ಆಕ್ಷೇಪಿಸು; ಅಡ್ಡಿತೆಗೆ; ಅಸಮ್ಮತಿ–ತೋರು, ಸೂಚಿಸು; ಆಕ್ಷೇಪವೆತ್ತು: I object to being treated like this ನನ್ನ ವಿಷಯದಲ್ಲಿ ಹೀಗೆ ನಡೆದುಕೊಳ್ಳುತ್ತಿರುವುದನ್ನು, ನನಗೆ ತೋರಿಸುತ್ತಿರುವ ಈ ವರ್ತನೆಯನ್ನು ನಾನು ಆಕ್ಷೇಪಿಸುತ್ತೇನೆ. objecting aganist government policies ಸರ್ಕಾರಿ ನೀತಿಗಳ ಬಗ್ಗೆ ಆಕ್ಷೇಪಿಸುತ್ತಾ, ಆಕ್ಷೇಪವೆತ್ತುತ್ತಾ. I object (ಬ್ರಿಟನ್ನಿನ ಹೌಸ್ ಆಹ್ ಕಾಮನ್ಸ್‍ನಲ್ಲಿ ಮಂಡಿಸಿದ ಮಸೂದೆಯನ್ನು ಚರ್ಚಿಸಗೊಡದೆ ಬದಿಗೊತ್ತುವಂತೆ ಮಾಡಲು ಆ ಸಭೆಯ ಸದಸ್ಯನು ಬಳಸುವ ಮಾತು) ನಾನು (ಇದನ್ನು) ಆಕ್ಷೇಪಿಸುತ್ತೇನೆ, ವಿರೋಧಿಸುತ್ತೇನೆ.
(ಒಂದರ ವಿಷಯದಲ್ಲಿ ಲಕ್ಷಣ, ವಾಸ್ತವಾಂಶ, ಮೊದಲಾದವನ್ನು) ಆಕ್ಷೇಪವಾಗಿ ಮುಂದಿಡು, ಒಡ್ಡು: objected that they were kept waiting ತಮ್ಮನ್ನು ಕಾಯಿಸಿದರೆಂದು ಆಕ್ಷೇಪಿಸಿದ.
ಆಕ್ಷೇಪಿಸು; (ಒಂದು ವಿಷಯಕ್ಕೆ ಒಂದು ಗುಣ ಯಾ ವಾಸ್ತವಾಂಶ) ವಿರುದ್ಧವಾಗಿದೆಯೆಂದು ಯಾ ಹಾನಿಕರವಾಗಿದೆಯೆಂದು ಆಪಾದಿಸು, ಎತ್ತಿಹೇಳು.
object language
ನಾಮವಾಚಕ
ಇನ್ನೊಂದು ಭಾಷೆಯ ಮೂಲಕ ವಿವರಿಸಲಾಗುವ ಭಾಷೆ.
(ಕಂಪ್ಯೂಟರ್) ‘ಕಂಪೈಲರ್’ ಯಾ ‘ಅಸೆಂಬ್ಲರ್’ ಮೂಲಕ ‘ಪ್ರೋಗ್ರಾಂ’ ಅನ್ನು ಅನುವಾದಿಸುವ ಭಾಷೆ.
object lens
ನಾಮವಾಚಕ
(ದೃಗ್‍ವಿಜ್ಞಾನ) = object-glass.
object-ball
ನಾಮವಾಚಕ
(ಬಿಲಿಯರ್ಡ್ಸ್ ಆಟದಲ್ಲಿ) ಗುರಿ ಚೆಂಡು; ಆಟಗಾರನು ತನ್ನ ಚೆಂಡಿನಿಂದ ಹೊಡೆಯಲು ಗುರಿಯಿಡುವ ಚೆಂಡು.
object-finder
ನಾಮವಾಚಕ
ದೃಗ್ವಸ್ತು ನಿರ್ದೇಶಕ; ಚಲಫಲಕದ ಸ್ಥಾನವನ್ನು ನಿರ್ದೇಶಿಸುವ ಸಲಕರಣೆ.
object-glass
ನಾಮವಾಚಕ
(ದೃಗ್‍ವಿಜ್ಞಾನ) ವಸ್ತುಕ; ದೂರದರ್ಶಕ , ಸೂಕ್ಷ್ಮದರ್ಶಕ, ಕ್ಯಾಮರ, ಮಾಯಾದೀಪ, ಮೊದಲಾದ ಉಪಕರಣಗಳಲ್ಲಿ ನೋಡಬೇಕಾಗಿರುವ ವಸ್ತುವಿಗೆ ಸಮೀಪವಿರುವ ಲೆನ್ಸ್, ಮಸೂರ ಯಾ ಲೆನ್ಸ್‍ಗಳ ಜೋಡಣೆ.
object-lesson
ನಾಮವಾಚಕ
ವಸ್ತು ಪಾಠ; ಪ್ರದರ್ಶನ ಪಾಠ; ವಸ್ತುವನ್ನು ಪ್ರತ್ಯಕ್ಷವಾಗಿ ಎದುರಿಗೆ ಇಟ್ಟುಕೊಂಡು ಅದರ ವಿಷಯ ಬೋಧಿಸುವುದು, ಪಾಠ ಹೇಳುವುದು.
(ರೂಪಕವಾಗಿ) (ಯಾವುದೇ ತತ್ತ್ವದ ವಿಷಯವಾಗಿ ಮನ ಮುಟ್ಟುವಂಥ) ಪ್ರತ್ಯಕ್ಷ–ನಿದರ್ಶನ, ದೃಷ್ಟಾಂತ.
object-plate
ನಾಮವಾಚಕ
ವಸ್ತು ಫಲಕ; ಸೂಕ್ಷ್ಮದರ್ಶಕದಲ್ಲಿ ವಸ್ತುವನ್ನು ಪರೀಕ್ಷಿಸಲು ಅದನ್ನಿಡುವ ಫಲಕ.
object-staff
ನಾಮವಾಚಕ
ಮಟ್ಟಗೋಲು; ಮೋಜಣಿದಾರನ ಮಟ್ಟ ನೋಡುವ ಸಲಕರಣೆ.
objectification
ನಾಮವಾಚಕ
ವಿಷಯೀಕರಣ; ಇಂದ್ರಿಯಕ್ಕೆ ವಿಷಯವಾಗಿಸುವುದು; ಇಂದ್ರಿಯಗೋಚರವಾಗಿಸುವುದು; ಇಂದ್ರಿಯಕ್ಕೆ ಗ್ರಾಹ್ಯವಾಗುವಂತೆ ಮಾಡುವುದು. ನಿರೂಪಿಸುವುದು.