logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inasmuch
ಕ್ರಿಯಾವಿಶೇಷಣ
(inasmuch as)
  • ಏಕೆಂದರೆ; ಆದ್ದರಿಂದ; ಆ ಕಾರಣದಿಂದ.
  • ಅಲ್ಲಿಯವರೆಗೆ; ಅಷ್ಟರಮಟ್ಟಿಗೆ.

  • inattention
    ನಾಮವಾಚಕ
  • ಅನವಧಾನ; ಗಮನವಿಲ್ಲದಿರುವುದು.
  • (ಮರ್ಯಾದೆ ತೋರಿಸುವುದರಲ್ಲಿ) ನಿರ್ಲಕ್ಷ್ಯ; ಅನಾದರ; ಅಸಡ್ಡೆ; ಉಪೇಕ್ಷೆ.

  • inattentive
    ಗುಣವಾಚಕ
  • ಗಮನ ಕೊಡದ; ಅನವಧಾನದಿಂದ ಕೂಡಿದ.
  • ನಿರ್ಲಕ್ಷ್ಯದ; ಅನಾದರದ; ಅಸಡ್ಡೆಯ; ಉಪೇಕ್ಷೆಯ.

  • inattentively
    ಕ್ರಿಯಾವಿಶೇಷಣ
  • ಗಮನ ಕೊಡದೆ; ಅನವಧಾನದಿಂದ.
  • ನಿರ್ಲಕ್ಷ್ಯದಿಂದ; ಅನಾದರದಿಂದ; ಅಸಡ್ಡೆಯಿಂದ; ಉಪೇಕ್ಷೆಯಿಂದ; ಕಡೆಗಣಿಸಿ.

  • inattentiveness
    ನಾಮವಾಚಕ
  • ಗಮನವಿಲ್ಲದಿರುವಿಕೆ; ಅನವಧಾನ.
  • ನಿರ್ಲಕ್ಷ್ಯ; ಅನಾದರ; ಅಸಡ್ಡೆ; ಉಪೇಕ್ಷೆ.

  • inaudibility
    ನಾಮವಾಚಕ
    ಅಶ್ರಾವ್ಯತೆ; ಕೇಳಿಸದಿರುವಿಕೆ; ಕೇಳಬರದಂತಿರುವಿಕೆ; ಕಿವಿಗೆ ಬೀಳದಂತಿರುವಿಕೆ.

    inaudible
    ಗುಣವಾಚಕ
    ಅಶ್ರಾವ್ಯ; ಕೇಳಿಸದ; ಕೇಳಬರದ; ಕಿವಿಗೆ ಬೀಳದ.

    inaudibly
    ಕ್ರಿಯಾವಿಶೇಷಣ
    ಕೇಳಿಸದಂತೆ; ಕಿವಿಗೆ ಬೀಳದಂತೆ; ಅಶ್ರಾವ್ಯವಾಗಿ.

    inaugural
    ಗುಣವಾಚಕ
  • ಆರಂಭದ; ಪ್ರಾರಂಭದ; ಪ್ರಾರಂಭಿಕ; ಉಪಕ್ರಮದ; ಪ್ರಾಥಮಿಕ.
  • ಉದ್ಘಾಟನೆಯ; ನಾಂದಿಯ; ಪ್ರಾರಂಭೋತ್ಸವದ.
  • ಪ್ರತಿಷ್ಠಾಪನೆಯ; ವ್ಯಕ್ತಿಯನ್ನು ಅಧಿಕಾರದಲ್ಲಿ ಸ್ಥಾಪಿಸುವ ಸಮಾರಂಭದ.
  • (ಭಾಷಣ ಮೊದಲಾದವುಗಳ ವಿಷಯದಲ್ಲಿ) ಪ್ರಥಮ; ಪ್ರಾಥಮಿಕ; ಅಧಿಕಾರದಲ್ಲಿ ಸ್ಥಾಪಿಸಲ್ಪಡುತ್ತಿರುವ ವ್ಯಕ್ತಿಯು ಪ್ರಥಮವಾಗಿ ನೀಡುವ.

  • inaugural
    ನಾಮವಾಚಕ
  • ಆರಂಭ ಭಾಷಣ; ಪ್ರಥಮ, ಉಪಕ್ರಮ – ಭಾಷಣ.
  • ಆರಂಭೋತ್ಸವ; ಉದ್ಘಾಟನ ಸಮಾರಂಭ.


  • logo