ನೆಗ್ಗುವಂತೆ, ಒಡೆಯುವಂತೆ ಯಾ ಪೆಟ್ಟಾಗುವಂತೆ ಬಲವಾಗಿ – ಅಪ್ಪಳಿಸು, ಹೊಡೆ, ಬಡಿ, ಚಚ್ಚು: bash in the lid of a box ಡಬ್ಬದ ಮುಚ್ಚಳ ನೆಗ್ಗುವಂತೆ ಬಡಿ.
bash
ನಾಮವಾಚಕ
ಬಲವಾದ ಏಟು; ಭಾರಿ ಪೆಟ್ಟು; ಅಪ್ಪಳಿಸುವಿಕೆ.
(ಅಶಿಷ್ಟ) ಮಜಾ; ಮೋಜು; ಅತಿ ಸಂತಸದ, ಭರ್ಜರಿ ಕೂಟ.
(ಅಶಿಷ್ಟ) ಪ್ರಯತ್ನ; ಒಂದು ಕೈ ನೋಡುವುದು: he’s decided to have a bash at tightening up the discipline ಶಿಸ್ತನ್ನು ಬಿಗಿಗೊಳಿಸುವ ಪ್ರಯತ್ನ ಮಾಡಲು ಆತ ತೀರ್ಮಾನಿಸಿದ್ದಾನೆ.
bashaw
ನಾಮವಾಚಕ
(ಪ್ರಾಚೀನ ಪ್ರಯೋಗ) pasha ದ ರೂಪಾಂತರ.
bashful
ಗುಣವಾಚಕ
ನಾಚಿಕೆಯ; ಲಜ್ಜೆಯ; ಸಿಗ್ಗಾಳಿತನದ.
ಸಂಕೋಚ ಪ್ರವೃತ್ತಿಯ; ಮುಖಹೇಡಿಯಾದ.
bashfully
ಕ್ರಿಯಾವಿಶೇಷಣ
ನಾಚಿಕೆಯಿಂದ.
ಮುಖಹೇಡಿತನದಿಂದ.
bashfulness
ನಾಮವಾಚಕ
ನಾಚಿಕೆ; ಲಜ್ಜೆ; ಸಿಗ್ಗು.
ಸಂಕೋಚ ಸ್ವಭಾವ; ಮುಖ ಹೇಡಿತನ.
bashi-bazouk
ನಾಮವಾಚಕ
(ಚರಿತ್ರೆ) (ತುರ್ಕಿಯ) ಕೊಳ್ಳೆರಾವುತ ಪಡೆಯ, ದರೋಡೆ ಮತ್ತು ಕ್ರೌರ್ಯಕ್ಕೆ ಹೆಸರಾದ, ಹಂಗಾಮಿ ಸೈನಿಕ.
basi-
ಸಮಾಸ ಪೂರ್ವಪದ
ಶರೀರವಿಜ್ಞಾನದ ಹಲವು ಗುಣವಾಚಕಗಳಲ್ಲಿ ಬುಡದ, ತಳದಲ್ಲಿರುವ, ಬುಡವಾಗಿರುವ ಮೊದಲಾದ ಅರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ: basi-facial ಮುಖದ ತಳದ.