(ವಿದ್ಯುದ್ದೀಪ ಮತ್ತು ಇತರ ದೀಪಗಳ ವಿಷಯದಲ್ಲಿ) ತಾಪಜ್ವಲನದ; ಹಿಲಮಂಟ್ ಮೊದಲಾದವು ಕಾವೇರಿ ಪ್ರಜ್ವಲಿಸುವ, ಕಾದು ಬೆಳಗುವ.
incantation
ನಾಮವಾಚಕ
ಮಂತ್ರ.
ಮಂತ್ರೋಚ್ಚಾರಣೆ; ಮಂತ್ರಪಠನ; ಮಂತ್ರ ಘೋಷ.
(ಮಾಟ ಮೊದಲಾದವುಗಳಲ್ಲಿ) ಮಂತ್ರ ಪ್ರಯೋಗ.
ಮಾಟ; ಅಭಿಚಾರ.
ಪಠನ ಯಾ ಗಾಯನ; ಪದ್ಯ, ಸಂಗೀತ, ಮೊದಲಾದವುಗಳನ್ನು ಅರ್ಥಕ್ಕೆ ಪ್ರಾಧಾನ್ಯ ಕೊಡದೆ ಹೃದಯಸ್ಪರ್ಶಿಯಾಗುವಂತೆ ನಾದಪ್ರಧಾನವಾಗಿ ಪಠಿಸುವುದು ಯಾ ಗಾನಮಾಡುವುದು.
incapability
ನಾಮವಾಚಕ
ಅಸಾಮರ್ಥ್ಯ; ಅಶಕ್ತತೆ; ಕೈಯಲ್ಲಾಗದಿರುವಿಕೆ; ಕೈಯಲ್ಲಿ ಹರಿಯದಿರುವಿಕೆ.
incapable
ಗುಣವಾಚಕ
ಕೈಯಲ್ಲಾಗದ; ಅಸಮರ್ಥ; ಕೈಯಲ್ಲಿ – ಹರಿಯದ, ಮಾಡಲಾರದ.
(ಕೆಲವೊಮ್ಮೆ ಕೆಟ್ಟದನ್ನು ಮಾಡಲಾರದಷ್ಟು ಪ್ರಾಮಾಣಿಕ ಎಂಬ ಒಳ್ಳೆಯ ಅರ್ಥದಲ್ಲಿ) ಅಸಮರ್ಥ; ಮಾಡಲಾರದ; ಮಾಡತಕ್ಕವನಲ್ಲದ: incapable of any harm ಯಾವ ತೊಂದರೆಯನ್ನೂ, ಕೆಡುಕನ್ನೂ – ಮಾಡಲಾರದವನು, ಮಾಡಲಸಮರ್ಥ.
(ಉತ್ತಮ ಪಡಿಸಲು ಮೊದಲಾದ) ಸಾಧ್ಯವಿಲ್ಲದ; ಅಸಾಧ್ಯ(ವಾದ): incapable of measurement ಅಳೆಯಲಸಾಧ್ಯವಾದ.
ಅಶಕ್ತ; ಕೈಯಲ್ಲಾಗದ; ಸಾಮಾನ್ಯವಾದ ಸಾಮರ್ಥ್ಯಗಳೂ ಇಲ್ಲದ: drunk and incapable ಕುಡಿದು ಅಶಕ್ತನಾಗಿದ್ದ.
incapably
ಕ್ರಿಯಾವಿಶೇಷಣ
ಕೈಲಾಗದಂತೆ; ಅಸಮರ್ಥನಾಗಿ.
incapacitant
ನಾಮವಾಚಕ
ಶಕ್ತಿಹಾರಿ; ಅಸಮರ್ಥಕಾರಕ; ಅಶಕ್ತಿಕಾರಕ; ಒಬ್ಬ ವ್ಯಕ್ತಿಯನ್ನು ಕೊಲ್ಲದೆ ಯಾ ನೋವುಂಟುಮಾಡದೆ ಅವನನ್ನು ತಾತ್ಕಾಲಿಕವಾಗಿ ಅಸಮರ್ಥನನ್ನಾಗಿ, ಅಶಕ್ತನನ್ನಾಗಿ ಮಾಡುವ ವಸ್ತು.