logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

opalescene
ನಾಮವಾಚಕ
ಕ್ಷೀರಸ್ಫಟಿಕತ್ವ; ಕ್ಷೀರಸ್ಫಟಿಕದಂತೆ ಉಜ್ಜ್ವಲ ವರ್ಣಗಳನ್ನು ಪ್ರತಿಫಲಿಸುವಿಕೆ.

opalescent
ಗುಣವಾಚಕ
ಕ್ಷೀರಸ್ಫಟಿಕತ್ವವುಳ್ಳ; ಕ್ಷೀರಸ್ಫಟಿಕದಂತೆ ಉಜ್ಜ್ವಲ ವರ್ಣಗಳನ್ನು ಪ್ರತಿಫಲಿಸುವ.

opalesque
ಗುಣವಾಚಕ
= opalescent.

opaline
ಗುಣವಾಚಕ
  • ಕ್ಷೀರಸ್ಫಟಿಕದಂಥ.
  • (ಕ್ಷೀರಸ್ಫಟಿಕದಂತೆ) ಬಣ್ಣಬಣ್ಣವಾಗಿ ಬೆಳಗುವ; ಉಜ್ಜ್ವಲ ವರ್ಣಗಳನ್ನು ಪ್ರತಿಫಲಿಸುವ.

  • opaline
    ನಾಮವಾಚಕ
    = opal glass.

    opalize
    ಸಕರ್ಮಕ ಕ್ರಿಯಾಪದ
    ಕ್ಷೀರಸ್ಫಟಿಕದ ಹಾಗೆ ಬಣ್ಣ ಬಣ್ಣವಾಗಿ ಹೊಳೆಯುವಂತೆ ಮಾಡು: opalize glass ಗಾಜನ್ನು ಕ್ಷೀರಸ್ಫಟಿಕದಂತೆ ಮಾಡು.

    opaque
    ಗುಣವಾಚಕ
  • ಅಪಾರದರ್ಶಕ; ನಿಷ್ಪಾರದರ್ಶಕ; ಬೆಳಕನ್ನು ತನ್ನ ಮೂಲಕ ಹಾಯಗೊಡದ.
  • ಅಪಾರಕ; ನೇರಳಾತೀತ ಮತ್ತಿತರ ಬಗೆಯ ವಿದ್ಯುತ್ಕಾಂತ ಅಲೆಗಳನ್ನು ಹಾಯಗೊಡದಿರುವ.
  • ಮಂದ(ಬುದ್ಧಿಯ); ಮಂಕುಬುದ್ಧಿಯ; ದಡ್ಡ.
  • (ವಿರಳ ಪ್ರಯೋಗ) ಬೆಳಕನ್ನು ಪ್ರತಿಫಲಿಸದಿರುವ.
  • (ವಿರಳ ಪ್ರಯೋಗ) ಹೊಳಪಿಲ್ಲದ.
  • ದೃಷ್ಟಿಗೆ ಗೋಚರವಾಗದ; ಕಣ್ಣು ಕಾಣಲಾಗದ.
  • ಅಸ್ಪಷ್ಟವಾದ; ವಿಶದವಾಗಿಲ್ಲದ.

  • opaque
    ನಾಮವಾಚಕ
  • ಅಪಾರದರ್ಶಕ ವಸ್ತು ಯಾ ಸಾಮಗ್ರಿ.
  • ಅಪಾರದರ್ಶಕ (ಸಾಮಗ್ರಿ); ಛಾಯಾಚಿತ್ರದ ವಿಲೋಮಪ್ರತಿ ಮೊದಲಾದವುಗಳ ಕೆಲವು ಭಾಗಗಳನ್ನು ಬೆಳಕು ಹಾಯದಂತೆ ಮಾಡಲು ಬಳಸುವ ಲೇಪನ.
  • ಅಪಾರದರ್ಶಕ ಮುದ್ರಿತ ಪ್ರತಿ.

  • opaquely
    ಕ್ರಿಯಾವಿಶೇಷಣ
  • ಅಪಾರದರ್ಶಕವಾಗಿ; ಬೆಳಕನ್ನು ತನ್ನ ಮೂಲಕ ಹಾಯಗೊಡದಂತೆ.
  • ಅಸ್ಪಷ್ಟವಾಗಿ; ಅಸ್ಫುಟವಾಗಿ.

  • opaqueness
    ನಾಮವಾಚಕ
  • ಅಪಾರದರ್ಶಕತೆ; ಬೆಳಕನ್ನು ತನ್ನ ಮೂಲಕ ಹಾಯಗೊಡದಿರುವಿಕೆ.
  • ಅಸ್ಪಷ್ಟತೆ; ವಿಶದವಾಗಿಲ್ಲದಿರುವಿಕೆ.


  • logo