logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

adherence
ನಾಮವಾಚಕ
  • ಅಂಟಿಕೆ; ಅಂಟಿಕೊಳ್ಳುವಿಕೆ; ಹತ್ತಿಕೊಳ್ಳುವಿಕೆ; ಸಂಸಕ್ತಿ.
  • (ರೂಪಕವಾಗಿ) (ವ್ಯಕ್ತಿ, ಸಂಸ್ಥೆ, ಮೊದಲಾದವಕ್ಕೆ) ಅಂಟಿಕೊಂಡಿರುವಿಕೆ; ನಿಷ್ಠೆ.
  • (ಆಚಾರ, ತತ್ತ್ವ, ಮೊದಲಾದವುಗಳ) ದೃಢವಾದ ಪಾಲನೆ; ನಿಷ್ಠಾವಂತ ಅನುಸರಣೆ: an uncompromising adherence to what is right ಸರಿಯಾಗಿರುವುದರ ದೃಢವಾದ ಪಾಲನೆ.

  • adherent
    ಗುಣವಾಚಕ
  • (ಯಾವುದೇ ವಸ್ತುವಿಗೆ) ಅಂಟಿಕೊಳ್ಳುವ; ಕಚ್ಚಿಕೊಳ್ಳುವ; ಸಂಸಕ್ತ.
  • (ರೂಪಕವಾಗಿ) (ವ್ಯಕ್ತಿ, ಸಂಸ್ಥೆ, ಮೊದಲಾದವಕ್ಕೆ) ಅಂಟಿಕೊಂಡಿರುವ; ನಿಷ್ಠನಾದ.

  • adherent
    ನಾಮವಾಚಕ
    (ವ್ಯಕ್ತಿ, ಪಕ್ಷ, ತತ್ತ್ವ, ಮೊದಲಾದವಕ್ಕೆ) ನಿಷ್ಠ(ನಾಗಿರುವವ); (ಬಿಡದೆ) ಅಂಟಿಕೊಂಡಿರುವವ; ಅನುಯಾಯಿ; ಬೆಂಬಲಿಗ; ಪಕ್ಷವರ್ತಿ.

    adhesion
    ನಾಮವಾಚಕ ನುಡಿಗಟ್ಟು
    give one’s adhesion to
  • ಅಂಟಿಕೊಳ್ಳುವಿಕೆ; ಹತ್ತಿಕೊಳ್ಳುವಿಕೆ (ರೂಪಕವಾಗಿ ಸಹ).
  • ಆಸಂಜನ; ಸಂಸಕ್ತಿ:
    1. (ಭೌತವಿಜ್ಞಾನ) ಎರಡು ಕಾಯಗಳ ತಲಗಳು ಸಂಧಿಸುವಾಗ ಅವುಗಳು ಅಂಟಿಕೊಳ್ಳಲು ಕಾರಣವಾದ ಅಣುಗಳ ಪರಸ್ಪರ ಆಕರ್ಷಣೆ.
    2. (ರೋಗಶಾಸ್ತ್ರ) ಊತದಿಂದ ಎರಡು ಮೈಗಳು ಅಂಟಿಕೊಳ್ಳುವುದು.
    3. ಚಕ್ರಗಳು ಮತ್ತು ರಸ್ತೆ ಯಾ ರೈಲುಕಂಬಿಗಳ ನಡುವೆ ಸಂಪರ್ಕವಿರುವುದು.

  • adhesive
    ಗುಣವಾಚಕ
  • (ವಸ್ತುವಿನ ವಿಷಯದಲ್ಲಿ) ಅಂಟುಗುಣದ; ಅಂಟುವ.
  • ಅಂಟಂಟಾದ; ಅಂಟು, ಗೋಂದು–ಹಾಕಿದ, ಹಚ್ಚಿದ.

  • adhesive
    ನಾಮವಾಚಕ
  • ಅಂಟು; ಸರಿ; ಗೋಂದು.
  • ಅಂಟಿಕೊಳ್ಳುವ–ವಸ್ತು, ಪದಾರ್ಥ.
  • ಅಂಟು (ಬೆನ್ನಿನ) ಅಂಚೆ ಚೀಟಿ.

  • adhesive plaster
    ನಾಮವಾಚಕ
    = adhesive tape.

    adhesive tape
    ನಾಮವಾಚಕ
    ಅಂಟುಪಟ್ಟಿ; ಗಾಯ ಮೊದಲಾದವುಗಳ ಮೇಲಿನ ಪಟ್ಟಿಯನ್ನು ಸರಿಯದಂತೆ ಅದರ ಜಾಗದಲ್ಲಿ ಹಿಡಿದಿಡುವ, ಸಾಮಾನುಗಳ ಕಟ್ಟು ಮೊದಲಾದವನ್ನು ಬಿಗಿಸಲು ಬಳಸುವ, ಒಂದು ಪಕ್ಕದಲ್ಲಿ ಅಂಟು ಸವರಿದ ಹತ್ತಿ, ಕಾಗದ, ಪ್ಲಾಸ್ಟಿಕ್‍, ಮೊದಲಾದವುಗಳ ಉದ್ದನೆಯ ಪಟ್ಟಿ.

    adhesively
    ಕ್ರಿಯಾವಿಶೇಷಣ
    ಅಂಟಿಕೊಳ್ಳುವಂತೆ.

    adhesiveness
    ನಾಮವಾಚಕ
  • ಅಂಟಿಕೊಳ್ಳುವ ಗುಣ; ಅಂಟಿಕೆ; ಅಂಟುತನ.
  • (ವ್ಯಕ್ತಿಗಳ ವಿಷಯದಲ್ಲಿ) ಅಂಟುಗುಳಿತನ.


  • logo