logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

basal metabolism
ನಾಮವಾಚಕ
(ಶರೀರ ವಿಜ್ಞಾನ) ಕನಿಷ್ಠ ಮೆಟಬಾಲಿಸಂ; ಉಪವಾಸದ ಯಾ ವಿಶ್ರಾಂತಿಯ ಸ್ಥಿತಿಯಲ್ಲಿರುವ ಜೀವಿಯೊಂದು ಉತ್ಪಾದಿಸುವ ಯಾ ಬಳಸುವ ಉಷ್ಣದ ಯಾ ಶಕ್ತಿಯ ಪ್ರಮಾಣ.

basalt
ನಾಮವಾಚಕ
  • ಬಸಾಲ್ಟು; ಗಾಢ ಹಸಿರು ಯಾ ಕಂದುಬಣ್ಣದ, ಸಾಂದ್ರವಾದ, ಸಾಮಾನ್ಯವಾಗಿ ಸ್ತಂಭದಂಥ ರಚನೆಯುಳ್ಳ, ಲಾವಾ ಪ್ರವಾಹದ ಅಗ್ನಿಶಿಲೆ.
  • (ವೆಜ್‍ವುಡ್‍ ಕಂಡುಹಿಡಿದ) ಕರಿಪಿಂಗಾಣಿ.

  • basaltic
    ಗುಣವಾಚಕ
    ಬಸಾಲ್ಟಿನ; ಅಗ್ನಿಶಿಲೆಯ, ಅದಕ್ಕೆ ಸಂಬಂಧಿಸಿದ, ಅದನ್ನುಳ್ಳ ಯಾ ಅದನ್ನು ಹೋಲುವ.

    basaltiform
    ಗುಣವಾಚಕ
    ಬಸಾಲ್ಟಿನಂಥ; ಬಸಾಲ್ಟ್‍ ಆಕೃತಿಯ.

    basan
    ನಾಮವಾಚಕ
    (ಓಕ್‍ ಯಾ ಲಾರ್ಚ್‍ ತಿಗುಡಿನಿಂದ) ಹದಮಾಡಿದ ಕುರಿಚರ್ಮ.

    basanite
    ನಾಮವಾಚಕ
    ಬ್ಯಾಸನೈಟ್‍; ಒರೆಗಲ್ಲು; ನಿಕಷ; ಚಿನ್ನಬೆಳ್ಳಿಗಳ ಶುದ್ಧತೆಯನ್ನು ಪರೀಕ್ಷಿಸಲು ತಿಕ್ಕಿನೋಡುವ, ಸಿಲಿಕ ಭರಿತ ಕಪ್ಪು ಕಲ್ಲು.

    bascule
    ನಾಮವಾಚಕ
    ಸಮಸನ್ನೆ; ಎತ್ತು ಸೇತುವೆಯಲ್ಲಿ ಬಳಸುವ, ತಕ್ಕಡಿಯಂಥ ಸನ್ನೆ ಕೋಲು.

    bascule-bridge
    ನಾಮವಾಚಕ
    (ಸಮಸನ್ನೆಯಿಂದ ಮೇಲಕ್ಕೆ ಏರಿಸುವ ಯಾ ಕೆಳಕ್ಕೆ ಇಳಿಸುವ) ಎತ್ತು ಸೇತುವೆ.

    base
    ನಾಮವಾಚಕ ನುಡಿಗಟ್ಟು
  • ಅವಲಂಬನ; ಆಧಾರ; ಆಸರೆ; ವಸ್ತು ಯಾ ವಿಷಯ ಯಾವುದರ ಮೇಲೆ ನಿಂತಿದೆಯೋ ಯಾ ಅವಲಂಬಿಸಿದೆಯೋ ಅದು.
  • ತಳ; ಪಾಯ; ಅಸ್ತಿಭಾರ; ಅಡಿಪಾಯ; ತಳಹದಿ.
  • ಮೂಲತತ್ತ್ವ; ಮೂಲಾಧಾರ; ನೆಲೆಗಟ್ಟು.
  • ಆದಿ; ಮೂಲ; ಪ್ರಾರಂಭ; ಕೆಲಸ ಯಾ ಎಣಿಕೆ ಪ್ರಾರಂಭಿಸುವ ಎಡೆ.
  • (ವಾಸ್ತುಶಿಲ್ಪ) ಸುಣ್ಣಪಾದ; ಪೀಠಕ್ಕೂ ಕಂಬಕ್ಕೂ ನಡುವಣ ಕಂಬದ ಭಾಗ.
  • (ಸಸ್ಯವಿಜ್ಞಾನ, ಜೀವವಿಜ್ಞಾನ) ಅಂಗಮೂಲ; ಅವಯವದ, ಅಂಗದ – ಮೂಲ, ಬುಡ; ಅಂಗ ಯಾ ಅಂಗ ಭಾಗವು ಪ್ರಧಾನ ಭಾಗಕ್ಕೆ ಸೇರಿರುವ ಕೊನೆ.
  • (ಜ್ಯಾಮಿತಿ) (ಸಮತಲವಾಗಲಿ, ಘನಾಕೃತಿಯಾಗಲಿ ನಿಂತಿರುವ) ತಳರೇಖೆ; ಆಧಾರ ರೇಖೆ; ಆಧಾರ ತಲ; base of a triangle ತ್ರಿಕೋಣದ ತಳ ರೇಖೆ.
  • (ರಸಾಯನವಿಜ್ಞಾನ) ಪ್ರತ್ಯಾಮ್ಲ; ಆಮ್ಲಗಳೊಂದಿಗೆ ವರ್ತಿಸಿ ಲವಣವನ್ನೂ ನೀರನ್ನೂ ಉತ್ಪತ್ತಿ ಮಾಡುವ ಸ್ವಭಾವಸಿದ್ಧ ರಾಸಾಯನಿಕ ಗುಣವುಳ್ಳ ಸಂಯುಕ್ತ.
  • (ಸೈನ್ಯದ ಯಾ ಅನ್ವೇಷಣ ಯಾತ್ರೆಯ)
    1. ಹಿಂಬೀಡು; ಮೂಲಠಾಣ್ಯ; ಬೇಕಾದ ಸಾಮಾನು ಸರಂಜಾಮು, ಆಸ್ಪತ್ರೆ, ಮೊದಲಾದವುಗಳು ಇರುವ, ಸೇನೆಯ ಯಾ ಅನ್ವೇಷಣ ತಂಡದ ಹಿಂಭಾಗದಲ್ಲಿರುವ ನಗರ ಯಾ ಪ್ರದೇಶ.
    2. ಕಾರ್ಯಾಚರಣೆ ಕೇಂದ್ರ; ಕಾರ್ಯಕೇಂದ್ರ; ಮೂಲ ಯಾ ಕೇಂದ್ರ ಕಾರ್ಯಸ್ಥಾನ.
  • (ಸರ್ವೆ) ಜ್ಯಾಮಿತೀಯ ಆಧಾರ ರೇಖೆ.
  • (ಗಣಿತ) ಆಧಾರ; ಮೂಲ ಸಂಖ್ಯೆ; ಆಧಾರ ಸಂಖ್ಯೆ; ಲಾಗರಿತಮ್‍ಗಳ ಗಣನೆಯಲ್ಲಿ ಯಾವ ಸಂಖ್ಯೆಯ ಘಾತವನ್ನು ಪರಿಗಣಿಸುವೆವೋ ಆ ಸಂಖ್ಯೆ.
  • (ಯಾವುದೇ ಮಿಶ್ರಣದ) ಮುಖ್ಯ ಘಟಕ; ಪ್ರಧಾನಾಂಶ.
  • (ಬೇಸ್‍ಬಾಲ್‍ ಆಟದಲ್ಲಿ) ಗೊತ್ತು; ರನ್ನು ಗಳಿಸಲು ಒಂದರಿಂದ ಓಡಿ ನಿಲ್ಲಬೇಕಾದ ನಾಲ್ಕು ನಿರ್ದಿಷ್ಟ ಜಾಗಗಳಲ್ಲಿ ಒಂದು.
  • (ಹಾಕಿ ಮೊದಲಾದ ಆಟಗಳಲ್ಲಿ) ಗೋಲು; ನೆಲೆ; ಕಟ್ಟೆ.
  • (ವ್ಯಾಕರಣ) ಧಾತು; ಪ್ರಕೃತಿ; ಪ್ರತ್ಯಯಗಳನ್ನು ಹಚ್ಚಬಹುದಾದ ಮೂಲ ಪದಾಂಶ.
  • (ವಂಶಲಾಂಛನ ವಿದ್ಯೆ) (ಗುರಾಣಿಯ) ತಳ; ಕೆಳಭಾಗ; ಬುಡ.
  • (ಚಿತ್ರಣ) ಬೇಸು; (ಬಣ್ಣ ಮಾಸಿ ಹೋಗದೆ ನಿಲ್ಲುವಂತೆ ಮಾಡುವ) ಗಚ್ಚು; ಬಣ್ಣ ಗಚ್ಚು.
  • (ಬಣ್ಣ ಬಳಿಯುವುದರಲ್ಲಿ) ತಳ ಬಳಿತ; ಮೊದಲ ಯಾ ಆಧಾರ – ಲೇಪ; ತಳಲೇಪ.
  • ಆಧಾರ; ಛಾಯಾಚಿತ್ರ ಫಿಲ್ಮಿಗೆ ಬಳಸುವ ಪಾರದರ್ಶಕ ಆಧಾರ ಯಾ ಛಾಯಾಚಿತ್ರ ಕಾಗದದ ಆಧಾರ.
  • ಬೇಸ್‍; ಟ್ರಾನ್ಸಿಸ್ಟರಿನ ಮೂರು ಇಲೆಕ್ಟ್ರೋಡುಗಳಲ್ಲಿ ಮಧ್ಯದ್ದು.

  • base
    ಸಕರ್ಮಕ ಕ್ರಿಯಾಪದ ಪದಗುಚ್ಛ ನುಡಿಗಟ್ಟು
    base oneself on (ವಾದವಿವಾದ ಮೊದಲಾದವುಗಳಲ್ಲಿ) ಅವಲಂಬಿಸು; ಆಧರಿಸು.
  • (ಯಾವುದಾದರೂ ಒಂದರ ಮೇಲೆ) ಸ್ಥಾಪಿಸು; ಇಡು.
  • (ಭದ್ರವಾಗಿ) ಸ್ಥಾಪಿಸು; ನೆಲೆಗೊಳಿಸು.


  • logo