logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

base
ಗುಣವಾಚಕ
  • (ಹಿಂದೆ) ಕುರುಚಾದ; ಕುಳ್ಳಾದ; ಗಿಡ (ಈಗ ಸಸ್ಯಗಳ ಹೆಸರುಗಳಲ್ಲಿ ಮಾತ್ರ ಬಳಕೆ): base rocket ಕುರುಚಾದ ರಾಕೆಟ್‍ (ಸಸ್ಯ).
  • ನೀಚ; ಹೀನ; ಹಲ್ಕ; ಗೌರವಾರ್ಹವಲ್ಲದ; ಅಯೋಗ್ಯ; ಅಲ್ಪ; ತುಚ್ಛ; ನಿಕೃಷ್ಟ; ಹೇಯ.
  • ಕೀಳು ಕೆಲಸದ; ಗುಲಾಮ ಚಾಕರಿಯ; ದಾಸ್ಯವೃತ್ತಿಯ: base employment ಗುಲಾಮ ಚಾಕರಿ.
  • (ಭಾಷಾಶಾಸ್ತ್ರ) ಕ್ಲ್ಯಾಸಿಕಲ್‍ ಅಲ್ಲದ; ಅಭಿಜಾತವಲ್ಲದ; ಅಶುದ್ಧ; ಪರಿಷ್ಕಾರವಿಲ್ಲದ: base Latin ಅಶುದ್ಧ ಲ್ಯಾಟಿನ್‍ ಭಾಷೆ.
  • ಕೆಳಮಟ್ಟದ; ತೀರ ಸಾಧಾರಣವಾದ.
  • ಖೋಟಾ; ಬೆರಕೆಯ: base coin
    1. ಖೋಟಾ ನಾಣ್ಯ.
    2. ಬೆರಕೆ ಲೋಹಗಳಿಂದ ಮಾಡಿದ ನಾಣ್ಯ.
  • (ನ್ಯಾಯಶಾಸ್ತ್ರ) ಷರತ್ತಿಗೊಳಪಟ್ಟ; ಸೋಪಾಧಿಕ; ಪತ್ರದಲ್ಲಿ ನಮೂದಿಸಿರುವ ಷರತ್ತುಗಳನ್ನು ಪೂರೈಸಿದರೆ ಮಾತ್ರ ದೊರಕುವ, ಒದಗುವ.

  • base coin
    ನಾಮವಾಚಕ
  • ಖೋಟಾ ನಾಣ್ಯ.
  • ಬೆರಕೆ ಲೋಹದ ನಾಣ್ಯ.

  • base hit
    ನಾಮವಾಚಕ
    (ಬೇಸ್‍ಬಾಲ್‍) ಬೇಸ್‍ ಹೊಡೆತ; ಗೊತ್ತು ಹೊಡೆತ; ಬ್ಯಾಟುಗಾರನು ತನ್ನ ಗೊತ್ತನ್ನು ತಲುಪಲು ಅಡ್ಡಿಯಾಗದಂತೆ ಹೊಡೆದ ಹೊಡೆತ.

    base metal
    ನಾಮವಾಚಕ
  • ಕ್ಷುದ್ರಲೋಹ; ಪ್ರಶಸ್ತವೆಂದು ಭಾವಿಸದ, ತವರ, ಸೀಸ, ಸತು ಮೊದಲಾದ ಲೋಹ.
  • (ಮಿಶ್ರಲೋಹದಲ್ಲಿ) ಪ್ರಧಾನ ಲೋಹ.
  • (ಇನ್ನೊಂದು ಲೋಹದ ಹೊದಿಕೆಯುಳ್ಳ) ಒಳಲೋಹ.

  • base-court
    ನಾಮವಾಚಕ
  • (ಶ್ರೀಮಂತ ಗೃಹದಲ್ಲಿ ಯಾ ದುರ್ಗದಲ್ಲಿ) ಸೇವಕರು ವಾಸ ಮಾಡುವ ಕೆಳ(ಗಿನ) ಯಾ ಹೊರ(ಗಿನ) ಅಂಗಳ.
  • (ಹೊಲಮನೆಯ) ಹಿತ್ತಲು; ಬೇಸಾಯಗಾರನ ಮನೆಯ ಹಿಂದಿನ ಅಂಗಳ.

  • baseball
    ನಾಮವಾಚಕ
  • (ಅಮೆರಿಕನ್‍ ಪ್ರಯೋಗ) ಬೇಸ್‍ಬಾಲು; ದಾಂಡಿನಿಂದ ಚೆಂಡನ್ನು ಹೊಡೆದು ಒಂದು ನೆಲೆಯಿಂದ ಇನ್ನೊಂದಕ್ಕೆ ಓಡಿ ಅಂಕ ಗಳಿಸುವ ಅಮೆರಿಕದ ಒಂದು ಆಟ, ಕ್ರೀಡೆ.
  • (ಬೇಸ್‍ಬಾಲ್‍) ಚೆಂಡು.

  • baseboard
    ನಾಮವಾಚಕ
  • (ಅಮೆರಿಕನ್‍ ಪ್ರಯೋಗ) ಹಲಗೆಕಟ್ಟು; ಹಲಗೆಕಾರಣೆ; ಕಾರಣೆ ಪಟ್ಟಿ; ಗೋಡೆಯ ಕೆಳಭಾಗದಲ್ಲಿ ಉದ್ದಕ್ಕೂ ಹದ್ದಿಸಿದ ಹಲಗೆ ಯಾ ಪಟ್ಟಿ.
  • (ಯಾವುದರದೇ) ತಳಹಲಗೆ.

  • baseborn
    ಗುಣವಾಚಕ
  • ಹೀನಕುಲದ; ಕೀಳುಹುಟ್ಟಿನ.
  • ಹಾದರಕ್ಕೆ ಹುಟ್ಟಿದ; ಜಾರಜ.
  • ನೀಚತನದ; ಕೀಳು ಪ್ರವೃತ್ತಿಯ; ನೀಚ ಸ್ವಭಾವದ.

  • basektful
    ನಾಮವಾಚಕ
    = 1basket(2).

    baseless
    ಗುಣವಾಚಕ
    ಬುಡವಿಲ್ಲದ; ನಿರಾಧಾರ; ಆಧಾರರಹಿತ.


    logo