logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lean
ನಾಮವಾಚಕ
  • ಮಾಂಸದ ತೆಳುವಾದ ಭಾಗ.
  • ಓಲು(ವೆ); ವಾಲು; ಒಲವು; ಒಲೆತ; ಓಲಿಕೆ: has a decided lean to the right ನಿಶ್ಚಿತವಾಗಿ ಬಲಕ್ಕೆ ಓಲಿಕೆ ಇದೆ; ಖಂಡಿತವಾಗಿಯೂ ಬಲಕ್ಕೆ ವಾಲಿದೆ.

  • lean
    ಗುಣವಾಚಕ ಪದಗುಚ್ಛ
    lean years ದುರ್ಭಿಕ್ಷದ ವರ್ಷಗಳು; ಬರಗಾಲ; ಬಹಳ ಕಡಿಮೆ ಬೆಳೆಯ ವರ್ಷಗಳು.
  • (ವ್ಯಕ್ತಿಯ ಯಾ ಪ್ರಾಣಿಯ ವಿಷಯದಲ್ಲಿ) ತೆಳ್ಳಗಿನ; ತೆಳುವಾದ; ಕೃಶಕಾಯದ; ಪುಷ್ಟವಾಗಿರದ; ಸಪುರಾದ; ಸಣಕಲಾದ; ಬಡಕಲಾದ; ಹೆಚ್ಚು ಕೊಬ್ಬಿಲ್ಲದ; ತುಂಬಿಕೊಂಡಿಲ್ಲದ.
  • (ಮಾಂಸದ ವಿಷಯದಲ್ಲಿ) ಕೊಬ್ಬಿರದ; ಕೊಬ್ಬಿಲ್ಲದ; ಚರಬಿಯಿಲ್ಲದ; ಬರಿ ಸ್ನಾಯುವಾಗಿರುವ.
  • ಸ್ವಲ್ಪದ; ಅಲ್ಪ ಪ್ರಮಾಣದ; ಸುಮಾರಾದ; ಸಾಲದಾಗಿರುವ: lean crop ಸುಮಾರಾದ ಯಾ ಸ್ವಲ್ಪ ಪ್ರಮಾಣದ ಬೆಳೆ.
  • ಹಸನಾಗಿರದ; ಒಳ್ಳೆಯ ಗುಣಮಟ್ಟದ್ದಲ್ಲದ.
  • ಸತ್ತ್ವವಿಲ್ಲದ; ಸಾರವಿಲ್ಲದ: ಪುಷ್ಟಿದಾಯಕವಲ್ಲದ; ಪುಷ್ಟಿಕರವಲ್ಲದ: lean diet ಪುಷ್ಟಿಕರವಲ್ಲದ ಊಟ, ತಿಂಡಿ.
  • ಲಾಭಕರವಲ್ಲದ; ಪ್ರತಿಫಲ ದೊರೆಯದ.

  • lean-to
    ನಾಮವಾಚಕ
  • (ಮನೆಯ ಗೋಡೆಗೆ ಹಾಕಿದ) ಒಪ್ಪಾರು.
  • ಒಪ್ಪಾರು ಮನೆ; ಸೂರು ಮತ್ತೊಂದು ದೊಡ್ಡ ಕಟ್ಟಡಕ್ಕೆ ಯಾ ಗೋಡೆಗೆ ಒರಗಿ ನಿಂತಿರುವ ಮನೆ.

  • leaning
    ನಾಮವಾಚಕ
  • ಓಲುವೆ; ಪ್ರವಣತೆ.
  • ಒಲವು; ಪ್ರವೃತ್ತಿ.

  • leanly
    ಕ್ರಿಯಾವಿಶೇಷಣ
  • ಕೃಶವಾಗಿ; ತೆಳುವಾಗಿ.
  • ಬಡಕಲಾಗಿ.
  • ಪುಷ್ಟಿರಹಿತವಾಗಿ.
  • ಸ್ವಲ್ಪವಾಗಿ; ಸಾಲದಾಗಿ.
  • (ಭೂಮಿಯ ವಿಷಯದಲ್ಲಿ) ಸಾರಹೀನವಾಗಿ; ಫಲವತ್ತಾಗಿಲ್ಲದೆ.

  • leanness
    ನಾಮವಾಚಕ
  • ಕೃಶತೆ; ಕಾರ್ಶ್ಯ; ತೆಳುವು; ತೆಳುವಾಗಿರುವುದು.
  • ಬಡಕಲುತನ; ಸಣಕಲುತನ.
  • ಪುಷ್ಟಿರಹಿತತೆ.
  • ಸ್ವಲ್ಪವಾಗಿರುವಿಕೆ; ಸಾಲದಾಗಿರುವಿಕೆ.
  • (ಭೂಮಿ, ನೆಲ, ಮೊದಲಾದವುಗಳ) ಸಾರಹೀನತೆ; ಫಲಹೀನತೆ; ಅಫಲವತ್ತತೆ; ಬಂಜರು ಸ್ಥಿತಿ.

  • leap
    ಕ್ರಿಯಾಪದ ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ನುಡಿಗಟ್ಟು
    ಹಾರಿಸು; ನೆಗೆ(ಯಿ)ಸು: leap a horse across a ditch ಕಂದಕದ ಆಚೆಗೆ ಕುದುರೆಯನ್ನು ನೆಗೆ(ಯಿ)ಸು.
  • (ರಭಸದಿಂದ) ಜಿಗಿ; ಚಿಮ್ಮು; ಹಾರು; ನೆಗೆ; ಎಗರು; ಲಂಘಿಸು; ದುಮುಕು.
  • (ಬೆಲೆಗಳು ಮೊದಲಾದವುಗಳ ವಿಷಯದಲ್ಲಿ) ಜಿಗಿ; ವಿಪರೀತವಾಗಿ ಏರು, ತೇಜಿಯಾಗು.

  • leap
    ನಾಮವಾಚಕ ನುಡಿಗಟ್ಟು
  • (ರಭಸದಿಂದ) ನೆಗೆತ; ಜಿಗಿತ; ಹಾರಿಕೆ; ಲಂಘನ; ಎಗರು; ಕುಪ್ಪಳಿಕೆ; ಎಗರಿಕೆ; ದುಮುಕುವಿಕೆ.
  • ದಾಟುಜಾಗ; ಹಾರುದಾಣ; ಲಂಘ್ಯ, ಲಂಘನೀಯ, ಯಾ ಲಂಘಿತ – ದೂರ; ನೆಗೆದು ದಾಟಬೇಕಾದ ಯಾ ದಾಟಿದ ಯಾ ಎಲ್ಲಿಂದ ನೆಗೆಯುವೆವೋ ಆ ಸ್ಥಳ, ಜಾಗ, ದೂರ, ಮೊದಲಾದವು.

  • leap year
    ನಾಮವಾಚಕ
    ಅಧಿಕ (ದಿನದ) ವರ್ಷ; ನಾಲ್ಕು ವರ್ಷಗಳಿಗೊಮ್ಮೆ ಬರುವ, ಹೆಬ್ರುವರಿಯಲ್ಲಿ 29 ದಿನಗಳು, ಎಂದರೆ ಒಂದು ದಿನ ಹೆಚ್ಚಾಗಿರುವ, 366 ದಿನಗಳಿರುವ ವರ್ಷ.

    leap-day
    ನಾಮವಾಚಕ
    ಅಧಿಕ ದಿನ; ಹೆಚ್ಚುವರಿ ದಿನ; ಹೆಬ್ರುವರಿ 29ನೆಯ ತಾರೀಖು.


    logo