logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

onscreen
ಕ್ರಿಯಾವಿಶೇಷಣ
  • ತೆರೆಯ ಮೇಲೆ ಕಾಣಿಸುವಂತೆ.
  • ಸಿನಿಮಾ ದೃಶ್ಯದ ಮೂಲಕ ತೋರಿಸಿರುವ ದೃಷ್ಟಿಯ ಪರಿಧಿಯಲ್ಲಿ.

  • onset
    ನಾಮವಾಚಕ
  • ಆಕ್ರಮಣ; ದಾಳಿ; ಹಲ್ಲೆ; ಮೇಲೆರಗುವಿಕೆ; ಮೇಲೆ ಬೀಳುವಿಕೆ.
  • (ಮುಖ್ಯವಾಗಿ) ಬಿರುಸಾದ ಯಾ ದೃಢವಾದ ಪ್ರಾರಂಭ: at the first onset ಮೊದಲಿನ ಬಿರುಸಿನಲ್ಲಿಯೇ.

  • onshore
    ಗುಣವಾಚಕ
  • (ಸಮುದ್ರ ಮೊದಲಾದವುಗಳ) ತೀರದಲ್ಲಿರುವ.
  • (ಗಾಳಿಯ ವಿಷಯದಲ್ಲಿ) ಸಮುದ್ರದ ಕಡೆಯಿಂದ ಭೂಮಿಯ ಕಡೆಗೆ ಬೀಸುತ್ತಿರುವ; ಭೂಮುಖವಾಗಿರುವ.

  • onside
    ಗುಣವಾಚಕ
    (ಮೈದಾನದಲ್ಲಿ ಆಡುವ ಆಟದ ಆಟಗಾರನ ವಿಷಯದಲ್ಲಿ) ಆನ್‍ಸೈಡಿನ; ನಿಯಮಾನುಸಾರಿಯಾದ ಸ್ಥಾನದಲ್ಲಿರುವ; ‘ಆಹ್‍ಸೈಡ್‍’ ಅಲ್ಲದ.

    onslaught
    ನಾಮವಾಚಕ
    ತೀವ್ರ–ದಾಳಿ, ಹಲ್ಲೆ, ಆಕ್ರಮಣ.

    Ont.
    ಸಂಕ್ಷಿಪ್ತ
    Ontario.

    onto
    ಉಪಸರ್ಗ
    (ಸಂದಿಗ್ಧ ಪ್ರಯೋಗ) ಒಂದರ ಮೇಲೆ ಯಾ ಸಂಯೋಗದಲ್ಲಿ ಇರುವ: we drove onto the beach ನಾವು ದಡ ಮುಟ್ಟಿದೆವು, ಏರಿದೆವು. (we drove on to the beach ನಾವು ದಡದತ್ತ ಓಡಿಸಿದೆವು).

    onto-
    ಸಮಾಸ ಪೂರ್ವಪದ
    ಇರುವ, ಅಸ್ತಿತ್ವವುಳ್ಳ ಎಂಬರ್ಥದ, ಹುಟ್ಟು, ವಿಕಾಸಗಳನ್ನು ಸೂಚಿಸುವ ಸಮಾಸ ಪೂರ್ವಪದ: ontogenesis, ontogenetic, ontogenetically, ontogeny.

    ontogenesis
    ನಾಮವಾಚಕ
    ವ್ಯಕ್ತಿಜನನ; ವ್ಯಕ್ತಿಯ ಹುಟ್ಟು ಮತ್ತು ಬೆಳವಣಿಗೆ, ಜನನ ಮತ್ತು ವಿಕಾಸ.

    ontogenetic
    ಗುಣವಾಚಕ
    ವ್ಯಕ್ತಿಜನನದ ಯಾ ಅದಕ್ಕೆ ಸಂಬಂಧಿಸಿದ; ವ್ಯಕ್ತಿಯ ಹುಟ್ಟು ಮತ್ತು ಬೆಳವಣಿಗೆಯ ಯಾ ಅವಕ್ಕೆ ಸಂಬಂಧಿಸಿದ.


    logo