logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

adenoma
ನಾಮವಾಚಕ
(ರೋಗಶಾಸ್ತ್ರ) ಆಡಿನೋಮ:
  • ಸ್ರಾವಕ ಗ್ರಂಥಿಯಲ್ಲಿ ಹುಟ್ಟುವ ಅಪಾಯಕಾರಿಯಲ್ಲದ ಗೆಡ್ಡೆ.
  • ಗ್ರಂಥಿಯಂಥ ರಚನೆಯುಳ್ಳ ಅಪಾಯಕಾರಿಯಲ್ಲದ ಗೆಡ್ಡೆ.

  • adenosine
    ನಾಮವಾಚಕ
    (ರಸಾಯನವಿಜ್ಞಾನ) ಅಡೆನಸಿನ್‍; ಆರ್‍ಎನ್‍ಎಯಲ್ಲಿ (ರೈಬೊನ್ಯೂಕ್ಲೀಯಿಕ್‍ ಆಮ್ಲದಲ್ಲಿ) ಕಂಡುಬರುವ, ಅಡೆಸೀನ್‍ ಮತ್ತು ರೈಬೋಸ್‍ಗಳ ಸಂಯೋಗದಿಂದ ಉಂಟಾಗುವ ನ್ಯೂಕ್ಲಿಯೊಸೈಡ್‍, ${\rm C}_{10}{\rm H}_{13}{\rm N}_5{\rm O}_4$.

    adept
    ನಾಮವಾಚಕ
  • (ಯಾವುದೇ ವಿಷಯದಲ್ಲಿ) ನಿಪುಣ; ಪಟು; ಸಮರ್ಥ; ಕುಶಲ; ಪ್ರವೀಣ.
  • (ರಸಾಯನವಿಜ್ಞಾನ) ರಸವಿದ್ಯಾನಿಪುಣ.

  • adept
    ಗುಣವಾಚಕ
    (ಯಾವುದೇ ವಿಷಯದಲ್ಲಿ) ನಿಪುಣ; ಪ್ರವೀಣ(ನಾದ).

    adequacy
    ನಾಮವಾಚಕ
  • (ಆವಶ್ಯಕತೆಗಳಿಗೆ) ತಕ್ಕಷ್ಟು; ಬೇಕಾದಷ್ಟು; ಸಾಕಾದಷ್ಟು (ಇರುವುದು); ಪರ್ಯಾಪ್ತಿ.
  • ಸಮರ್ಪಕತೆ.

  • adequate
    ಗುಣವಾಚಕ
  • (ಆವಶ್ಯಕತೆಗಳಿಗೆ) ತಕ್ಕಷ್ಟು; ಬೇಕಾದಷ್ಟು; ಸಾಕಾದಷ್ಟು; ಪರ್ಯಾಪ್ತ.
  • ಸಮರ್ಪಕವಾದ; ಯಥಾಯೋಗ್ಯ: adequate proof ಸಮರ್ಪಕವಾದ–ಸಾಕ್ಷ್ಯ, ರುಜುವಾತು.
  • ಬೇಕಾದಷ್ಟು, ಸಾಕಾಗುವಷ್ಟು–ಮಾತ್ರದ: the violinist gave only an adequate performance ಪಿಟೀಲು ವಾದಕ ಸಾಕಾಗುವಷ್ಟು ಮಾತ್ರ ನುಡಿಸಿದ.
  • (ನ್ಯಾಯಶಾಸ್ತ್ರ) (ಕೋರ್ಟಿನಲ್ಲಿ ಕ್ರಮಜರುಗಿಸಲು) ಸಾಕಾದಷ್ಟು: adequate grounds ಸಾಕಾದಷ್ಟು ಆಧಾರಗಳು.

  • adequately
    ಕ್ರಿಯಾವಿಶೇಷಣ
  • (ಆವಶ್ಯಕತೆಗಳಿಗೆ) ತಕ್ಕಷ್ಟು; ಬೇಕಾದಷ್ಟು; ಸಾಕಾದಷ್ಟು; ಪರ್ಯಾಪ್ತವಾಗಿ.
  • ಸಮರ್ಪಕವಾಗಿ.

  • adespota
    ನಾಮವಾಚಕ
    (ಬಹುವಚನ) ಅನಾಮಕ ಸಾಹಿತ್ಯ ಗ್ರಂಥಗಳು; ಅಜ್ಞಾತಕರ್ತೃಕಗಳು; ಲೇಖಕನು ಯಾರೆಂದು ತಿಳಿಯದ ಯಾ ಯಾರೂ ತಮ್ಮದೆಂದು ಹೇಳದಿರುವ ಗ್ರಂಥಗಳು.

    adevism
    ನಾಮವಾಚಕ
    ಅದೇವತಾವಾದ; ಪುರಾಣ ದೇವತೆಗಳ ನಿರಾಕರಣೆ.

    adhere
    ಅಕರ್ಮಕ ಕ್ರಿಯಾಪದ
  • (ಯಾವುದೇ ವಸ್ತುವಿಗೆ) ಅಂಟಿಕೊ; ಹತ್ತಿಕೊ; ಕಚ್ಚಿಕೊ; ಸಂಸಕ್ತವಾಗು.
  • (ರೂಪಕವಾಗಿ) (ವ್ಯಕ್ತಿಗೆ, ಸಂಸ್ಥೆಗೆ, ತತ್ತ್ವ, ಮೊದಲಾದವಕ್ಕೆ) ಅಂಟಿಕೊಂಡಿರು; ನಿಷ್ಠನಾಗಿರು.
  • (ನಿಯಮಕ್ಕೆ ಅನುಗುಣವಾಗಿ) ವರ್ತಿಸು; ಸರಿಯಾಗಿ ನಡೆದುಕೊ; (ನಿಯಮವನ್ನು) ಪಾಲಿಸು.
  • (ಭೌತವಿಜ್ಞಾನ) ಸಂಸಕ್ತವಾಗು; (ಎರಡು ಕಾಯಗಳ ವಿಷಯದಲ್ಲಿ) ಸಂಧಿಸುವ ಪ್ರದೇಶದಲ್ಲಿ ಅಣುಗಳ ಪರಸ್ಪರ ಆಕರ್ಷಣೆಯಿಂದಾಗಿ ಅಂಟಿಕೊ.


  • logo