logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

adhibit
ಸಕರ್ಮಕ ಕ್ರಿಯಾಪದ
  • ಹಚ್ಚು; ಅಂಟಿಸು: adhibit label ಹೆಸರು ಪಟ್ಟಿಯನ್ನು ಅಂಟಿಸು.
  • ಔಷಧ ಸೇವನೆ ಮಾಡಿಸು; ಚಿಕಿತ್ಸೆಯಾಗಿ–ಪ್ರಯೋಗಿಸು, ನೀಡು.
  • (ವ್ಯಕ್ತಿ ಮೊದಲಾದವರನ್ನು) ಒಳಕ್ಕೆ–ಹೋಗಗೊಡು, ಬರಮಾಡಿಕೊ.

  • adhibition
    ನಾಮವಾಚಕ
  • ಹಚ್ಚುವಿಕೆ; ಅಂಟಿಸುವಿಕೆ.
  • (ಔಷಧವನ್ನು) ಸೇವನೆ ಮಾಡಿಸುವುದು; ಚಿಕಿತ್ಸೆಯಾಗಿ ನೀಡುವುದು.
  • (ವ್ಯಕ್ತಿ ಮೊದಲಾದವರನ್ನು) ಒಳಕ್ಕೆ ಬಿಡುವುದು; ಪ್ರವೇಶ ಮಾಡಿಸುವುದು.

  • adiabatic
    ಗುಣವಾಚಕ
    (ಭೌತವಿಜ್ಞಾನ) ರುದ್ಧೋಷ್ಮ; ಸ್ಥಿರೋಷ್ಣ; ಸ್ಥಿರಶಾಖ; ಶಾಖ ಹೊರಕ್ಕಾಗಲಿ ಒಳಕ್ಕಾಗಲಿ ಹರಿಯದಿರುವ: adiabatic expansion ರುದ್ಧೋಷ್ಮ, ಸ್ಥಿರೋಷ್ಣ–ವಿಸ್ತರಣೆ.

    adiabatic
    ನಾಮವಾಚಕ
    ರುದ್ಧೋಷ್ಮ ರೇಖೆ ಯಾ ಸೂತ್ರ; ರುದ್ಧೋಷ್ಮ ಪ್ರಕ್ರಿಯೆಯಲ್ಲಿ ಗಾತ್ರ, ಒತ್ತಡ, ತಾಪ, ಮೊದಲಾದವುಗಳಲ್ಲಿ ಯಾವುದಾದರು ಎರಡು ಅಂಶಗಳ ಪರಸ್ಪರ ಸಂಬಂಧವನ್ನು ಸೂಚಿಸುವ ರೇಖೆ ಯಾ ಸೂತ್ರ.

    adiabatically
    ಕ್ರಿಯಾವಿಶೇಷಣ
    ರುದ್ಧೋಷ್ಮ ರೀತಿಯಲ್ಲಿ; ಸ್ಥಿರಶಾಖವಿರುವಂತೆ.

    adiactinic
    ಗುಣವಾಚಕ
    (ರಸಾಯನವಿಜ್ಞಾನ) (ಮಾಧ್ಯಮದ ವಿಷಯದಲ್ಲಿ) ಕ್ರಿಯಾಕರಣ ನಿರೋಧಕ(ವಾದ).

    adiantum
    ನಾಮವಾಚಕ
  • ಹಲಸರಾಜ ಕುಲದ ಜರಿಗಿಡ.
  • ಅಸ್ಪೆಲೆನಿಯಮ್‍ ಕುಲಕ್ಕೆ ಸೇರಿದ ಜರಿಗಿಡ.

  • adiaphorism
    ನಾಮವಾಚಕ
    ಧರ್ಮೋಪೇಕ್ಷೆ; ಧರ್ಮ, ಮತಾಚರಣೆಗಳ ವಿಷಯದಲ್ಲಿ ಔದಾಸೀನ್ಯ, ಅನಾಸಕ್ತಿ.

    adiaphorist
    ನಾಮವಾಚಕ
    ಧರ್ಮೋಪೇಕ್ಷೆ; ದೈವಾಸಕ್ತಿರಹಿತ.

    adiathermic
    ಗುಣವಾಚಕ
    ಉಷ್ಣಾಭೇದ್ಯ; ಉಷ್ಣತರಂಗಗಳು ತೂರಿಹೋಗದಂತೆ ತಡೆಯುವ.


    logo