(ಕೆಲಸ ಮೊದಲಾದವಕ್ಕೆ) ಅಸಮರ್ಥಗೊಳಿಸುವುದು; ಅಶಕ್ತನನ್ನಾಗಿ ಮಾಡುವುದು.
(ನ್ಯಾಯಶಾಸ್ತ್ರ) ಅನರ್ಹಗೊಳಿಸುವುದು.
incapacity
ನಾಮವಾಚಕ
(ಕೆಲಸ ಮೊದಲಾದವಕ್ಕೆ) ಅಸಾಮರ್ಥ್ಯ; ಅಶಕ್ತತೆ.
(ನ್ಯಾಯಶಾಸ್ತ್ರ) ಅನರ್ಹತೆ; ಕಾನೂನಿನ ಪ್ರಕಾರ ಯಾ ಕಾಯಿದೆಯ ದೃಷ್ಟಿಯಲ್ಲಿ ಅರ್ಹತೆ ಇಲ್ಲದಿರುವುದು.
incarcerate
ಸಕರ್ಮಕ ಕ್ರಿಯಾಪದ
ಸೆರೆಯಲ್ಲಿಡು; ಜೈಲಿನಲ್ಲಿಡು.
(ರೂಪಕವಾಗಿ) ಬಂಧಿಸಿಡು; ಕೂಡಿಹಾಕು: the close room easily incarcerates the infected air ಆ ಸಣ್ಣ ಕೊಠಡಿ ಕೆಟ್ಟ ಗಾಳಿಯನ್ನು ಸಲೀಸಾಗಿ ಕೂಡಿಡುತ್ತದೆ.
incarceration
ನಾಮವಾಚಕ
ಸೆರೆಯಲ್ಲಿಡುವಿಕೆ; ಬಂಧನ; ಕಾರಾಗೃಹವಾಸ; ಜೈಲುವಾಸ.
incarcerator
ನಾಮವಾಚಕ
ಸೆರೆಯಲ್ಲಿಡುವವನು; ಬಂಧನಕಾರ.
incarnadine
ಗುಣವಾಚಕ
(ಕಾವ್ಯಪ್ರಯೋಗ) ಮಾಂಸವರ್ಣದ; ಕಡುಗೆಂಪು ಬಣ್ಣದ.
incarnadine
ಸಕರ್ಮಕ ಕ್ರಿಯಾಪದ
ಮಾಂಸದ ಬಣ್ಣ, ರಂಗು ಹಾಕು; ಕಡುಗೆಂಪಾಗಿಸು.
incarnate
ಗುಣವಾಚಕ
(ವ್ಯಕ್ತಿ, ಭೂತ ಪ್ರೇತ, ಗುಣ, ಮೊದಲಾದವುಗಳ ವಿಷಯದಲ್ಲಿ) (ಮುಖ್ಯವಾಗಿ ಮನುಷ್ಯರೂಪದಲ್ಲಿ) ಮೈವೆತ್ತ; ಮೈದಾಳಿದ; ಮೂರ್ತಿಮಂತ; ಮೂರ್ತಿಮತ್ತಾದ; ಮೂರ್ತೀಭವಿಸಿದ; ಅವತರಿಸಿದ: he is an incarnate fiend ಅವನೊಬ್ಬ ಮೂರ್ತಿಮತ್ತಾದ ದೆವ್ವ. liberty incarnate ಮೈವೆತ್ತ ಸ್ವಾತಂತ್ರ್ಯ.
(ಭೂತಕೃದಂತದಲ್ಲಿ) ಗಮನಾರ್ಹವಾದ ಯಾ ಅತ್ಯಂತ ಪರಿಪೂರ್ಣ ರೂಪದಲ್ಲಿ ಮೈದಾಳಿದ, ಮೂರ್ತೀಭವಿಸಿದ.
incarnate
ಸಕರ್ಮಕ ಕ್ರಿಯಾಪದ
ಅವತರಿಸು; ಮೈದಾಳುವಂತೆ, ಮೂರ್ತಿಮತ್ತಾಗಿ ಮಾಡು.
(ಭಾವನೆ, ಭಾವ, ಮೊದಲಾದವಕ್ಕೆ) ರೂಪಕೊಡು; ಮೂರ್ತೀಕರಿಸು.
(ವ್ಯಕ್ತಿ ಮೊದಲಾದವುಗಳ ವಿಷಯದಲ್ಲಿ, ಒಂದು ಗುಣದ) ಸಜೀವ ಮೂರ್ತಿಯಾಗಿರು; ಜೀವಂತರೂಪವಾಗಿರು; ಅವತಾರವಾಗಿರು: a wife who incarnates all the virtues ಎಲ್ಲ ಸದ್ಗುಣಗಳನ್ನೂ ತನ್ನಲ್ಲೇ ಮೂರ್ತೀಕರಿಸಿಕೊಂಡಿರುವ ಧರ್ಮಪತ್ನಿ.