logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

easeful
ಗುಣವಾಚಕ
(ಪ್ರಾಚೀನ ಪ್ರಯೋಗ)
  • ಸುಖವಾದ; ಹಿತವಾದ; ಹಾಯಾದ.
  • ಆರಾಮದ; ವಿಶ್ರಾಂತಿಯ; ವಿರಾಮದ; ಬಿಡುವಿನ.
  • ಆಲಸ್ಯದ; ಜಡ; ಸೋಮಾರಿಯಾದ; ಆಲಸ.

  • easefully
    ಕ್ರಿಯಾವಿಶೇಷಣ
    (ಪ್ರಾಚೀನ ಪ್ರಯೋಗ)
  • ಸುಖವಾಗಿ; ಹಾಯಾಗಿ; ಹಿತವಾಗಿ.
  • ಆರಾಮವಾಗಿ; ಬಿಡುವಾಗಿ; ವಿಶ್ರಾಂತಿಕರವಾಗಿ.
  • ಆಲಸ್ಯದಿಂದ; ಸೋಮಾರಿತನದಿಂದ.

  • easefulness
    ನಾಮವಾಚಕ
    (ಪ್ರಾಚೀನ ಪ್ರಯೋಗ)
  • ಸುಖಕರವಾಗಿರುವುದು; ಹಾಯಾಗಿರುವುದು.
  • ಆರಾಮ; ವಿಶ್ರಾಂತಿ.
  • ಜಡತೆ; ಆಲಸ್ಯ; ಸೋಮಾರಿತನ.

  • easel
    ನಾಮವಾಚಕ
    ಚಿತ್ರಾಧಾರ; ಚಿತ್ರನಿಲುವು; ಚಿತ್ರ, ಕಪ್ಪುಹಲಗೆ, ಮೊದಲಾದವಕ್ಕೆ ಆಧಾರವಾಗಿರುವ, ಸಾಮಾನ್ಯವಾಗಿ ಮರದ ಚೌಕಟ್ಟು.

    easeless
    ಗುಣವಾಚಕ
    ಬಿಡುವಿಲ್ಲದ ಅವಿಶ್ರಾಂತ; ಅವಿರತ; ಎಡೆಬಿಡದ.

    easement
    ನಾಮವಾಚಕ
    (ನ್ಯಾಯಶಾಸ್ತ್ರ) ಅನುಭೋಗದ ಹಕ್ಕು; ಮಾಮೂಲು ಹಕ್ಕು; ಒಬ್ಬನಿಗೆ ಇನ್ನೊಬ್ಬರ ಆಸ್ತಿ, ಜಮೀನು, ಅದರಲ್ಲಿರುವ ದಾರಿ, ಮೊದಲಾದವುಗಳ ಮೇಲಿರುವ ಹಕ್ಕು.
  • (ಪ್ರಾಚೀನ ಪ್ರಯೋಗ) ಆನುಷಂಗಿಕ ಕಟ್ಟಡ; ಪುರವಣಿ ಕಟ್ಟಡ; (ಮುಖ್ಯಕಟ್ಟಡಕ್ಕೆ ಸೇರಿರುವಂತೆ ಕಟ್ಟಿರುವ) ಗುಡಿಸಲು ಮೊದಲಾದ ಹೆಚ್ಚಿನ ಕಟ್ಟಡ.
  • (ಪ್ರಾಚೀನ ಪ್ರಯೋಗ) (ಬಿಕಟ್ಟು, ವೈಷಮ್ಯ, ಮೊದಲಾದವುಗಳ) ಉಪಶಮನ; ಪರಿಹಾರ; ನಿವಾರಣೆ: an easement of international tension ಅಂತರರಾಷ್ಟ್ರೀಯ ಬಿಕ್ಕಟ್ಟಿನ ಪರಿಹಾರ.

  • easily
    ಕ್ರಿಯಾವಿಶೇಷಣ
  • ಹಾಯಾಗಿ; ಅನಾಯಾಸವಾಗಿ: he lives easily ಅವನು ಅನಾಯಾಸವಾಗಿ ಜೀವಿಸುತ್ತಾನೆ.
  • ಸಲೀಸಾಗಿ; ಸರಾಗವಾಗಿ; ಧಾರಾಳವಾಗಿ: he speaks easily ಅವನು ಸರಾಗವಾಗಿ ಮಾತನಾಡುತ್ತಾನೆ.
  • ಸುಲಭವಾಗಿ; ಕಷ್ಟವಿಲ್ಲದೆ: he solves the problem easily ಸಮಸ್ಯೆಯನ್ನು ಅವನು ಸುಲಭವಾಗಿ ಬಗೆಹರಿಸುತ್ತಾನೆ.
  • ನಿಜಕ್ಕೂ; ನಿಸ್ಸಂದೇಹವಾಗಿ: he is easily the best boy ನಿಜಕ್ಕೂ ಅವನೇ ಎಲ್ಲರಿಗಿಂತ ಉತ್ತಮ ಹುಡುಗ.

  • easiness
    ನಾಮವಾಚಕ
  • ಸುಖಕರತೆ; ಹಿತ; ನೆಮ್ಮದಿ; ಅನುಕೂಲತೆ: easiness of the journey ಪ್ರಯಾಣದ ಸುಖಕರತೆ.
  • ದುತ್ವ; ಕೋಮಲ, ಕರುಣ — ಸ್ವಭಾವ: easiness of temper ಕೋಮಲ ಮನೋತ್ತಿ.
  • ಅಕ್ಲಿಷ್ಟತೆ; ಸರಳತೆ: easiness of style ಶೈಲಿಯ ಸರಳತೆ.
  • ಉಪೇಕ್ಷೆ; ಔದಾಸೀನ್ಯ; ಅನಾಸ್ಥೆ; ತಾಟಸ್ಥ್ಯ: foolish easiness ದಡ್ಡತನದ ಉಪೇಕ್ಷೆ.

  • east
    ಕ್ರಿಯಾವಿಶೇಷಣ ಪದಗುಚ್ಛ
  • ಮೂಡಲಾಗಿ; ಮೂಡಣಕ್ಕೆ; ಮೂಡಲಿಗೆ; ಪೂರ್ವಾಭಿಮುಖವಾಗಿ; ಪೂರ್ವ ದಿಕ್ಕಿನಲ್ಲಿ; ಪೂರ್ವಕ್ಕೆ: went east ಪೂರ್ವದಿಕ್ಕಿನಲ್ಲಿ ಹೋದ.
  • (ಯಾವುದೇ ಒಂದರಿಂದ) ಮೂಡಲಾಗಿ; ಪೂರ್ವಕ್ಕೆ.

  • east
    ನಾಮವಾಚಕ ಪದಗುಚ್ಛ
  • ಮೂಡಲು; ಪೂರ್ವ (ದಿಕ್ಕು).
  • (East) ಪ್ರಾಚ್ಯ; ಪೌರಸ್ತ್ಯ ಯಾ ಪೂರ್ವ ದೇಶಗಳು; ಯೂರೋಪಿಗೆ ಪೂರ್ವದಿಕ್ಕಿನಲ್ಲಿರುವ ದೇಶಗಳು.
  • (ಚರ್ಚಿನ ಕಟ್ಟಡ ಪೂರ್ವಾಭಿಮುಖವಾಗಿರಲಿ, ಇಲ್ಲದಿರಲಿ) ಪೂಜಾವೇದಿಕೆಯಿರುವ ಚರ್ಚಿನ ತುದಿ, ಭಾಗ.
  • (ದೇಶದ ಯಾ ಪಟ್ಟಣದ) ಪೂರ್ವಭಾಗ; ಮೂಡಲ ಭಾಗ.
  • ಪೂರ್ವ ಯೂರೋಪಿನ ಕಮ್ಯುನಿಸ್ಟ್‍ ದೇಶಗಳು.
  • (ಚರಿತ್ರೆ) ಅರ್ವಾಚೀನ ರೋಮನ್‍ ಸಾಮ್ರಾಜ್ಯದ ಪೂರ್ವಭಾಗ; ಪೂರ್ವ ರೋಮ್‍ ಸಾಮ್ರಾಜ್ಯ.
  • ‘ಪೂರ್ವ’ (ವೆಂದು ಪರಿಗಣಿತವಾಗಿರುವ ಸ್ಥಾನದಲ್ಲಿ ಕುಳಿತುಕೊಳ್ಳುವ) ಇಸ್ಪೀಟು ಆಟಗಾರ.


  • logo