logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inbreathe
ಸಕರ್ಮಕ ಕ್ರಿಯಾಪದ
  • (ಯಾವುದೇ ವಸ್ತುವನ್ನು) ಒಳಕ್ಕೆ – ಊದು, ಉರುಬು (ರೂಪಕವಾಗಿ ಸಹ): they cannot inbreathe into us such knowledge ಅಂಥ ಜ್ಞಾನವನ್ನು ಅವರು ನಮ್ಮೊಳಗೆ ಊದಲಾರರು, ಊದಿ ತುಂಬಲಾರರು.
  • (ವ್ಯಕ್ತಿಗೆ) ಚೈತನ್ಯ, ಸತ್ತ್ವ – ತುಂಬು: a person inbreathed by Jesus Christ ಏಸುಕ್ರಿಸ್ತನು ತನ್ನ ಚೈತನ್ಯ ತುಂಬಿದ ಮನುಷ್ಯ.
  • ಉಚ್ಛ್ವಸಿಸು; ಉಸಿರಿನಂತೆ ಒಳಕ್ಕೆಳೆದುಕೊ.

  • inbred
    ಗುಣವಾಚಕ
  • ಜನ್ಮಸಿದ್ಧ; ಸ್ವಭಾವಸಿದ್ಧ; ಪ್ರಕೃತಿಸಿದ್ಧ; ಸಹಜ; ಸ್ವಾಭಾವಿಕ; ಸ್ವಭಾವಜನ್ಯ; ಹುಟ್ಟಿನಿಂದಲೇ ಬಂದ.
  • ಅಂತಸ್ಸಂಬಂಧಿಜ; ಸಈಪ ಸಂಬಂಧಿಜ; ನಿಕಟಸಂಬಂಧಿಜಾತ; ತೀರ ಸಈಪ ಸಂಬಂಧವಿರುವ ವ್ಯಕ್ತಿಗಳಲ್ಲೇ ಯಾ ಪ್ರಾಣಿಗಳಲ್ಲೇ ದೇಹಸಂಬಂಧ ಬೆಳೆಸಿದ ಯಾ ಆ ಸಂಬಂಧದಿಂದ ಹುಟ್ಟಿದ; ತಮ್ಮತಮ್ಮಲ್ಲೇ ವಿವಾಹ ಬೆಳೆಸಿದ ಯಾ ಅಂಥ ವಿವಾಹದಿಂದ ಹುಟ್ಟಿದ.

  • inbreed
    ಸಕರ್ಮಕ ಕ್ರಿಯಾಪದ
    ಅಂತಸ್ಸಂಬಂಧ ಬೆಳೆಸು; ಹತ್ತಿರದ ಸಂಬಂಧ ಇರುವ ಪ್ರಾಣಿಗಳಿಂದಲೇ ತಳಿ ಬೆಳೆಸು.

    inbreeding
    ನಾಮವಾಚಕ
    ಅಂತಸ್ಸಂಬಂಧ; ಒಳಒಳಗೇ ಬೆಳೆಸಿದ ಸಂಬಂಧ:
  • ಹತ್ತಿರದ ಸಂಬಂಧ ಇರುವ ಪ್ರಾಣಿಗಳಿಂದಲೇ ತಳಿ ಬೆಳೆಯುವುದು.
  • ಹತ್ತಿರದ ಸಂಬಂಧ ಇರುವವರಲ್ಲೇ ವಿವಾಹಸಂಬಂಧ ಬೆಳೆಸುವುದು.

  • Inc.
    ಸಂಕ್ಷಿಪ್ತ
    (ಅಮೆರಿಕನ್‍ ಪ್ರಯೋಗ) Incorporated.

    Inca
    ನಾಮವಾಚಕ
    ಇಂಕ:
  • ಸ್ಪೇನಿನವರು ದಂಡಯಾತ್ರೆ ಮಾಡಿ ಆಕ್ರಮಿಸುವ ಮುಂಚೆ ಪೆರುದೇಶದಲ್ಲಿ ಆಳುತ್ತಿದ್ದ ಚಕ್ರವರ್ತಿಯ ಯಾ ರಾಜನ ಹೆಸರು.
  • ಪೆರು ದೇಶದ ರಾಜಸಂತತಿಯವನು.
  • ಸ್ಪೇನಿನವರ ಆಕ್ರಮಣಕ್ಕೆ ಮೊದಲು ದಕ್ಷಿಣ ಅಮೆರಿಕದ ಪೆರು ಮೊದಲಾದ ದೇಶಗಳಲ್ಲಿದ್ದ ಅಮೆರಿಕದ ಇಂಡಿಯನ್‍ ಜನಾಂಗದವನು.

  • Incaic
    ಗುಣವಾಚಕ
    = Incan.

    incalculability
    ನಾಮವಾಚಕ
  • ಅಗಣ್ಯತೆ; ಅಸಂಖ್ಯೇಯತೆ; ಗಣನಾತೀತತೆ; ಲೆಕ್ಕ ಮಾಡಲಾಗದಷ್ಟು ದೊಡ್ಡದಾಗಿರುವುದು.
  • ಎಣಿಕೆಗೆ ಈರಿರುವಿಕೆ; ಊಹಿಸಲಾಗದಿರುವಿಕೆ; ನಿರೀಕ್ಷಿಸಲಾಗದಿರುವಿಕೆ; ಮುಂಚಿತವಾಗಿ ಎಣಿಸಲು ಯಾ ಊಹಿಸಲು ಸಾಧ್ಯವಿಲ್ಲದಿರುವುದು.
  • (ವ್ಯಕ್ತಿ, ನಡತೆ, ಮೊದಲಾದವುಗಳ ವಿಷಯದಲ್ಲಿ) ಅನಿಶ್ಚಿತತೆ; ನೆಚ್ಚಲಾಗದಂತಿರುವುದು; ನಂಬಿಕೆ ಇಡಲಾಗದಂತಿರುವುದು.

  • incalculable
    ಗುಣವಾಚಕ
  • ಅಗಣ್ಯ; ಅಸಂಖ್ಯೇಯ; ಗಣನಾತೀತ; ಅಮಿತ; ಲೆಕ್ಕಕ್ಕೆ ಎಟುಕದಷ್ಟು ದೊಡ್ಡದಾದ.
  • ಊಹಿಸಲಾಗದ; ನಿರೀಕ್ಷಿಸಲಾಗದ; ಅನಿರೀಕ್ಷಣೀಯ; ಎಣಿಕೆಗೆ ಈರಿದ; ಮುಂಚಿತವಾಗಿ ಎಣಿಸಲು, ಊಹಿಸಲು ಸಾಧ್ಯವಿಲ್ಲದ.
  • (ವ್ಯಕ್ತಿ, ನಡತೆ, ಮೊದಲಾದವುಗಳ ವಿಷಯದಲ್ಲಿ) ಅನಿಶ್ಚಿತ; ನೆಚ್ಚಲಾಗದ; ನಂಬಿಕೆ ಇಡಲಾಗದ.

  • incalculably
    ಕ್ರಿಯಾವಿಶೇಷಣ
  • ಎಣಿಕೆಗೆ ಈರಿ; ಊಹಿಸಲಾಗದಂತೆ; ನಿರೀಕ್ಷಿಸಲಾಗದಂತೆ.
  • ಅಸಂಖ್ಯೇಯವಾಗಿ; ಅಮಿತವಾಗಿ; ಲೆಕ್ಕ ಮಾಡಲಾಗದಷ್ಟು.
  • (ವ್ಯಕ್ತಿ, ನಡತೆ, ಮೊದಲಾದವುಗಳ ವಿಷಯದಲ್ಲಿ) ಅನಿಶ್ಚಿತವಾಗಿ; ನೆಚ್ಚಲಾಗದಂತೆ; ನಂಬಿಕೆ ಇಡಲಾಗದಂತೆ.


  • logo