logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

leaderette
ನಾಮವಾಚಕ
ಉಪಸಂಪಾದಕೀಯ; (ಸಂಪಾದಕೀಯ ಮುದ್ರಣಾಕ್ಷರಗಳಲ್ಲಿಯೇ ಮುದ್ರಿಸಿದ) ಅಗ್ರಲೇಖನವಾದ ಮೇಲೆ ಬರುವ ಚಿಕ್ಕ ಸಂಪಾದಕೀಯ ಲೇಖನ.

leaderless
ಗುಣವಾಚಕ
ನಾಯಕರಹಿತ; ಅನಾಯಕ; ಮುಖ್ಯಸ್ಥನಿಲ್ಲದ; ಮುಖಂಡನಿಲ್ಲದ.

leadership
ನಾಮವಾಚಕ
ನಾಯಕತ್ವ; ಮುಖಂಡತ್ವ; ಮುಂದಾಳುತನ.

leading
ಗುಣವಾಚಕ
  • ನಯನ; ಕರೆದೊಯ್ಯುವ; ಸಾಗಿಸುವ.
  • ನಿರ್ದೇಶಿಸುವ; ದಾರಿತೋರುವ; ಮಾರ್ಗದರ್ಶನ ಮಾಡುವ.
  • ಮುಖ್ಯ; ಪ್ರಧಾನ; ಪ್ರಮುಖ.

  • leading
    ನಾಮವಾಚಕ ಪದಗುಚ್ಛ
    men of light and leading (ಮಾರ್ಗದರ್ಶನ ಮಾಡಲು ಯೋಗ್ಯರಾದ) ಪ್ರಭಾವಶಾಲಿಗಳು; ಪ್ರಭಾವಬೀರಲು ಯೋಗ್ಯರಾದ ಮಾರ್ಗದರ್ಶಕ ವ್ಯಕ್ತಿಗಳು.
  • ನಯನ; ಕರೆದೊಯ್ಯುವುದು; ಸಾಗಿಸುವುದು.
  • ನಿರ್ದೇಶನ; ದಾರಿತೋರಿಸುವುದು; ಮಾರ್ಗದರ್ಶನ (ಮಾಡುವುದು).

  • leading aircraftman
    ನಾಮವಾಚಕ
    (ಇಂಗ್ಲೆಂಡಿನ) ರಾಯಲ್‍ ಏರ್‍ ಹೋರ್ಸ್‍ನಲ್ಲಿ ‘ಏರ್‍ಕ್ರಾಹ್ಟ್‍ಮನ್‍’ಗಿಂತ ಮೇಲಿನ ದರ್ಜೆ.

    leading article
    ನಾಮವಾಚಕ
  • (ಬ್ರಿಟಿಷ್‍ ಪ್ರಯೋಗ) ಸಂಪಾದಕೀಯ; (ವೃತ್ತಪತ್ರಿಕೆಯಲ್ಲಿ ಸಂಪಾದಕನ ಅಭಿಪ್ರಾಯವನ್ನು ಸುದೀರ್ಘವಾಗಿ ಅಭಿವ್ಯಕ್ತಗೊಳಿಸುವ) ಅಗ್ರಲೇಖನ.
  • (ವ್ಯಾಪಾರ) ಅಗ್ಗ ಸರಕು; ಇತರ ಸಾಮಾನುಗಳಿಗೆ ಗಿರಾಕಿ ಹೊಂದಿಸಲು ಅಗ್ಗವಾಗಿ ಮಾರುವ ಸರಕು.

  • leading case
    ನಾಮವಾಚಕ
    (ನ್ಯಾಯಶಾಸ್ತ್ರ) ದೃಷ್ಟಾಂತ – ವ್ಯಾಜ್ಯ, ಮೊಕದ್ದಮೆ; (ಪೂರ್ವ) ನಿದರ್ಶನ ಮೊಕದ್ದಮೆ; ಇತರ ಮೊಕದ್ದಮೆಗಳನ್ನು ತೀರ್ಮಾನಿಸಲು ನಿದರ್ಶನವಾಗಿ ಬಳಸುವ ಯಾ ನಿದರ್ಶನ ಒದಗಿಸುವ ಮೊಕದ್ದಮೆ.

    leading counsel
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ)
  • (ಮೊಕದ್ದಮೆಯೊಂದರಲ್ಲಿ ಒಂದು ಪಕ್ಷದ ಪರವಾಗಿ ವಾದಿಸುವ ಇಬ್ಬರು ಅಥವಾ ಹೆಚ್ಚು ಮಂದಿ ವಕೀಲರ ತಂಡದಲ್ಲಿ) ಪ್ರಧಾನ ವಕೀಲ; ಹಿರಿಯ ವಕೀಲ.
  • (ಸಂಚಾರಿ ನ್ಯಾಯಾಲಯಗಳಲ್ಲಿ ವಾದಿಸುವ) ಸರ್ಕಾರಿ ಅಥವಾ ಹಿರಿಯ ವಕೀಲ.

  • leading edge
    ನಾಮವಾಚಕ
  • (ವಿಮಾನದ ರೆಕ್ಕೆ ಮೊದಲಾದವುಗಳ) ಮುನ್ನಂಚು; ಅಗ್ರ ಅಂಚು; ಮುಂಭಾಗದ ಅಂಚು.
  • (ಇಲೆಕ್ಟ್ರಾನಿಕ್ಸ್‍) ಸ್ಪಂದನಾಧಿಕ್ಯ ಭಾಗ; ವಿದ್ಯುತ್‍ ಪ್ರವಾಹದ ಸ್ಪಂದನದಲ್ಲಿ ಯಾ ಏರಿಳಿತಕ್ರಿಯೆಯಲ್ಲಿ ವೈಶಾಲ್ಯ ಅಥವಾ ವಿಚಲನ ಹೆಚ್ಚಾಗುವ ಭಾಗ.


  • logo