logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

OPEC
ಸಂಕ್ಷಿಪ್ತ
Organization of Petroleum Exporting Countries.

open
ಗುಣವಾಚಕ ಪದಗುಚ್ಛ
  • ತೆರೆದ; ತೆರಪಿರುವ; ಮುಕ್ತ; ಮುಚ್ಚಿಲ್ಲದ; ತಡೆಗಟ್ಟಿಲ್ಲದ; ಖುಲ್ಲಾ; ಪ್ರವೇಶಕ್ಕೆ, ಸಂಚಾರಕ್ಕೆ ಯಾ ಹಾದಿಗೆ–ಅವಕಾಶವಿರುವ: open passage ಮುಕ್ತ, ತೆರೆದ–ಮಾರ್ಗ.
  • (ಕೊಠಡಿ, ಮೈದಾನ ಯಾ ಇತರ ಪ್ರದೇಶ) ತೆರೆದಿರುವ; ಮುಕ್ತ; ಆವರಣವಿಲ್ಲದ; ಸುತ್ತುಗಟ್ಟಿಲ್ಲದ; ತಡೆಯಿಲ್ಲದ; ಅಡ್ಡಿಯಿಲ್ಲದ: the open road ಮುಕ್ತವಾದ ರಸ್ತೆ.
  • (ಡಬ್ಬ, ಧಾರಕ, ಮೊದಲಾದವುಗಳ ವಿಷಯದಲ್ಲಿ) ಮುಚ್ಚಿಲ್ಲದ; ತೆರೆದಿರುವ; ಮುಚ್ಚಳ ಹಾಕದ.
  • ತೆರೆದ; ಮರೆ ತೆಗೆದಿರುವ; ಮುಚ್ಚಿಲ್ಲದ; ಅನಾವೃತ: open carriage ಚಾವಣಿಯಿಲ್ಲದ ಬಂಡಿ; ಬೋಳುಗಾಡಿ. open drain ತೆರೆದ ಚರಂಡಿ. open wound (ಪಟ್ಟಿ ಮೊದಲಾದವುಗಳಿಂದ) ಮುಚ್ಚಿಲ್ಲದ ಗಾಯ.
  • (ಆಟ) (ಗೋಲಿನ ಬಾಯಿ ಯಾ ಇತರ ಆಕ್ರಮಣದ ವಸ್ತುವಿನ ವಿಷಯದಲ್ಲಿ) ಅರಕ್ಷಿತ; ಆಕ್ರಮಣಕ್ಕೆ ತುತ್ತಾಗುವ.
  • ಮುಚ್ಚುಮರೆಯಿಲ್ಲದ; ಪ್ರಕಟ; ಬಹಿರಂಗ: open contempt ಬಹಿರಂಗ ತಿರಸ್ಕಾರ. open scandal ಬಹಿರಂಗ ಪುಕಾರು. open hostilities ಪ್ರಕಟ ಹೋರಾಟಗಳು, ಕದನಗಳು.
  • ತೆರೆದ; ಬಿಚ್ಚಿದ; ಹರಡಿದ; ಹರಡಿಕೊಂಡಿರುವ; ಹರಡಿರುವ: open book ತೆರೆದ ಪುಸ್ತಕ. had the map open on the table ಮೇಜಿನ ಮೇಲೆ ಭೂಪಟವನ್ನು ತೆರೆದಿಟ್ಟಿದ್ದ, ಬಿಚ್ಚಿಟ್ಟ.
  • (ಬಟ್ಟೆಯ ವಿಷಯದಲ್ಲಿ) ಒತ್ತಾಗಿಲ್ಲದ, ಜಾಳಾಗಿರುವ; ನಡುವೆ ಅಂತರಗಳಿರುವ.
  • (ವ್ಯಕ್ತಿಯ ವಿಷಯದಲ್ಲಿ) ಮುಚ್ಚುಮರೆಯಿಲ್ಲದೆ; ಬಿಚ್ಚು ಮನಸ್ಸಿನ; ಸರಳ ಹೃದಯದ; ತೆರೆದ ಮನಸ್ಸಿನ; ಭಾವನೆಗಳನ್ನು ಇತರರಿಗೆ ತಿಳಿಸಬಯಸುವ.
  • (ಮನಸ್ಸಿನ ವಿಷಯದಲ್ಲಿ) ತೆರೆದ; ಮುಕ್ತ; ಹೊಸಭಾವಗಳಿಗೆ ತೆರೆದ; ಪೂರ್ವಗ್ರಹವಿಲ್ಲದ; ಪೂರ್ವನಿರ್ಧಾರವಿಲ್ಲದ.
  • (ಮುಖದ ವಿಷಯದಲ್ಲಿ) ಮುಗ್ಧ; ನಿಷ್ಟಪಟ; ಅಕೃತ್ರಿಮವಾಗಿ ಕಾಣುವ.
  • (ಪ್ರದರ್ಶನ, ಅಂಗಡಿ, ಮೊದಲಾದವುಗಳ ವಿಷಯದಲ್ಲಿ) ತೆರೆದ; ಮುಕ್ತ; ಅನಿರ್ಬಂಧ; ಗ್ರಾಹಕರಿಗೆ ತೆರೆದಿರುವ; ವ್ಯಾಪಾರಕ್ಕೆ ತೆರೆದಿರುವ, ಸಿದ್ಧವಾಗಿರುವ: the exhibition is now open ಈಗ ಪ್ರದರ್ಶನ ಪ್ರೇಕ್ಷಕರಿಗೆ ತೆರೆದಿದೆ. shop is open at such hours ಇಂಥ ಗಂಟೆಗಳಲ್ಲಿ ಅಂಗಡಿ ತೆರೆದಿರುತ್ತದೆ.
  • (ಸಭೆಯ ವಿಷಯದಲ್ಲಿ) ಮುಕ್ತ; ಸಾರ್ವಜನಿಕ; ಸರ್ವರಿಗೂ ಪ್ರವೇಶವಿರುವ; ಎಲ್ಲರಿಗೂ ಪ್ರವೇಶಾವಕಾಶವಿರುವ; ಕೇವಲ ಸದಸ್ಯರೂ ಮೊದಲಾದವರಿಗೆ ಸೀಮಿತವಾಗಿರದೆ ಎಲ್ಲರೂ ಬರಬಹುದಾದ.
    1. (ಪಂದ್ಯ, ಸ್ಪರ್ಧೆ, ವಿದ್ಯಾರ್ಥಿವೇತನ, ಮೊದಲಾದವುಗಳ ವಿಷಯದಲ್ಲಿ) ಮುಕ್ತ; ಸಾರ್ವಜನಿಕ; ಅನಿರ್ಬಂಧಿತ; ಎಲ್ಲರಿಗೂ ಅವಕಾಶವಿರುವ, ಪ್ರವೇಶವಿರುವ; ಯಾವುದೇ ನಿರ್ಬಂಧವಿಲ್ಲದ: open scholarship ಎಲ್ಲರಿಗೂ ಅವಕಾಶವಿರುವ ಸ್ಪರ್ಧೆಯಲ್ಲಿ ಗೆದ್ದು ಗಳಿಸುವ ವಿದ್ಯಾರ್ಥಿವೇತನ. race is open to all ಸ್ಪರ್ಧೆಗೆ ಎಲ್ಲರಿಗೂ ಪ್ರವೇಶವುಂಟು; ಸ್ಪರ್ಧೆ ಎಲ್ಲರಿಗೂ ತೆರೆದಿದೆ.
    2. (ಕ್ರೀಡಾಪಟು, ವಿದ್ಯಾರ್ಥಿ, ಮೊದಲಾದವರ ವಿಷಯದಲ್ಲಿ) ಮುಕ್ತ ಸ್ಪರ್ಧೆಯಲ್ಲಿ ಗೆದ್ದಿರುವ: open champion ಸರ್ವವಿಜಯಿ; ಎಲ್ಲರಿಗೂ ಅವಕಾಶವಿರುವ, ಯಾವುದೇ ನಿರ್ಬಂಧವಿಲ್ಲದ, ಸ್ಪರ್ಧೆಯಲ್ಲಿ ಗೆದ್ದವನು; ಸಾರ್ವಜನಿಕ ಸ್ಪರ್ಧೆಯಲ್ಲಿ ಜಯಪಡೆದವನು.
  • (ಸರ್ಕಾರದ ವಿಷಯದಲ್ಲಿ) ಮುಕ್ತ; ತೆರೆದ; ಸಾರ್ವಜನಿಕ ವಿಚಾರಣೆ, ಟೀಕೆ, ಮೊದಲಾದವುಗಳಿಗೆ ಸ್ಪಂದಿಸುವ.
  • (ಬಾಯಿಯ ವಿಷಯದಲ್ಲಿ) ತೆರೆದ; ಬಿಟ್ಟ; (ಮುಖ್ಯವಾಗಿ ಹೆಡ್ಡತನ ಯಾ ಆಶ್ಚರ್ಯ ತೋರಿಸುವಾಗ) ತೆರೆದ ಬಾಯಿಯ.
  • (ಕಿವಿಗಳ ಯಾ ಕಣ್ಣುಗಳ ವಿಷಯದಲ್ಲಿ) ತೆರೆದ; ಆಸಕ್ತಿಯಿಂದ ಗಮನಿಸುವ: open eared ತೆರೆದ ಕಿವಿಗಳುಳ್ಳ.
  • (ಸಂಗೀತ)
    1. (ತಂತಿಯ ವಿಷಯದಲ್ಲಿ) ಇಡೀ ಉದ್ದಕ್ಕೂ ಮಿಡಿಯಲು ಬಿಟ್ಟ.
    2. (ಊದು ವಾದ್ಯದ ವಿಷಯದಲ್ಲಿ) ಎರಡೂ ತುದಿಗಳಲ್ಲಿ ತೆರೆದ, ಮುಚ್ಚದ.
    3. (ಸ್ವರದ ವಿಷಯದಲ್ಲಿ) ಮುಕ್ತ; ಎರಡೂ ತುದಿ ತೆರೆದ ಸುಷಿರವಾದ್ಯದಲ್ಲಿ ಯಾ ತಂತಿವಾದ್ಯದಲ್ಲಿ ಬೆರಳಿನಿಂದ ಮುಟ್ಟದೆ ಯಾ ಕೊಡತಿ, ತಿರುಗು ಬಿರಟೆ, ಉಜ್ಜು ಬಿರಟೆಯನ್ನೂ ಬಳಸದೆ ಉಂಟುಮಾಡಿದ.
  • (ವಿದ್ಯುತ್‍ ಮಂಡಲದ ವಿಷಯದಲ್ಲಿ) ಅಪೂರ್ಣ; ತೆರೆದ; ವಿಚ್ಛಿನ್ನ; ಹಾದುಹೋಗುವ ಹಾದಿಯಲ್ಲಿ ಕಡಿದಿರುವ, ತೆರೆದಿರುವ, ಸಂಪೂರ್ಣವಾಗದಿರುವ.
  • (ಕರುಳಿನ ವಿಷಯದಲ್ಲಿ) ಹೊಟ್ಟೆಕಟ್ಟಿಲ್ಲದ; ಮಲಬದ್ಧತೆಯಿಲ್ಲದಿರುವ.
  • (ವಾಪಸು ಪ್ರಯಾಣದ ಟಿಕೆಟ್ಟಿನ ವಿಷಯದಲ್ಲಿ) ತೆರೆದ ಟಿಕೆಟ್ಟಿನ; ಹಿಂದಿರುಗುವ ಪ್ರಯಾಣವನ್ನು ಇಂಥದೇ ದಿನ ಮಾಡಬೇಕೆಂದು ಗೊತ್ತುಮಾಡಿರದ, ನಿರ್ಬಂಧವಿಲ್ಲದ.
  • (ಚೆಕ್ಕಿನ ವಿಷಯದಲ್ಲಿ) ಮುಕ್ತ; ತೆರೆದ; ಕ್ರಾಸ್‍ ಮಾಡಿಲ್ಲದ; ಅಡ್ಡಗೆರೆ ಹಾಕಿಲ್ಲದ; ಬ್ಯಾಂಕಿನ ಖಾತೆಯೊಂದಕ್ಕೆ ಸಲ್ಲಿಸಿ ಹಣಪಡೆಯಬೇಕೆಂಬ ನಿರ್ಬಂಧವಿಲ್ಲದ; ಬ್ಯಾಂಕಿಗೆ ಸಲ್ಲಿಸಿ ನೇರವಾಗಿ ಹಣ ಪಡೆಯಬಹುದಾದ.
  • (ದೋಣಿಯ ವಿಷಯದಲ್ಲಿ) ದಕ್ಕೆಯಿಲ್ಲದ.
  • (ನದಿ ಯಾ ಬಂದರಿನ ವಿಷಯದಲ್ಲಿ) ಹಿಮವಿಲ್ಲದ; ನೀರ್ಗಲ್ಲು ಮುಚ್ಚಿರದ; ನೀರ್ಗಲ್ಲು ಮುಚ್ಚಿಲ್ಲದೆ ಮುಕ್ತವಾಗಿರುವ, ತೆರಪಾಗಿರುವ.
  • (ಹವಾಮಾನದ ಯಾ ಚಳಿಗಾಲದ ವಿಷಯದಲ್ಲಿ) ಹಿಮವಿಲ್ಲದ; ಮಂಜಿಲ್ಲದ.
  • (ಧ್ವನಿವಿಜ್ಞಾನ)
    1. (ಸ್ವರದ ವಿಷಯದಲ್ಲಿ) ವಿವೃತ; ಸ್ವಲ್ಪ ಹೆಚ್ಚಾಗಿಯೇ ಬಾಯಿ ತೆರೆದು ಉಚ್ಚರಿಸುವ.
    2. (ಅಕ್ಷರದ ವಿಷಯದಲ್ಲಿ) ಮುಕ್ತ; ಸ್ವರಾಂತವಾದ.
  • (ಪಟ್ಟಣ, ನಗರ, ಮೊದಲಾದವುಗಳ ವಿಷಯದಲ್ಲಿ) ಅರಕ್ಷಿತ; ದಾಳಿಯ ವಿರುದ್ಧ ರಕ್ಷಣೆಯಿಲ್ಲದ.
  • ತೆರೆದ; ಅರಳಿದ; ವಿಕಸಿತ: open flower ಅರಳಿದ ಹೂವು.
  • ತೂತುಗಳಿರುವ; ರಂಧ್ರಗಳುಳ್ಳ; ಸರಂಧ್ರ.
  • ಅನಿರ್ಣೀತ; ನಿರ್ಣಯವಾಗದ; ತೀರ್ಮಾನವಾಗದ: several open questions ಅನೇಕ ನಿರ್ಣಯವಾಗದ ಪ್ರಶ್ನೆಗಳು.
  • (ಪಶುವರ್ಧನೆ) (ಹೆಣ್ಣು ಪ್ರಾಣಿಯ ವಿಷಯದಲ್ಲಿ) ಗಬ್ಬವಾಗಿರದ; ತೆನೆಯಾಗಿರದ.
  • (ಮುದ್ರಣ)
    1. (ಅಚ್ಚಿನ ಮೊಳೆಯ ವಿಷಯದಲ್ಲಿ) ರೇಖಾಕಾರದ.
    2. (ಅಚ್ಚಾದ ವಸ್ತುವಿನ ವಿಷಯದಲ್ಲಿ) ವಿಶಾಲ ಅಂತರವಿರುವ.
  • (ಲೆಕ್ಕದ ವಿಷಯದಲ್ಲಿ) ಅಪೂರ್ಣ; ಇನ್ನೂ ಸರಿದೂಗಿಸದ ಯಾ ಸರಿಹೊಂದಿಸದ; ತಾಳೆ ಮಾಡದ.

  • open
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ
  • ತೆರೆ; ತೆಗೆ; ಅಗಲವಾಗಿ ಬಿಚ್ಚು.
  • (ಮುಚ್ಚಿರುವ, ಚಿಲಕ ಹಾಕಿರುವ ಬಾಗಿಲು ಮೊದಲಾದವನ್ನು) ತೆರೆ; ತೆಗೆ: opened the door ಬಾಗಿಲನ್ನು ತೆರೆದ. opened the box ಪೆಟ್ಟಿಗೆಯನ್ನು ತೆಗೆದ.
  • (ಡಬ್ಬ ಮೊದಲಾದವುಗಳ ಒಳಗಿರುವುದನ್ನು ತೆಗೆಯಲು ಅದರ) ಮುಚ್ಚಳ, ಬಿರಡೆ, ಮೊದಲಾದವನ್ನು ತೆಗೆ.
  • (ಉದ್ಯೋಗ, ಅಂಗಡಿ, ಖಾತೆ, ಚಳವಳಿ, ಮೊದಲಾದವನ್ನು) ಸ್ಥಾಪಿಸು; ಹೂಡು; ತೆರೆ; ಪ್ರಾರಂಭಿಸು; ಆರಂಭಿಸು.
  • (ನ್ಯಾಯಾಲಯದಲ್ಲಿ ನ್ಯಾಯವಾದಿಯ ವಿಷಯದಲ್ಲಿ) ಮೊಕದ್ದಮೆಯನ್ನು ಪ್ರಾರಂಭಿಸು; ಸಾಕ್ಷಿಗಳ ವಿಚಾರಣೆಗೆ ಮೊದಲು ಪೀಠಿಕಾರೂಪದ ಹೇಳಿಕೆ ಕೊಡು, ಪ್ರಾಸ್ತಾವಿಕ ಹೇಳಿಕೆ ನೀಡು.
  • (ನಕ್ಷೆ, ವೃತ್ತಪತ್ರಿಕೆ, ಮೊದಲಾದವನ್ನು) ಹರಡು; ಬಿಚ್ಚು.
  • (ತನ್ನ ಉಪಾಯ, ಎಣಿಕೆ, ಯುಕ್ತಿ, ಹಂಚಿಕೆ, ಭಾವನೆಗಳು, ಮೊದಲಾದವನ್ನು) ಹೊರಗೆಡಹು; ತಿಳಿಸು; ಬಯಲು ಮಾಡು; ಪ್ರಕಟಿಸು; ಬಹಿರಂಗಪಡಿಸು.
  • (ಮನಸ್ಸು, ಹೃದಯ, ಮೊದಲಾದವನ್ನು) ತೆರೆ; ವಿಶಾಲಗೊಳಿಸು; ಉದಾರಗೊಳಿಸು; ಅನುಕಂಪಯುಕ್ತವಾಗಿ ಯಾ ವಿವೇಕಯುತವಾಗಿ ಆಗುವಂತೆ ಮಾಡು.
  • (ಕಟ್ಟಡ ಮೊದಲಾದವನ್ನು) ಉದ್ಘಾಟಿಸು; ತೆರೆ; ಪೂರ್ಣವಾಗಿದೆ ಮತ್ತು ಬಳಕೆಯಲ್ಲಿದೆ ಎಂದು ಘೋಷಿಸು, ಸಾರು.
  • (ವ್ಯಾಪಾರ, ಅಂಗಡಿ, ಖಾತೆ, ಆಟದ ಸರದಿ, ಹರಾಜಿನಲ್ಲಿ ಬೆಲೆ, ಚರ್ಚೆ, ಪ್ರಚಾರ, ಅಧಿವೇಶನ, ದಾಳಿ, ಕಾರ್ಯಾಚರಣೆ, ಮೊದಲಾದವನ್ನು) ಪ್ರಾರಂಭಿಸು; ಶುರುಮಾಡು; ಉದ್ಘಾಟಿಸು: open the debate ಚರ್ಚೆ ಪ್ರಾರಂಭಿಸು; ಚರ್ಚೆಯಲ್ಲಿ ಮೊದಲನೆಯ ಭಾಷಣಕಾರನಾಗು. open the parliament ಸಂಸತ್ತನ್ನು ವಿಧಿವತ್ತಾಗಿ ಪ್ರಾರಂಭಿಸು, ಉದ್ಘಾಟಿಸು.
  • (ನೇಗಿಲು ಮೊದಲಾದವುಗಳಿಂದ ನೆಲವನ್ನು) ಬಗೆ; ಉತ್ತು; ಉಳು; ಸಡಿಲಿಸು.
  • ಹೊಟ್ಟೆ ಕಳೆಸು; ಮಲವಿಸರ್ಜನೆ ಮಾಡಿಸು.
  • (ನೌಕಾಯಾನ) ಸ್ಥಾನ ಬದಲಾವಣೆಯಿಂದ ಕಾಣುವಂತೆ ಮಾಡಿಕೊ: take care not to open the obelisk ಮೊನಚು ಸ್ಮಾರಕ ಕಂಬ ಕಾಣಿಸದಂತೆ ನೋಡಿಕೊ.
  • (ದೃಶ್ಯ ಮೊದಲಾದವನ್ನು) ಗೋಚರವಾಗಿಸು; ಕಾಣಿಸುವಂತೆ ಮಾಡು; ಪ್ರಕಟಗೊಳಿಸು (ರೂಪಕವಾಗಿ ಸಹ).
  • (ಅನೇಕವೇಳೆ ಅಕರ್ಮಕ ಕ್ರಿಯಾಪದ ಸಹ) (ಪುಸ್ತಕ ಮೊದಲಾದವನ್ನು) ತೆರೆ; ತೆಗೆದು ನೋಡು: opened at page twelve ಪುಸ್ತಕದ ಹನ್ನೆರಡನೆಯ ಪುಟ ತೆರೆದ.

  • open
    ನಾಮವಾಚಕ ಪದಗುಚ್ಛ
    the open = 3open\((1)\).
  • ಬಯಲು; ಆವರಣ ಹಾಕದ ಪ್ರದೇಶ; ಬಯಲು–ಜಾಗ, ಗಾಳಿ.
  • ಬಹಿರಂಗ; ಸಾರ್ವಜನಿಕ ಗಮನ, ದೃಷ್ಟಿ; ಎಲ್ಲರಿಗೂ ಕಾಣಿಸುವ ದೃಶ್ಯ: into the open ಬಹಿರಂಗಕ್ಕೆ; ಸಾರ್ವಜನಿಕ ದೃಷ್ಟಿಗೆ.
  • ಸಾರ್ವಜನಿಕ, ಎಲ್ಲರಿಗೂ ತೆರೆದ–ಪಂದ್ಯ, ಸ್ಪರ್ಧೆ, ವ್ಯಾಸಂಗ ವೇತನ.

  • open air
    ನಾಮವಾಚಕ
  • ಹೊರಾಂಗಣ; ಬಯಲು; ಆವರಣ ಹಾಕದ, ಕಟ್ಟಡ ಮೊದಲಾದವುಗಳಿಲ್ಲದ, ಮನೆಯ ಹೊರಗಡೆಯ ಪ್ರದೇಶ.
  • ಹೊರಗಾಳಿ; ಬಯಲು ಹವೆ; ಮನೆ ಹೊರಗಿನ ಗಾಳಿ.

  • open boat
    ನಾಮವಾಚಕ
    (ಅಟ್ಟವಿಲ್ಲದ) ತೆರೆದ ದೋಣಿ.

    open book
    ನಾಮವಾಚಕ
    ತೆರೆದ ಪುಸ್ತಕ; ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾದ ವ್ಯಕ್ತಿ.

    Open Brethren
    ನಾಮವಾಚಕ
    (ಬೈಬಲ್‍ ಒಂದನ್ನೇ ಆಧಾರವಾಗುಳ್ಳ) ಮುಕ್ತ ಸಹೋದರರು; ಪ್ಲಿಮತ್‍ ಸಹೋದರ ಸಂಘದ, ಅಷ್ಟು ಹೆಚ್ಚಾಗಿ ಪ್ರತ್ಯೇಕತೆಯ ಮನೋಭಾವವಿರದ, ವರ್ಗ.

    open champion
    ನಾಮವಾಚಕ
    ಸರ್ವವಿಜಯಿ; ಎಲ್ಲರಿಗೂ ಅವಕಾಶವಿರುವ, ಯಾವುದೇ ನಿರ್ಬಂಧವಿಲ್ಲದ ಸ್ಪರ್ಧೆಯಲ್ಲಿ ಗೆದ್ದವನು; ಸಾರ್ವಜನಿಕ ಸ್ಪರ್ಧೆಯಲ್ಲಿ ಜಯ ಪಡೆದವನು.

    open country
    ನಾಮವಾಚಕ
    ಬಯಲು ಪ್ರದೇಶ; ಬಯಲುನಾಡು:
  • ಮನಗಳಿಲ್ಲದ ಯಾ ಬೇಲಿಗಳಿಲ್ಲದ ಪ್ರದೇಶ.
  • ವಿಶಾಲ ದೃಶ್ಯಗಳಿಗೆ ಅವಕಾಶವಿರುವ ಪ್ರದೇಶ.


  • logo