logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

incase
ಸಕರ್ಮಕ ಕ್ರಿಯಾಪದ
= encase.

incautious
ಗುಣವಾಚಕ
ಜೋಕೆಯಿಂದಲ್ಲದ; ಎಚ್ಚರಿಕೆಯಿರದ; ಅಜಾಗರೂಕ.

incautiously
ಕ್ರಿಯಾವಿಶೇಷಣ
ಜೋಕೆಯಿಲ್ಲದೆ; ಎಚ್ಚರಿಕೆಯಿಲ್ಲದೆ; ಅಜಾಗರೂಕವಾಗಿ.

incautiousness
ನಾಮವಾಚಕ
ಜೋಕೆಯಿಂದಿಲ್ಲದಿರುವುದು; ಎಚ್ಚರಿಕೆಯಿರದಿರುವುದು; ಅಜಾಗರೂಕತೆ; ಎಚ್ಚರಗೇಡಿತನ.

incendiarism
ನಾಮವಾಚಕ
  • ಬೆಂಕಿಕೋರತನ; ದ್ವೇಷದಿಂದ ಅಸ್ತಿಪಾಸ್ತಿಗೆ ಬೆಂಕಿಯಿಡುವುದು, ಕಿಚ್ಚಿಡುವುದು.
  • ಅಗ್ನಿ ಸ್ಪರ್ಶ; ದ್ವೇಷದಿಂದ ಆಸ್ತಿಪಾಸ್ತಿಗೆ ಬೆಂಕಿ ಹಚ್ಚುವ ಅಪರಾಧ.
  • (ರೂಪಕವಾಗಿ) ಕಲಹಕಾರಿತ್ವ; ಬೆಂಕಿ ಹಚ್ಚುವ ಮನೋವೃತ್ತಿ; ಜಗಳವೆಬ್ಬಿಸುವ ಪ್ರವೃತ್ತಿ.

  • incendiary
    ಗುಣವಾಚಕ
  • (ಆಸ್ತಿಪಾಸ್ತಿಗೆ ದ್ವೇಷದಿಂದ) ಬೆಂಕಿಯಿಡುವ; ಬೆಂಕಿ ಹಚ್ಚುವ; ಅಗ್ನಿಸ್ಪರ್ಶ ಮಾಡುವ.
  • (ಆಸ್ತಿಪಾಸ್ತಿಗೆ ದ್ವೇಷದಿಂದ) ಬೆಂಕಿ ಇಡುವ ತಪ್ಪಿತ ಮಾಡಿದ; ಅಗ್ನಿಸ್ಪರ್ಶಾಪರಾಧದ.
  • (ರೂಪಕವಾಗಿ) ಕಿಚ್ಚಿಡುವ; ಕಿಚ್ಚಿಕ್ಕುವ; ಜಗಳವೆಬ್ಬಿಸುವ; ಕಲಹವುಂಟುಮಾಡುವ; ಉದ್ರೇಕಕಾರಿ; ಹೋರಾಡುವಂತೆ ಉದ್ರೇಕಗೊಳಿಸುವ: incendiary speech ಕಿಚ್ಚೆಬ್ಬಿಸುವ ಭಾಷಣ.

  • incendiary
    ನಾಮವಾಚಕ
  • ಬೆಂಕಿಕೋರ; ಅಗ್ನಿಸ್ಪರ್ಶನಕಾರ; ಆಸ್ತಿಪಾಸ್ತಿಗೆ ದ್ವೇಷದಿಂದ ಬೆಂಕಿಹಚ್ಚುವವನು.
  • (ರೂಪಕವಾಗಿ) ಕಿಚ್ಚಿಡುವವನು; ಜಗಳವೆಬ್ಬಿಸುವವನು; ಕಲಹಕಾರ; ಹೋರಾಡುವಂತೆ ಉದ್ರೇಕಗೊಳಿಸುವವನು.
  • = incendiary bomb.

  • incendiary bomb
    ನಾಮವಾಚಕ
    ಬೆಂಕಿಬಾಂಬು; ಅಗ್ನಿ ಸ್ಫೋಟಕ; ಬೆಂಕಿ ಹೊತ್ತಿಸುವ ವಸ್ತುಗಳನ್ನು ತುಂಬಿದ ಬಾಂಬು.

    incensation
    ನಾಮವಾಚಕ
    ಧೂಪನ; ಧೂಪ ಹಾಕುವುದು; ಧೂಪದಿಂದ ಪರಿಮಳ ಬೀರುವುದು.

    incense
    ನಾಮವಾಚಕ
  • ಧೂಪದ್ರವ್ಯ; ಹೊತ್ತಿಸಿ ಉರಿಸುವಾಗ ಪರಿಮಳ ಬೀರುವ, ಗೋಂದು ಜಾತಿಯ ಪರಿಮಳ ದ್ರವ್ಯ, ಸುಗಂಧ ದ್ರವ್ಯ; ಹಾಲುಮಡ್ಡಿ, ಸಾಂಬ್ರಾಣಿ, ಕರ್ಪೂರ, ಮೊದಲಾದವು.
  • ಧೂಪ; ಪೂಜಾದಿ ಧಾರ್ಮಿಕ ಕ್ರಿಯೆಗಳಲ್ಲಿ, ಹೊತ್ತಿಸಿ ಉರಿಸಿದ ಸುಗಂಧ ದ್ರವ್ಯದ ಹೊಗೆ.
  • (ರೂಪಕವಾಗಿ) ಸುಳ್ಳು ಹೊಗಳಿಕೆ; ಮುಖಸ್ತುತಿ; ಮಿಥ್ಯಾಪ್ರಶಂಸೆ.


  • logo