logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

cache
ನಾಮವಾಚಕ
  • (ದೇಶಶೋಧಕರು, ಬೀಡುಬಿಟ್ಟಿರುವವರು, ನೆಲಸಿಗರು, ಮೊದಲಾದವರು ನಿಧಿ, ಆಹಾರಧಾನ್ಯ, ಮದ್ದುಗುಂಡು ಮೊದಲಾದವನ್ನು ಬಚ್ಚಿಡುವ, ಸಾಮಾನ್ಯವಾಗಿ ನೆಲದಡಿಯ) ರಹಸ್ಯಸ್ಥಳ; ಗುಟ್ಟುಕುಳಿ; ಗೋಪ್ಯಸ್ಥಾನ; ಸುರಂಗ; ಅವಿತಿಡುವ ಸ್ಥಳ.
  • ಬಚ್ಚಿಟ್ಟದ್ದು; ಹೂತಿಟ್ಟದ್ದು; ಅವಿತಿಟ್ಟದ್ದು; ಮರೆಮಾಡಿರುವ ನಿಧಿ, ಆಹಾರ ಮೊದಲಾದವು.

  • cache
    ಸಕರ್ಮಕ ಕ್ರಿಯಾಪದ
    (ಗೋಪ್ಯಸ್ಥಾನದಲ್ಲಿ) ಬಚ್ಚಿಡು; ಹೂತಿಡು; ಅವಿತಿಡು; ಮರೆಮಾಡು.

    cachectic
    ಗುಣವಾಚಕ
    (ದೀರ್ಘಕಾಲದ ಕಾಯಿಲೆಯಿಂದ ದೇಹ ಯಾ ಮನಸ್ಸು) ಸೊರಗಿದ; ನಿಶ್ಯಕ್ತವಾದ; ನಿತ್ರಾಣವಾದ; ನಿರ್ಬಲವಾದ; ಅಶಕ್ತ; ಶಕ್ತಿಹೀನ; ದುರ್ಬಲ.

    cachectical
    ಗುಣವಾಚಕ
    =cachectic.

    cachet
    ನಾಮವಾಚಕ
  • (ಕಾಗದ ಯಾ ದಾಖಲೆಗಳಿಗೆ ಹಾಕುವ) ಸೀಲು; ಛಾಪು; ಮುದ್ರೆ; ಅಧಿಕೃತ ಗುರುತು.
  • (ರೂಪಕವಾಗಿ) ವೈಶಿಷ್ಟ್ಯ; ಕುರುಹು; ಗುರುತು; ವಿಶಿಷ್ಟ ಲಕ್ಷಣ.
  • ಆಂತರಿಕ ಪ್ರಮಾಣ; ಸಾಚಾ ಎಂಬುದರ ಸಮರ್ಥನೆಯ ಆಧಾರ.
  • ಘನತೆ; ಪ್ರತಿಷ್ಠೆ; ಗೌರವದ ಸ್ಥಾನಮಾನ.
  • (ವೈದ್ಯಶಾಸ್ತ್ರ) ಕೋಶಗುಳಿಗೆ; ಕ್ಯಾಪ್ಸ್ಯೂಲು; ಮೇಲೆ ಜೆಲಟಿನ್ನಿನ ಹೊದಿಕೆಯಿರುವ ಗುಳಿಗೆ.

  • cachet
    ಸಕರ್ಮಕ ಕ್ರಿಯಾಪದ
    (ಲಕೋಟೆಯ ಮೇಲೆ) ಮುದ್ರೆಒತ್ತು; ಠಸ್ಸೆಹಾಕು; ಅಚ್ಚೊತ್ತು.

    cachexia
    ನಾಮವಾಚಕ
    = cachexy.

    cachexy
    ನಾಮವಾಚಕ
    (ರೋಗಶಾಸ್ತ್ರ) (ದೀರ್ಘಕಾಲದ ಕ್ಷಯ, ಕ್ಯಾನ್ಸರ್‍ಗಳಂಥ ರೋಗಗಳಲ್ಲಿ, ದೇಹದ ಯಾ ಮನಸ್ಸಿನ) ನಿತ್ರಾಣ; ನಿಶ್ಯಕ್ತಿ; ನಿರ್ಬಲತೆ; ಸೊರಗಿ ಹೋಗಿರುವಿಕೆ.

    cachinnate
    ಅಕರ್ಮಕ ಕ್ರಿಯಾಪದ
    (ಸಾಹಿತ್ಯಕ) ಗಟ್ಟಿಯಾಗಿ ನಗು; ಗಹಗಹಿಸಿ ನಗು.

    cachinnation
    ನಾಮವಾಚಕ
    ಗಟ್ಟಿನಗು; ಗಹಗಹಿಸಿ ನಗುವಿಕೆ; ಅಟ್ಟಹಾಸ.


    logo