ಒತ್ತುಸೀಲು; ಒತ್ತುಸೀಸ; ತಂತಿಗಳ ತುದಿಗಳನ್ನು ಭದ್ರಪಡಿಸಲು ಬಳಸುವ ಒತ್ತಿದ ಸೀಸ.
leaden sword
ನಾಮವಾಚಕ
ನಿಷ್ಪ್ರಯೋಜಕ ಯಾ ಕೆಲಸಕ್ಕೆ ಬಾರದ ಕತ್ತಿ.
leadenly
ಕ್ರಿಯಾವಿಶೇಷಣ
ಭಾರವಾಗಿ; ಹೊರೆಯಾಗಿ.
ಜಡವಾಗಿ; ನಿಷ್ಕ್ರಿಯವಾಗಿ.
ಸತ್ವಗುಂದಿಸುವಂತೆ.
leadenness
ನಾಮವಾಚಕ
ಭಾರವಾಗಿರುವಿಕೆ; ಹೊರೆಯಾಗಿರುವಿಕೆ.
ಜಡವಾಗಿರುವಿಕೆ; ನಿಷ್ಕ್ರಿಯವಾಗಿರುವಿಕೆ.
leader
ನಾಮವಾಚಕ
ಪದಗುಚ್ಛ
ನೇತಾರ; ನಾಯಕ; ಮುಂದಾಳು; ಮುಖಂಡ; ಮುಖ್ಯಸ್ಥ; ಮಾರ್ಗದರ್ಶಕ; ಮಾರ್ಗದರ್ಶಿ; ಮುಂದೆ ನಡೆಸುವವನು ಯಾ ಕರೆದೊಯ್ಯುವವನು ಯಾ ದಾರಿತೋರಿಸುವವನು: follow my leader ನನ್ನ ನಾಯಕನನ್ನು ಹಿಂಬಾಲಿಸುವೆ.
(ವಾದ್ಯಮೇಳದ) ಪ್ರಮುಖ ಬಾಜಕ; ಪ್ರಧಾನ ವಾದಕ; (ಬ್ರಿಟನ್ನಿನಲ್ಲಿ) ಪ್ರಧಾನ ಪಿಟೀಲು ವಾದಕ.