logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

baryphony
ನಾಮವಾಚಕ
(ವೈದ್ಯಶಾಸ್ತ್ರ) ನುಡಿ – ಮಾಂದ್ಯ, ತೊಂದರೆ, ಕಷ್ಟ; ವಾಗ್ಬಾಧೆ; ವಾಕ್ಕಷ್ಟ; ಮಾತನಾಡಲು ಕಷ್ಟವಾಗಿರುವುದು.

barysphere
ನಾಮವಾಚಕ
(ಭೂವಿಜ್ಞಾನ) ಭಾರಗೋಳ; ಭೂಮಿಯ ಶಿಲಾಗೋಳದ ಒಳಗಡೆ ಇರುವ ಭಾರವಾದ ಭಾಗ.

baryta
ನಾಮವಾಚಕ
(ರಸಾಯನವಿಜ್ಞಾನ) ಬರೈಟ; ಬೇರಿಯಂ ಆಕ್ಸೈಡು ಯಾ ಹೈಡ್ರಾಕ್ಸೈಡು.

barytes
ನಾಮವಾಚಕ
(ಲೋಹವಿದ್ಯೆ) (ಕೆಲವು ಬಿಳಿಯ ಬಣ್ಣಗಳಲ್ಲಿ ಬಳಸುವ) ಬರೈಟೀಸ್‍; ಬೇರಿಯಂ ಸಲೆಟ್‍ ಉಳ್ಳ, ಬೇರಿಯಮ್ಮಿನ ಮುಖ್ಯ ಖನಿಜ.

barytic
ಗುಣವಾಚಕ
ಬರೈಟದ; ಬರೈಟಿನ ಯಾ ಅದಕ್ಕೆ ಸಂಬಂಧಿಸಿದ.

barytone
ನಾಮವಾಚಕ
  • = 1baritone.
  • (ಗ್ರೀಕ್‍ ವ್ಯಾಕರಣ) ಅನುದಾತ್ತಾಂತ ಪದ; ಕೊನೆಯ ಉಚ್ಚಾರಾಂಶ ಅನುದಾತ್ತವಾಗಿರುವ ಪದ.

  • barytone
    ಗುಣವಾಚಕ
  • = 2baritone.
  • (ಗ್ರೀಕ್‍ ವ್ಯಾಕರಣ) ಅನುದಾತ್ತಾಂತ; ಕೊನೆಯ ಉಚ್ಚಾರಾಂಶ ಅನುದಾತ್ತವಾಗಿರುವ.

  • bas bleu
    ನಾಮವಾಚಕ
    = bluestocking.

    bas-relief
    ನಾಮವಾಚಕ
  • ಉಚ್ಚಿತ್ರ; ಅರ್ಧೋನ್ನತ ಚಿತ್ರ; ಅರೆಯುಬ್ಬು ಶಿಲ್ಪ; ಹಿನ್ನೆಲೆಯಿಂದ ಸಾಮಾನ್ಯವಾಗಿ ಅರ್ಧ ಪ್ರಮಾಣಕ್ಕೆ ಮಾತ್ರ ಉಬ್ಬಿರುವಂತೆ ಕೊರೆದ ಯಾ ಕೆತ್ತಿದ ಚಿತ್ರ.
  • ಅರೆಯುಬ್ಬು ಕೆತ್ತನೆ; ಉಚ್ಚಿತ್ರಣ.

  • basal
    ಗುಣವಾಚಕ
  • ತಳದ.
  • ತಳದ ಬಳಿಯ.
  • ತಳವಾದ; ತಳವಾಗಿರು.
  • ತಳಹದಿಯಾದ; ಮೂಲಭೂತ; ಆಧಾರಭೂತವಾದ.
  • (ವೈದ್ಯಶಾಸ್ತ್ರ) ಕನಿಷ್ಠಮಿತಿಯ.
  • (ಸಸ್ಯವಿಜ್ಞಾನ) ಬುಡದ; ತಳದ; ಕಾಂಡದ ತಳದಿಂದ ಬೆಳೆಯುವ.


  • logo