logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tachygraphy
ನಾಮವಾಚಕ
  • (ಮುಖ್ಯವಾಗಿ ಪ್ರಾಚೀನ ಗ್ರೀಕರ ಹಾಗೂ ರೋಮನರ) ಶೀಘ್ರಲಿಪಿ ಕಲೆ.
  • ಮಧ್ಯಯುಗದ ಗ್ರೀಕ್‍ ಹಾಗೂ ಲ್ಯಾಟಿನ್‍ ಸಂಕ್ಷಿಪ್ತ ಲಿಪಿ.

  • tachymeter
    ನಾಮವಾಚಕ
  • (ಸರ್ವೆ) ಬಾಂದುಸೂಚಕ; ಸರ್ವೇಕ್ಷಣೆಯಲ್ಲಿ ಬಾಂದುಗಳನ್ನು ಬೇಗ ಗುರುತಿಸಲು ಬಳಸುವ ಸಲಕರಣೆ.
  • ಗತಿ, ವೇಗ–ಸೂಚಕ.

  • tacit
    ಗುಣವಾಚಕ
    ಅಧ್ಯಾಹೃತ; ಧ್ವನಿತ; ಸೂಚಿತ; ಅನುಕ್ತ; (ವ್ಯಕ್ತವಾಗಿ ಹೇಳದಿದ್ದರೂ) ಮೌನದಿಂದ ಸೂಚಿಸುವ, ಅಭಿಪ್ರಾಯವಾಗುವ, ಪ್ರಕಟವಾಗುವ; ಪ್ರಕಟವಾಗಿ ಹೇಳದ: tacit consent ಅನುಕ್ತ ಒಪ್ಪಿಗೆ; ಮೌನ(ಸೂಚಿತ) ಸಮ್ಮತಿ.

    tacitly
    ಕ್ರಿಯಾವಿಶೇಷಣ
    ಮೌನವಾಗಿ; ಅನುಕ್ತವಾಗಿ.

    taciturn
    ಗುಣವಾಚಕ
    ಹೆಚ್ಚು ಮಾತಿಲ್ಲದ; ಮೌನದ; ಮಿತಭಾಷಿ.

    taciturnity
    ನಾಮವಾಚಕ
    ಮಿತಭಾಷಿತ್ವ; ಹೆಚ್ಚು ಮಾತಿಲ್ಲದಿರುವುದು.

    tack
    ನಾಮವಾಚಕ ಪದಗುಚ್ಛ
  • ತಟ್ಟು ಮೊಳೆ; ಗುಬ್ಬಿಮೊಳೆ; ಚಪ್ಪಟೆ ತಲೆಯ ಚಿಕ್ಕ ಮೊಳೆ.
  • (ಅಮೆರಿಕನ್‍ ಪ್ರಯೋಗ) = drawing-pin.
  • = thumbtack.
  • = brass tacks.
  • ಟಾಕು ಹೊಲಿಗೆ; ದಾಟು ಹೊಲಿಗೆ; ಹೊಲಿಗೆಯಲ್ಲಿ ತಾತ್ಕಾಲಿಕವಾಗಿ ಹಾಕುವ ದಾಟು ಹೊಲಿಗೆಗಳು.
  • (ನೌಕಾಯಾನ)
    1. ಕೆಲವು ಹಾಯಿಗಳ ಮೂಲೆ (ಬಿಗಿಯುವ) ಹಗ್ಗ.
    2. ಹಾಯಿಯನ್ನು ಬಿಗಿಯುವ ಮೂಲೆ.
  • (ಹಾಯಿಗಳ ಸ್ಥಾನ ಮತ್ತು ಗಾಳಿಯ ದಿಕ್ಕನ್ನು ಅವಲಂಬಿಸಿರುವ) ಹಡಗಿನ ಚಲನೆಯ ದಿಕ್ಕು.
  • (ಹಡಗು ಚಲಿಸುವಾಗ ಪಕ್ಕ ಗಾಳಿ ಮೊದಲಾದವುಗಳ ಪ್ರಯೋಜನ ಪಡೆಯಲು, ಮುಖ್ಯವಾಗಿ ಎಡಕ್ಕೂ ಬಲಕ್ಕೂ ಪರ್ಯಾಯವಾಗಿ, ಮಾಡುವ ತಾತ್ಕಾಲಿಕ) ದಿಕ್ಕು ಬದಲಾವಣೆ.
  • ಧೋರಣೆ; ಮಾರ್ಗ; ಕಾರ್ಯ–ರೀತಿ, ವಿಧಾನ, ನೀತಿ: we must change our tack ನಾವು ನಮ್ಮ ಕಾರ್ಯರೀತಿಯನ್ನು ಬದಲಾಯಿಸಬೇಕು.
  • (ಬ್ರಿಟಿಷ್‍ ಪ್ರಯೋಗ) ಅನುಬಂಧ; ಪಾರ್ಲಿಮೆಂಟಿನಲ್ಲಿ ತರುವ ಮಸೂದೆಗೆ ಹೊಸದಾಗಿ ಸೇರಿಸುವ ಅಂಶ ಯಾ ಕಲಂ.
  • ವಾರ್ನಿಷ್‍ ಮೊದಲಾದವುಗಳ ಅಂಟು ಗುಣ ಯಾ ಸ್ಥಿತಿ.

  • tack
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • (ಮಖಾನ, ಹೆಸರುಪಟ್ಟಿ, ಗುಡಾರ, ಮೊದಲಾದವುಗಳನ್ನು) ತಟ್ಟುಮೊಳೆಯಿಂದ–ಭದ್ರಪಡಿಸು, ಬಿಗಿ, ಕಚ್ಚಿಸು.
  • (ಬಟ್ಟೆಯ ತುಂಡು ಯಾ ಭಾಗಗಳನ್ನು) ಕೂಡಿಸಿ ಟಾಕು ಹಾಕು, ಉದ್ದ ಹೊಲಿಗೆಯಿಂದ ಸೇರಿಸು.
  • ಅನುಬಂಧಿಸು:
    1. ಜೊತೆಗೆ ಅನುಬಂಧವಾಗಿ ಸೇರಿಸು.
    2. (ಬ್ರಿಟಿಷ್‍ ಪ್ರಯೋಗ) ಮಸೂದೆ ಮೊದಲಾದವಕ್ಕೆ (ಹೊಸ ಕಲಂ) ಸೇರಿಸು.

  • tack
    ನಾಮವಾಚಕ
    ಕುದುರೆಯ ಜೀನು, ಸವಾರಿಯ ಸಜ್ಜು, ಮೊದಲಾದವು.

    tack
    ನಾಮವಾಚಕ
  • ಆಹಾರ; ತಿನಿಸು.
  • (ಹೀನಾರ್ಥಕ ಪ್ರಯೋಗ) ಕೆಲಸಕ್ಕೆ ಬಾರದ್ದು; ಹಾಳು ಕಚಡ.


  • logo