logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oofy
ಗುಣವಾಚಕ
(ಅಶಿಷ್ಟ) ಹಣವಂತನಾದ; ಧನಿಕ.

oogamous
ಗುಣವಾಚಕ
(ಜೀವವಿಜ್ಞಾನ) (ಲೈಂಗಿಕ ಉತ್ಪತ್ತಿಯ ವಿಷಯದಲ್ಲಿ) ಅಂಡಸಂಯೋಗಜ; ನಿಶ್ಚಲವೂ ದೊಡ್ಡದೂ ಆದ ಅಂಡ ಮತ್ತು ಚಿಕ್ಕದೂ ಚಲಿಸಬಲ್ಲುದೂ ಆದ ರೇತ್ರಾಣುಗಳ ಸಂಯೋಗದಿಂದ ಆಗುವ.

oogamy
ನಾಮವಾಚಕ
(ಜೀವವಿಜ್ಞಾನ) (ಲೈಂಗಿಕ ಉತ್ಪತ್ತಿಯ ವಿಷಯದಲ್ಲಿ) ಅಂಡಸಂಯೋಗ; ನಿಶ್ಚಲವೂ ದೊಡ್ಡದೂ ಆದ ಅಂಡ ಮತ್ತು ಚಿಕ್ಕದೂ ಚಲಿಸಬಲ್ಲುದೂ ಆದ ರೇತ್ರಾಣಗಳೊಡನೆ ಆಗುವ ಸಂಯೋಗ.

oogenesis
ನಾಮವಾಚಕ
(ಜೀವವಿಜ್ಞಾನ) ಅಂಡಜನನ; ಅಂಡಾಣುವಿನ ಉತ್ಪತ್ತಿ ಯಾ ಬೆಳವಣಿಗೆ.

ooh
ಭಾವಸೂಚಕ ಅವ್ಯಯ
ಊ! ಆಶ್ಚರ್ಯ, ಸಂತೋಷ, ನೋವು, ಮೊದಲಾದವುಗಳನ್ನು ಸೂಚಿಸುವ ಪದ.

oolite
ನಾಮವಾಚಕ
  • ಸಮಾನ ಕೇಂದ್ರದ ಪದರುಗಳಿಂದಾದ ಗುಂಡಾದ ಹರಳುಗಳುಳ್ಳ ಅಂಡಶಿಲೆ, ಮುಖ್ಯವಾಗಿ ಸುಣ್ಣಕಲ್ಲು.
  • = oolith.

  • oolith
    ನಾಮವಾಚಕ
    ಅಂಡಶಿಲೆಯಾಗುವ ಗುಂಡು ಹರಳುಗಳಲ್ಲೊಂದು; ಕಲ್ಲು ಹರಳು.

    oolitic
    ಗುಣವಾಚಕ
    ಅಂಡಶಿಲೆಯ ಯಾ ಅದಕ್ಕೆ ಸಂಬಂಧಿಸಿದ.

    oological
    ಗುಣವಾಚಕ
    ಅಂಡಶಾಸ್ತ್ರದ ಯಾ ಅದಕ್ಕೆ ಸಂಬಂಧಿಸಿದ; (ಮುಖ್ಯವಾಗಿ ಹಕ್ಕಿಗಳ) ಮೊಟ್ಟೆಗಳ ಸಂಗ್ರಹಣೆಗೆ ಯಾ ಅದರ ಅಧ್ಯಯನಕ್ಕೆ ಸಂಬಂಧಿಸಿದ.

    oologist
    ನಾಮವಾಚಕ
    ಅಂಡಶಾಸ್ತ್ರಜ್ಞ; (ಮುಖ್ಯವಾಗಿ ಹಕ್ಕಿಗಳ) ಮೊಟ್ಟೆಗಳ ಅಧ್ಯಯನ ಯಾ ಸಂಗ್ರಹಣೆ ಮಾಡುವವ.


    logo