logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inappreciation
ನಾಮವಾಚಕ
ಅನಾಸ್ವಾದನ; ಗುಣಾಗ್ರಹಣ; ಯೋಗ್ಯತೆಯನ್ನು, ಗುಣವನ್ನು, ಸ್ವಾರಸ್ಯವನ್ನು – ಅರಿಯದೆ ಹೋಗುವುದು.

inappreciative
ಗುಣವಾಚಕ
ಗುಣ ಗ್ರಹಿಸದ; ಯೋಗ್ಯತೆಯನ್ನು, ಗುಣವನ್ನು, ಸ್ವಾರಸ್ಯವನ್ನು – ಅರಿಯದ.

inapprehensible
ಗುಣವಾಚಕ
ಅಗ್ರಾಹ್ಯ; ಅಜ್ಞೇಯ; ಇಂದ್ರಿಯಗಳಿಂದ ಯಾ ಬುದ್ಧಿಯಿಂದ ಗ್ರಹಿಸಲಾಗದ.

inapproachable
ಗುಣವಾಚಕ
  • ಸಈಪಿಸಲಾಗದ; ಹತ್ತಿರ ಸುಳಿಯಲಾಗದ; ಹತ್ತಿರ ಬರಲು ಎಡೆಗೊಡದ.
  • ಎಣೆಯಿಲ್ಲದ; ಅನುಪಮ; ಅಸದೃಶ; ಅಸಮಾನ.

  • inappropriate
    ಗುಣವಾಚಕ
    ತಕ್ಕದ್ದಲ್ಲದ; ಅನುಚಿತ; ಅಯುಕ್ತ; ಅಸಮಂಜಸ; ಹೊಂದದ.

    inappropriately
    ಕ್ರಿಯಾವಿಶೇಷಣ
    ಅನುಚಿತವಾಗಿ; ಅಸಮಂಜಸವಾಗಿ; ತಕ್ಕದ್ದಲ್ಲದ ರೀತಿಯಲ್ಲಿ.

    inappropriateness
    ನಾಮವಾಚಕ
    ಅಸಾಮಂಜಸ್ಯ; ತಕ್ಕದ್ದಲ್ಲದಿರುವುದು; ಅನುಚಿತವಾಗಿರುವುದು.

    inapt
    ಗುಣವಾಚಕ
  • ಹೊಂದದ; ಅರ್ಹವಲ್ಲದ; ತಕ್ಕುದಾಗಿಲ್ಲದ; ಅನರ್ಹ; ಅನುಚಿತ.
  • ಜಾಣ್ಮೆಯಿಲ್ಲದ; ಕುಶಲತೆಯಿಲ್ಲದ; ಅಕುಶಲ; ಅಚತುರ.

  • inaptitude
    ನಾಮವಾಚಕ
  • ಅನರ್ಹತೆ; ಹೊಂದದಿರುವುದು; ತಕ್ಕುದಾಗಿಲ್ಲದಿರುವುದು.
  • ಅಕೌಶಲ; ಜಾಣ್ಮೆಯಿಲ್ಲದಿರುವುದು: another name for the inaptitude of national cookery ನಾಡಿನ ಪಾಕಕೌಶಲದ ಅಭಾವಕ್ಕೆ ಇನ್ನೊಂದು ಹೆಸರು.

  • inaptly
    ಕ್ರಿಯಾವಿಶೇಷಣ
  • ಹೊಂದಿಕೆಯಾಗದೆ.
  • ಕೌಶಲವಿಲ್ಲದೆ.


  • logo