logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inaptness
ನಾಮವಾಚಕ
  • ಹೊಂದದಿರುವುದು; ಅನರ್ಹವಾಗಿರುವುದು; ಅನುಚಿತವಾಗಿರುವುದು.
  • ಜಾಣ್ಮೆಯಿಲ್ಲದಿರುವುದು; ಅಕುಶಲತೆ; ಅಕೌಶಲ.

  • inarch
    ಸಕರ್ಮಕ ಕ್ರಿಯಾಪದ
    ಬೆಳೆಯುತ್ತಿರುವ ರೆಂಬೆಯನ್ನು ತಾಯಿಮರದಿಂದ ಕತ್ತರಿಸದೆ ಬೇರೊಂದು ಗಿಡಕ್ಕೆ ಕಸಿ ಕಟ್ಟು.

    inarm
    ಸಕರ್ಮಕ ಕ್ರಿಯಾಪದ
    (ಕಾವ್ಯಪ್ರಯೋಗ) ತಬ್ಬಿಕೊ; ಅಪ್ಪಿಕೊ; ಆಲಿಂಗಿಸು; ತಕ್ಕೈಸು.

    inarticulate
    ಗುಣವಾಚಕ
  • (ಜೀವವಿಜ್ಞಾನ) ಸಂಧಿರಹಿತ; ಕೀಲಿಲ್ಲದ.
  • (ಮಾತಿನ ವಿಷಯದಲ್ಲಿ) ಅಸ್ಫುಟ; ಅಸ್ಪಷ್ಟೋಚ್ಚಾರಣೆಯ; ಸ್ಪಷ್ಟ ಉಚ್ಚಾರಣೆಯಿಲ್ಲದ; ಸ್ಫುಟವಾಗಿ ಉಚ್ಚರಿಸದ.
  • (ಭಾವೋದ್ವೇಗ ಮೊದಲಾದ ಕಾರಣಗಳಿಂದ) ಅವಾಕ್ಕಾದ; ಮಾತನಾಡಲಾರದ; ಮಾತು ಹೊರಡದ; ಮೂಕನಾದ: inarticulate with excitement ಸಂಭ್ರಮದಿಂದ ಮೂಕನಾದ.
  • ಮೂಕನಾದ; ವಾಕ್‍ಶಕ್ತಿಯಿಲ್ಲದ; ಮಾತನಾಡಲು ಬರದ.
  • ಮನಸ್ಸಿನಲ್ಲಿರುವುದನ್ನು ಸ್ಪಷ್ಟಪಡಿಸಲಾರದ, ತಿಳಿಯುವಂತೆ ಹೇಳಲು ಬಾರದ.

  • inarticulately
    ಕ್ರಿಯಾವಿಶೇಷಣ
  • ಅಸ್ಪಷ್ಟವಾಗಿ; ಸ್ಫುಟವಾಗಿ ಉಚ್ಚರಿಸದೆ.
  • (ಭಾವೋದ್ವೇಗ ಮೊದಲಾದ ಕಾರಣದಿಂದ) ಮಾತು ಹೊರಡದೆ; ಅವಾಕ್ಕಾಗಿ; ಮೂಕನಾಗಿ.
  • ಮಾತುಬಾರದೆ; ಮೂಕನಾಗಿ.
  • ಮನಸ್ಸಿನಲ್ಲಿರುವುದನ್ನು ಸ್ಪಷ್ಟಪಡಿಸಲಾರದೆ.

  • inarticulateness
    ನಾಮವಾಚಕ
  • ಅಸ್ಪಷ್ಟೋಚ್ಚಾರಣೆ.
  • (ಭಾವೋದ್ವೇಗ ಮೊದಲಾದ ಕಾರಣಗಳಿಂದ) ಮಾತು ಹೊರಡದಿರುವುದು; ಮೂಕತೆ.
  • ಮಾತು ಬಾರದಿರುವಿಕೆ.
  • ತಿಳಿಯುವಂತೆ ನುಡಿಯಲು ಬಾರದಿರುವಿಕೆ.

  • inartificial
    ಗುಣವಾಚಕ
  • (ಪ್ರಾಚೀನ ಪ್ರಯೋಗ) ಕಲಾವಂತಿಕೆಯಿಲ್ಲದ; ಕಲಾಕೌಶಲವಿಲ್ಲದ.
  • (ಕಲೆಯ) ಬೆಡಗಿಲ್ಲದ; ಅಕೃತಕ; ಸಹಜ; ಸ್ವಾಭಾವಿಕ; ನೈಜ.

  • inartificially
    ಕ್ರಿಯಾವಿಶೇಷಣ
  • (ಪ್ರಾಚೀನ ಪ್ರಯೋಗ) ಕಲಾವಂತಿಕೆಯಿಲ್ಲದೆ; ಕಲಾಕೌಶಲವಿಲ್ಲದೆ.
  • (ಕಲೆಯ) ಬೆಡಗಿಲ್ಲದೆ; ನೈಜವಾಗಿ; ಸಹಜವಾಗಿ; ಸ್ವಾಭಾವಿಕವಾಗಿ.

  • inartistic
    ಗುಣವಾಚಕ
  • ಕಲಾತತ್ತ್ವಗಳನ್ನನುಸರಿಸದ; ಕಲಾತತ್ತ್ವಗಳಿಗನುಸಾರವಾಗಿಲ್ಲದ.
  • ಕಲಾಕುಶಲತೆಯಿಲ್ಲದ; ಕಲಾಚಾತುರ್ಯವಿಲ್ಲದ; ಕಲಾವಂತಿಕೆಯಿಲ್ಲದ; ಕಲಾತ್ಮಕವಲ್ಲದ.
  • ಅರಸಿಕ; ಕಲಾಭಿರುಚಿಯಿಲ್ಲದ; ಕಲಾಭಿಜ್ಞತೆಯಿಲ್ಲದ; ರಸಿಕತೆಯಿಲ್ಲದ.

  • inartistically
    ಕ್ರಿಯಾವಿಶೇಷಣ
  • ಕಲಾತತ್ತ್ವಗಳನ್ನನುಸರಿಸದೆ; ಕಲಾತತ್ತ್ವಗಳಿಗನುಸಾರವಾಗಿರದೆ.
  • ಕಲಾವಂತಿಕೆಯಿಲ್ಲದೆ; ಕಲಾತ್ಮಕವಾಗಿರದೆ; ಕಲಾಕೌಶಲವಿಲ್ಲದೆ.
  • ಕಲಾಭಿರುಚಿಯಿಲ್ಲದೆ.


  • logo