಯಾಪದ.
  • (ಒಂದು ವಿಷಯದಲ್ಲಿ, ಅಧ್ಯಯನ, ಅನುಭವ, ಮತ್ತೊಬ್ಬರಿಂದ ಕಲಿಕೆ, ಮೊದಲಾದವುಗಳ ಮೂಲಕ) ಕಲಿ; ಅಭ್ಯಾಸ, ಅಧ್ಯಯನ – ಮಾಡು; ಜ್ಞಾನ ಸಂಪಾದಿಸು.
  • (ಕಲೆ ಮೊದಲಾದವುಗಳಲ್ಲಿ) ಚಾತುರ್ಯ ಪಡೆ; ಕೌಶಲ, ನೈಪುಣ್ಯ – ಸಂಪಾದಿಸು.
  • ಒಂದು ನಿರ್ದಿಷ್ಟ ಸಾಮರ್ಥ್ಯವನ್ನು ಯಾ ಶಕ್ತಿಯನ್ನು – ಪಡೆದುಕೊ, ಗಳಿಸಿಕೊ, ಯಾ ಬೆಳೆಸಿಕೊ: learn to swim ಈಜುವ ಸಾಮರ್ಥ್ಯ ಬೆಳೆಸಿಕೊ.
  • (ಬಾಯಿಗೆ) ಗಟ್ಟಿ ಮಾಡು; ಬಾಯಿಪಾಠ ಮಾಡು; ಕಂಠಸ್ಥವಾಗಿಸು: learn by heart ಉರು – ಹಚ್ಚು, ಹೊಡೆ; ಕಂಠಪಾಠವಾಗಿ, ಬಾಯಿಪಾಠವಾಗಿ – ಗಟ್ಟಿಮಾಡು.
  • ಅರಿ; ತಿಳಿ; ಗ್ರಹಿಸು; ಒಬ್ಬರ ಹೇಳಿಕೆಯಿಂದ ಯಾ ಸ್ವಂತ ಪರಿಶೀಲನೆಯಿಂದ ಒಂದು ವಿಷಯವನ್ನು ತಿಳಿದುಕೊ.
  • (ಪ್ರಾಚೀನ ಪ್ರಯೋಗ ಯಾ ಅಶಿಷ್ಟ) ಹೇಳಿಕೊಡು; ಕಲಿಸು; ಬೋಧಿಸು: I will learn him a thing or two ಬೇಕಾದರೆ ಒಂದೆರಡು ವಿಷಯಗಳನ್ನು ನಾನೇ ಅವನಿಗೆ ಹೇಳಿ ಕೊಡುತ್ತೇನೆ.

  • learnable
    ಗುಣವಾಚಕ
    ತಿಳಿದುಕೊಳ್ಳಬಹುದಾದ; ಅರಿಯಬಲ್ಲ; ಗ್ರಹಿಸಬಲ್ಲ; ಗ್ರಾಹ್ಯ.

    learned
    ಗುಣವಾಚಕ
  • ಚೆನ್ನಾಗಿ – ಓದಿದ, ಕಲಿತ; ಬಲ್ಲಿದನಾದ; ವಿದ್ಯಾವಂತನಾದ; ಹೆಚ್ಚು ವ್ಯಾಸಂಗ ಮಾಡಿದ.
  • ಪಾಂಡಿತ್ಯದ; ಪಾಂಡಿತ್ಯವುಳ್ಳ; ಪಾಂಡಿತ್ಯಪೂರ್ಣ; ಪಾಂಡಿತ್ಯ ತೋರುವ: a learned work ಪಾಂಡಿತ್ಯಪೂರ್ಣ ಕೃತಿ.
  • (ಭಾಷೆ, ವೃತ್ತಿ, ಮೊದಲಾದವುಗಳ ವಿಷಯದಲ್ಲಿ) ಸುಶಿಕ್ಷಿತರು, ಪಂಡಿತರು – ಅವಲಂಬಿಸಿರುವ, ಅಭ್ಯಾಸ ಮಾಡುತ್ತಿರುವ; ಪಂಡಿತರ; ವಿದ್ವಾಂಸರ; ವಿದ್ಯಾವಂತರ: a learned society ವಿದ್ವಾಂಸರ ಸಂಘ.
  • ವಿದ್ವತ್ಪೂರ್ಣವಾದ; ವಿದ್ವಾಂಸರ ಆಸಕ್ತಿಗಳಿಗೆ ಸಂಬಂಧಿಸಿದ: learned journal ವಿದ್ವತ್ಪತ್ರಿಕೆ.
  • (ಭಾಷೆಯಲ್ಲಿನ ಪದಗಳ ವಿಷಯದಲ್ಲಿ) ಪಾಂಡಿತ್ಯಪೂರ್ಣವಾದ; ವಿದ್ವತ್ಸಹಜವಾದ; ಪಂಡಿತರಿಂದ (ಹೊಸದಾಗಿ) ಪ್ರಯೋಗಕ್ಕೆ ಬಂದ.
  • (ಬ್ರಿಟಿಷ್‍ ಪ್ರಯೋಗ) (ನ್ಯಾಯವಾದಿ ಮೊದಲಾದವರನ್ನು ಗೌರವದಿಂದ ಕರೆಯುವಾಗ) ವಿದ್ವಾಂಸ; ವಿದ್ವನ್ಮಾನ್ಯ; ಪಂಡಿತನಾದ: my learned friend ನನ್ನ ವಿದ್ವನ್ಮಿತ್ರ, ಪಂಡಿತಮಿತ್ರ. my learned brother ನನ್ನ ವಿದ್ವಾಂಸ ಸೋದರ.

  • learnedly
    ಕ್ರಿಯಾವಿಶೇಷಣ
    ಘನಪಾಂಡಿತ್ಯದಿಂದ; ವಿದ್ವತ್ಪೂರ್ಣವಾಗಿ.

    learnedness
    ನಾಮವಾಚಕ
    ಘನಪಾಂಡಿತ್ಯ; ವಿದ್ವತ್ಪೂರ್ಣತೆ.

    learner
    ನಾಮವಾಚಕ
  • ಕಲಿಯುವವನು; ವಿದ್ಯಾರ್ಥಿ; ಶಿಕ್ಷಣಾರ್ಥಿ; ಅಭ್ಯಾಸಿ: a slow learner ನಿಧಾನವಾಗಿ ಕಲಿಯುವವನು.
  • = learner driver.


  • logo