logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inaugurate
ಸಕರ್ಮಕ ಕ್ರಿಯಾಪದ
  • (ವ್ಯಕ್ತಿಯನ್ನು, ಮುಖ್ಯವಾಗಿ ಅಮೆರಿಕದ ಅಧ್ಯಕ್ಷನನ್ನು, ಅಧಿಕಾರ ಮೊದಲಾದವುಗಳಲ್ಲಿ ವಿಧಿವತ್ತಾಗಿ) ಸ್ಥಾಪಿಸು; ಪ್ರತಿಷ್ಠಾಪಿಸು.
  • (ಉದ್ಯಮ ಮೊದಲಾದವನ್ನು) ಶಾಸ್ತ್ರೋಕ್ತವಾಗಿ ಆರಂಭಿಸು.
  • (ಕಟ್ಟಡ ಮೊದಲಾದವನ್ನು ಸಾರ್ವಜನಿಕ ಉಪಯೋಗಕ್ಕಾಗಿ) ಉದ್ಘಾಟಿಸು; ಪ್ರಾರಂಭೋತ್ಸವ ಮಾಡು.
  • ಆರಂಭಿಸು.

  • inauguration
    ನಾಮವಾಚಕ
  • (ಅಧಿಕಾರ ಮೊದಲಾದವುಗಳಲ್ಲಿ ವಿಧಿವತ್ತಾಗಿ) ಪ್ರತಿಷ್ಠಾಪನ; ಸ್ಥಾಪಿಸುವುದು.
  • (ಉದ್ಯಮ ಮೊದಲಾದವುಗಳನ್ನು) ಶಾಸ್ತ್ರವತ್ತಾಗಿ ಆರಂಭಿಸುವುದು.
  • (ಕಟ್ಟಡ ಮೊದಲಾದವುಗಳ) ಉದ್ಘಾಟನ.
  • ಪ್ರಾರಂಭ.

  • inaugurator
    ನಾಮವಾಚಕ
    ಉದ್ಘಾಟನಕಾರ; ಆರಂಭಮಾಡುವವನು; ಪ್ರಾರಂಭಮಾಡಿಸುವವನು.

    inauguratory
    ಗುಣವಾಚಕ
    = 1inaugural.

    inauspicious
    ಗುಣವಾಚಕ
  • ಅಶುಭ; ಅಪಶಕುನದ; ಅಮಂಗಳ(ವಾದ); ಒಳಿತುಂಟು ಮಾಡುವಂಥದಲ್ಲದ.
  • ಕೇಡಿನ; ಅನಿಷ್ಟಕರ; ದುರದೃಷ್ಟಕರ.

  • inauspiciously
    ಕ್ರಿಯಾವಿಶೇಷಣ
  • ಅಶುಭವಾಗಿ; ಅಪಶಕುನಕರವಾಗಿ; ಅವಲಕ್ಷಣವಾಗಿ; ಅಮಂಗಳಕರವಾಗಿ.
  • ಅನಿಷ್ಟಕರವಾಗಿ; ನಿರ್ಭಾಗ್ಯಕರವಾಗಿ; ದುರದೃಷ್ಟಕರವಾಗಿ.

  • inauspiciousness
    ನಾಮವಾಚಕ
  • ಅಶುಭತ್ವ; ಅಪಶಕುನವಾಗಿರುವುದು; ಅಮಂಗಳವಾಗಿರುವುದು.
  • ದೌರ್ಭಾಗ್ಯ; ದುರದೃಷ್ಟತೆ.

  • inboard
    ಕ್ರಿಯಾವಿಶೇಷಣ
    (ಹಡಗು, ವಿಮಾನ ಯಾ ಬೇರಾವುದೇ ವಾಹನದ)
  • ಪಾರ್ಶ್ವಗಳೊಳಗೆ; ಪಕ್ಕಗಳ ನಡುವೆ.
  • ನಡುಭಾಗದತ್ತ; ಮಧ್ಯಭಾಗದ ಕಡೆ.

  • inboard
    ಗುಣವಾಚಕ
    (ಹಡಗಿನ, ವಿಮಾನದ ಯಾ ಬೇರಾವುದೇ ವಾಹನದ)
  • ಪಾರ್ಶ್ವಗಳೊಳಗಿರುವ.
  • ನಡುಭಾಗದ ಕಡೆಗಿರುವ.

  • inborn
    ಗುಣವಾಚಕ
    ಜನ್ಮಸಿದ್ಧ; ಸಹಜಸಿದ್ಧ; ಪ್ರಕೃತಿಜನ್ಯ; ಹುಟ್ಟಿನಿಂದಲೇ ಬಂದ.


    logo