ಬುದ್ಧಿಮಾಂದ್ಯ; ತಿಳಿದುಕೊಳ್ಳುವ ಶಕ್ತಿ ಬಹುಕಡಿಮೆ ಇರುವುದು.
ಅಪಾರಕತೆ; ನೇರಳಾತೀತ, ರಕ್ತಾತೀತ ಮತ್ತಿತರ ಬಗೆಯ ವಿದ್ಯುತ್ಕಾಂತ ಅಲೆಗಳನ್ನು ಹಾಯಗೊಡದಿರುವಿಕೆ.
(ವಿರಳ ಪ್ರಯೋಗ) ಪ್ರತಿಫಲನಕ್ಕೆ ಎಡೆಗೊಡದಿರುವಿಕೆ.
opah
ನಾಮವಾಚಕ
ಓಪ (ಮೀನು); ರಾಜಮೀನು; ಚಂದ್ರಮೀನು; ಲ್ಯಾಂಪ್ರಿಸ್ ಗಟಟಸ್ ಕುಲಕ್ಕೆ ಸೇರಿದ, ಸಾಮಾನ್ಯವಾಗಿ ಬಿಳಿಚುಕ್ಕೆಗಳಿರುವ, ಉಜ್ಜ್ವಲ ಬೆಳ್ಳಿನೀಲಿ ಬಣ್ಣದ ಬೆನ್ನು ಮತ್ತು ಕಡುಗೆಂಪು ಬಣ್ಣದ ಈಜುರೆಕ್ಕೆಗಳು ಉಳ್ಳ, ಉತ್ತರ ಅಟ್ಲಾಂಟಿಕ್ ಸಾಗರದ, ಬಹು ವಿರಳದ, ಒಂದು ದೊಡ್ಡ ಮೀನು.
opal
ನಾಮವಾಚಕ
ಪದಗುಚ್ಛ
ಕ್ಷೀರಸ್ಫಟಿಕ; ಒಂದು ಬಗೆಯ ಬಿಳಿ ಯಾ ಬಣ್ಣಬಣ್ಣದ ಪ್ರಶಸ್ತ ಶಿಲೆ. common opal ಹಾಲುಬಿಳುಪು, ಹಸುರುನೀಲಿ, ಹಳದಿ, ಕೆಂಪು ಬಣ್ಣಗಳನ್ನು ಪ್ರತಿಫಲಿಸುವ ಮಣಿ; ಸಾಮಾನ್ಯ ಕ್ಷೀರಸ್ಫಟಿಕ.
opal glass
ನಾಮವಾಚಕ
ಅರ್ಧಪಾರದೀಪ್ತಿಯ ಬಿಳಿಯ ಗಾಜು; ಅರೆಪಾರ(ದರ್ಶ)ಕ ಬಿಳಿಗಾಜು.