logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inceptor
ನಾಮವಾಚಕ
(ಚರಿತ್ರೆ) (ವಿಶ್ವವಿದ್ಯಾನಿಲಯದಲ್ಲಿ) ಮಾಸ್ಟರ್‍ ಯಾ ಡಾಕ್ಟರ್‍ – ಪದವೀಧರ, ಪದವೀಧರನೆಂದು ಮನ್ನಣೆ ಪಡೆದವ.

incertitude
ನಾಮವಾಚಕ
ಅನಿಶ್ಚಿತತೆ; ಸಂದಿಗ್ಧಾವಸ್ಥೆ; ಖಂಡಿತವಾಗಿ ಹೇಳಲಾಗದಿರುವುದು; ಸಂಶಯಾಸ್ಪದ ಸ್ಥಿತಿ; ನಿಶ್ಚಿತ ಜ್ಞಾನವಿಲ್ಲದೆ ಹೊಯ್ದಾಡುತ್ತಿರುವುದು.

incessancy
ನಾಮವಾಚಕ
  • ನಿಲ್ಲದಿರುವಿಕೆ; ನಿಂತುಹೋಗದಿರುವಿಕೆ.
  • ನಿರಂತರತೆ; ಅವಿಚ್ಛಿನ್ನತೆ; ಸಾತತ್ಯ; ಎಡೆಬಿಡದಿರುವಿಕೆ.
  • ಪುನರಾವರ್ತನತೆ; ಆವರ್ತನಶೀಲತೆ; ಆವರ್ತಿಸುತ್ತಲೇ ಇರುವುದು; ಮತ್ತೆಮತ್ತೆ ಬರುವುದು, ಆಗುವುದು.

  • incessant
    ಗುಣವಾಚಕ
  • ನಿಲ್ಲದ; ನಿಂತು ಹೋಗದ.
  • ಎಡೆಬಿಡದ; ನಿರಂತರ; ಅವಿಚ್ಛಿನ್ನ; ಸಂತತ.
  • ಪುನರಾವರ್ತಿಸುವ; ಆವರ್ತನಶೀಲ; ಆವರ್ತಿಸುತ್ತ ಇರುವ; ಮೇಲಿಂದ ಮೇಲೆ, ಮತ್ತೆ ಮತ್ತೆ – ಬರುವ, ಆಗುವ.

  • incessantly
    ಕ್ರಿಯಾವಿಶೇಷಣ
  • ನಿಂತು ಹೋಗದೆ; ನಿಲ್ಲದ ರೀತಿಯಲ್ಲಿ.
  • ಎಡೆಬಿಡದೆ; ನಿರಂತರವಾಗಿ; ಅವಿಚ್ಛಿನ್ನವಾಗಿ; ಸಂತತವಾಗಿ.
  • ಪುನರಾವರ್ತಿಸುತ್ತ; ಆವರ್ತಿಸುತ್ತ; ಮೇಲಿಂದ ಮೇಲೆ ಯಾ ಮತ್ತೆ ಮತ್ತೆ – ಆಗುತ್ತ, ಬರುತ್ತ.

  • incessantness
    ನಾಮವಾಚಕ
    = incessancy.

    incest
    ನಾಮವಾಚಕ
  • ವಿವಾಹಸಂಬಂಧ ನಿಷಿದ್ಧವಾದ ರಕ್ತಸಂಬಂಧಿಗಳೊಡನೆ ಯಾ ಸಗೋತ್ರದವರೊಡನೆ ಸಂಭೋಗ; ನಿಷಿದ್ಧ ರಕ್ತ ಸಂಬಂಧಿಗಳೊಡನೆ ಸಂಭೋಗ.
  • ಅಗಮ್ಯ ಗಮನದ ಪಾತಕ.

  • incestuous
    ಗುಣವಾಚಕ
  • ಅಗಮ್ಯ ಗಮನದ; ನಿಷಿದ್ಧ ರಕ್ತಸಂಬಂಧಿಗಳೊಡನೆ ಸಂಭೋಗದ.
  • ಅಗಮ್ಯಗಮನ ಪಾತಕದ.

  • incestuously
    ಕ್ರಿಯಾವಿಶೇಷಣ
  • ಅಗಮ್ಯ ಗಮನದ ರೀತಿಯಲ್ಲಿ.
  • ಅಗಮ್ಯ ಗಮನದ ಪಾತಕ ತಗುಲುವಂತೆ ಯಾ ಸಗೋತ್ರ ವ್ಯಭಿಚಾರದ ದೋಷ ಪ್ರಾಪ್ತವಾಗುವಂತೆ.

  • inch
    ನಾಮವಾಚಕ ಪದಗುಚ್ಛ ನುಡಿಗಟ್ಟು
  • ಇಂಚು; ಅಂಗುಲ:
    1. 2.5 ಸೆಂಟಿ ಈಟರ್‍: (ಉದ್ದದ ಅಳತೆಯಲ್ಲಿ) ಒಂದು ಅಡಿಯ ಹನ್ನೆರಡನೆಯ ಒಂದು ಪಾಲು.
    2. (ನಕಾಸೆಯ ಅಳತೆಯ ಒಂದು ಮಾನ) ಇಷ್ಟು ಅಂಗುಲಕ್ಕೆ ನೆಲದ ಮೇಲೆ ಇಷ್ಟು ಮೈಲಿ ಎಂಬ ಅಳತೆ: a $2 \frac12$ inch map $2\frac12$ ಅಂಗುಲದ ನಕಾಸೆ.
    3. (ಮಳೆಯ ಮಾಪನದಲ್ಲಿ) ನೆಲದ ಮೇಲೆ ಒಂದಂಗುಲ ನೀರು ನಿಲ್ಲುವಷ್ಟು ಪ್ರಮಾಣ.
    4. (ವಾಯುಮಂಡಲದ ಯಾ ಇತರ ಒತ್ತಡದ ವಿಷಯದಲ್ಲಿ) ಪಾದರಸ ತುಂಬಿದ ಒಂದಂಗುಲ ಎತ್ತರದ ನಿಲವನ್ನು ಯಾ ಸ್ತಂಭವನ್ನು ಸಮತೂಕಗೊಳಿಸುವಷ್ಟು ಒತ್ತಡ.
  • ಸ್ವಲ್ಪ; ಕೊಂಚ; ಲೇಶಮಾತ್ರ; ತುಸು; ಅಲ್ಪ ಪ್ರಮಾಣ: would not yield an inch ಸ್ವಲ್ಪ ಮಾತ್ರವನ್ನೂ ಬಿಟ್ಟು ಕೊಡಲು ಸಿದ್ಧನಿಲ್ಲ.
  • (ಬಹುವಚನದಲ್ಲಿ) ಎತ್ತರ: a man of your inches ನಿನ್ನ(ಷ್ಟು) ಎತ್ತರದ ಆಳು.


  • logo