logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

zincograph
ಸಕರ್ಮಕ ಕ್ರಿಯಾಪದ
  • ಸತುಫಲಕದ ಮೇಲೆ ಕೆತ್ತು; ಸತುಪ್ರತಿ ಮಾಡು, ತಯಾರಿಸು ( ಅಕರ್ಮಕ ಕ್ರಿಯಾಪದ ಸಹ).
  • ಒಂದು ಮಾದರಿಯನ್ನು ಈ ರೀತಿಯಲ್ಲಿ ಕೆತ್ತು.

  • zincography
    ನಾಮವಾಚಕ
    ಸತುಲೇಖಿ:
  • ಮುದ್ರಣಕಾರ್ಯಕ್ಕಾಗಿ ಅಪೇಕ್ಷಿತ ಚಿತ್ತಾರವನ್ನು ಕೊರೆದಿರುವ ಸತುವಿನ ಫಲಕ.
  • ಅದರಿಂದ ಪಡೆದ ಮುದ್ರಣ(ಪ್ರತಿ).

  • zincotype
    ನಾಮವಾಚಕ
    = 1zincograph.

    zing
    ನಾಮವಾಚಕ
  • (ಆಡುಮಾತು) ಹುರುಪು; ಉತ್ಸಾಹ.
  • ಶಕ್ತಿ; ಬಲ.

  • zing
    ಅಕರ್ಮಕ ಕ್ರಿಯಾಪದ
    ವೇಗವಾಗಿ ಯಾ ಕರ್ಕಶವಾಗಿ (ಕೀರಲು) ಶಬ್ದ ಮಾಡುತ್ತ ಚಲಿಸು.

    Zingaro
    ನಾಮವಾಚಕ
    (ಬಹುವಚನ Zingari ಉಚ್ಚಾರಣೆ ಸಿಂಗರೀ) = gypsy(1).

    zinger
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಅಸಾಧಾರಣ ವ್ಯಕ್ತಿ ಯಾ ವಸ್ತು.

    zingy
    ಗುಣವಾಚಕ
    ( ತರರೂಪ zingier, ತಮರೂಪ zingiest) ಹುರುಪುಳ್ಳ; ಉತ್ಸಾಹದ; ಶಕ್ತಿಯುಕ್ತ.

    zinnia
    ನಾಮವಾಚಕ
    ಕಡುಗೆಂಪು ಮತ್ತು ಇತರ ಉಜ್ಜ್ವಲ ಬಣ್ಣಗಳ (ಚೆಂಡುಹೂವಿನಂಥ) ಹೂಬಿಡುವ ಗಿಡಗಳ ಕುಲ ಯಾ ಕುಲದ ಗಿಡ.

    Zion
    ನಾಮವಾಚಕ
  • ಪುರಾತನ ಜೆರೂಸಲೆಮ್‍ನ ಪವಿತ್ರ ಪರ್ವತ.
  • ಯೆಹೂದ್ಯ ಜನ ಯಾ ಧರ್ಮ.
  • (ಯೆಹೂದ್ಯರ, ಕ್ರೈಸ್ತರ) ಸ್ವರ್ಗ; ದೇವಲೋಕ.
  • ಕ್ರೈಸ್ತ ಸಮುದಾಯ, ಸಮಾಜ, ಜಗತ್ತು.
  • ಚರ್ಚು; ಇಗರ್ಜಿ.


  • logo