logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

leaguer
ನಾಮವಾಚಕ
= $^1$ಲಅಗೆ.

leaguer
ಕ್ರಿಯಾಪದ
= 2laager.

leak
ನಾಮವಾಚಕ ಪದಗುಚ್ಛ ನುಡಿಗಟ್ಟು
spring a leak ತೂತುಬೀಳು; ತೂತಾಗು; ಸೋರುಗಂಡಿ ಬೀಳು; ತೂರುಗಂಡಿ ಬಿದ್ದಿರು. have (or take) a leak (ಅಶಿಷ್ಟ) ಉಚ್ಚೆ ಹೊಯ್ಯು; ಮೂತ್ರ ವಿಸರ್ಜನೆ ಮಾಡು.
  • (ಹಳೆಯದಾದುದರಿಂದಲೋ, ಒಡೆದುದರಿಂದಲೋ ಪಾತ್ರೆ, ಕೊಳವೆ, ಕಾಲುವೆ, ಏರಿ, ಮೊದಲಾದವುಗಳಲ್ಲಿ ಆಗುವ, ದ್ರವ ಯಾ ಅನಿಲ ಹೊರಕ್ಕೆ ಹರಿಯುವ, ಸೋರುವ, ಒಳತೂರುವ) ಒಡಕು; ಬಿರುಕು; ಸಂದು; ತೂತು; ರಂಧ್ರ; ಸೋರುಗಂಡಿ; ತೂರುಗಂಡಿ.
  • ಸೋರಿಕೆ; ಸೋರುದ್ರವ; ರಂಧ್ರದ ಮೂಲಕ ಒಳಕ್ಕೆ ಯಾ ಹೊರಕ್ಕೆ ಸೋರಿ ಹೋಗುವ, ಹರಿಯುವ ಪದಾರ್ಥ.
  • ಸೋರಿಕೆ; ಸೋರುವುದು; ಸೋರುವಿಕೆ.
  • ವಿದ್ಯುತ್ಸೋರಿಕೆ; ವಿದ್ಯುದಾವೇಶ ಹೀಗೆ ಸೋರುವುದು. 5 ಸೋರಿಕೆ ವಿದ್ಯುತ್ತು; ಸೋರಿಹೋಗುವ ವಿದ್ಯುತ್ತು.
  • ಗುಟ್ಟು ಸೋರಿಕೆ; ರಹಸ್ಯ ಸೋರಿಕೆ; ಗೋಪ್ಯವಾದ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಹೊರಗೆಡಹುವುದು.

  • leak
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ
    leak out (ಗುಟ್ಟು ಮೊದಲಾದವುಗಳ ವಿಷಯದಲ್ಲಿ) = 2leak ಅಕರ್ಮಕ ಕ್ರಿಯಾಪದ \((2)\).
  • (ದ್ರವ ಯಾ ಅನಿಲವನ್ನು) ಸೋರಿಸು; ಹೊರ ಸೋರುವಂತೆ ಮಾಡು.
  • (ದ್ರವ ಯಾ ಅನಿಲವನ್ನು ಕಂಡಿಯ ಮೂಲಕ) ಒಳ – ತೂರಿಸು, ನುಗ್ಗಿಸು.
  • (ಗುಟ್ಟನ್ನು, ಗುಟ್ಟಿನ ಸಮಾಚಾರವನ್ನು) ಉದ್ದೇಶಪೂರ್ವಕವಾಗಿ ಹೊರಗೆಡಹು, ಬಯಲುಮಾಡು, ರಟ್ಟು ಮಾಡು, ಬಿಟ್ಟುಕೊಡು, ಹೊರಗೆಹಾಕು.

  • leakage
    ನಾಮವಾಚಕ
  • ಸ್ರವಣ; ಸ್ರವ; ಸ್ರಾವ; ಸೋರಿಕೆ.
  • ಸ್ರವಿಸಿದ್ದು; ಸ್ರಾವ; ಸೋರಿ ಹೋದದ್ದು ಯಾ ತೂರಿ ಒಳಹೊಕ್ಕದ್ದು.
    1. ಗುಟ್ಟನ್ನು ಉದ್ದೇಶಪೂರ್ವಕವಾಗಿ ಹೊರಗೆಡಹುವುದು, ಬಯಲು ಮಾಡುವಿಕೆ.
    2. ಗುಟ್ಟು ಬಯಲಾಗುವಿಕೆ, ರಟ್ಟಾಗುವಿಕೆ.
  • ಹಣದ ಮಂಗಮಾಯ; (ಹಣ ತಿಂದು ಹಾಕಿರಬೇಕೆಂಬುದಕ್ಕೆ ಸೂಚನೆಯಾಗಿ ಸಮಜಾಯಿಷಿ ಕೊಡಲಾಗದಂತೆ) ಹಣ ಕಾಣದಾಗುವುದು.

  • leaker
    ನಾಮವಾಚಕ
    ಲೀಕರ್‍; ಸೋರುಪಾತ್ರೆ; ಸ್ರವಣ ಪಾತ್ರೆ; ಡಬ್ಬಗಳಲ್ಲಿ ಸಂರಕ್ಷಿಸುವ ವಸ್ತುಗಳಿಗಾಗಿ ಬಳಸುವ, ಸೋರುವ ವ್ಯವಸ್ಥೆಯುಳ್ಳ ಪಾತ್ರೆ.

    leakiness
    ನಾಮವಾಚಕ
    ಸ್ರಾವಕತೆ; ಸೋರುವಿಕೆ; ಸ್ರವಣ.

    leaky
    ಗುಣವಾಚಕ
  • ಸೋರುವ; ಸ್ರಾವಕ; ತೂತುಬಿದ್ದ; ಒಡಕುಳ್ಳ.
  • ಗುಟ್ಟು ಹೊರಗೆಡಹುವ (ಸ್ವಭಾವದ).

  • leal
    ಗುಣವಾಚಕ
    (ಸ್ಕಾಟ್ಲೆಂಡ್‍) ಸ್ವಾಮಿಭಕ್ತಿಯುಳ್ಳ; ನಂಬಿಕೆಯ; ನಿಷ್ಠೆಯ; ಪ್ರಾಮಾಣಿಕ.

    lean
    ಕ್ರಿಯಾಪದ ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ನುಡಿಗಟ್ಟು
  • (ದೇಹ ಮೊದಲಾದವನ್ನು) ಬಗ್ಗಿಸು; ಒರಗಿಸು; ಓಲಿಸು; ಬಾಗಿಸು: leaned her head upon her arm ತನ್ನ ತಲೆಯನ್ನು ತೋಳಿನ ಮೇಲೆ ಒರಗಿಸಿದಳು.
  • (ವಸ್ತು ಮೊದಲಾದವನ್ನು) ಓಲಿಸಿ ನಿಲ್ಲಿಸು; ವಾಲಿಸಿ ಇಡು; ಓರೆಯಾಗಿಡು: lean the ladder against the wall ಏಣಿಯನ್ನು ಗೋಡೆಗೆ ಒರಗಿಸಿಡು.


  • logo