(ಮುಖ್ಯವಾಗಿ ಮಾರ್ಗದರ್ಶಿಯಾಗಿ ಯಾ ದಾರಿ ತೋರಿಸುತ್ತ ಯಾ ಮುಂದೆ ಹೋಗುತ್ತ ಯಾ ಕೈಹಿಡಿದುಕೊಂಡು ವ್ಯಕ್ತಿಯನ್ನು, ಯಾ ಕತ್ತಿಗೆ ಹಗ್ಗ ಮೊದಲಾದವನ್ನು ಹಾಕಿ ಪ್ರಾಣಿಯನ್ನು) ಕರೆದುಕೊಂಡು ಹೋಗು; ಕರೆದೊಯ್ಯು; ನಡೆಸಿಕೊಂಡು, ಹಿಡಿದುಕೊಂಡು ಯಾ ಎಳೆದುಕೊಂಡು ಹೋಗು.
(ಕ್ರಿಯೆಗಳನ್ನು ಯಾ ಅಭಿಪ್ರಾಯಗಳನ್ನು) ನಿರ್ದೇಶನ ಮಾಡು; ಮಾರ್ಗದರ್ಶನ ಮಾಡು.
(ತರ್ಕ, ವಾದ, ಉದಾಹರಣೆ, ಮೊದಲಾದವುಗಳ ಮೂಲಕ) ತರು; ಒಯ್ಯು; ಹೋಗುವಂತೆ ಯಾ ಬರುವಂತೆ ಮಾಡು; ಮಾರ್ಗದರ್ಶನ ಮಾಡು: what led you to that conclusion? ಯಾವುದು ನಿನ್ನನ್ನು ಆ ತೀರ್ಮಾನಕ್ಕೆ ಒಯ್ದಿತು?
(ರಸ್ತೆ ಮೊದಲಾದವುಗಳ ವಿಷಯದಲ್ಲಿ) ಪ್ರವೇಶ ಕಲ್ಪಿಸು; ತಲುಪಲು ದಾರಿ, ಮಾರ್ಗ – ಒದಗಿಸು; ನಿರ್ದಿಷ್ಟ ಸ್ಥಾನಕ್ಕೆ ಯಾ ಗಂತವ್ಯಕ್ಕೆ ಒಯ್ಯು: this door leads you into a small room ಈ ಬಾಗಿಲು ಸಣ್ಣದೊಂದು ಕೋಣೆಗೆ ದಾರಿ(ಯಾಗಿದೆ). this road leads you to Mysore ಈ ರಸ್ತೆ ಮೈಸೂರಿಗೆ ಒಯ್ಯುತ್ತದೆ.
(ಇತರರನ್ನು) ಮೀರಿಸು; ಇತರರಿಗಿಂತ – ಮೇಲಿರು, ಮೇಲಾಗಿರು, ಉತ್ತಮವಾಗಿರು; ಮುಂದಾಗಿರು: leads others in runs scored ರನ್ನು ಗಳಿಸುವುದರಲ್ಲಿ ಇತರರನ್ನು ಮೀರಿಸಿದ್ದಾನೆ.
(ಮುಖ್ಯವಾಗಿ ನಿರ್ದಿಷ್ಟ ರೀತಿಯ ಜೀವನ ಮೊದಲಾದವನ್ನು) ನಡೆಸು; ಕಳೆ; ಸಾಗಿಸು; ಬಾಳು: lead a miserable existence ಕಾರ್ಪಣ್ಯದ, ದಾರಿದ್ರ್ಯದ ಜೀವನವನ್ನು ನಡೆಸು. lead a double life ಇಬ್ಬಗೆಯ ಬಾಳು ಬಾಳು; ಹೊರಗೊಂದು ಒಳಗೊಂದು ಇರುವ ಬದುಕನ್ನು ಬದುಕು.
ಮೊದಲಿಗನಾಗು; ಪ್ರಥಮನಾಗು; ಮೊದಲ ಸ್ಥಾನ, ಅಗ್ರಸ್ಥಾನ ಪಡೆ: lead the dance ನೃತ್ಯದಲ್ಲಿ ಮೊದಲಿಗನಾಗು. leads the world in sugar production ಸಕ್ಕರೆ ಉತ್ಪಾದನೆಯಲ್ಲಿ ಪ್ರಪಂಚದಲ್ಲೇ ಅಗ್ರಸ್ಥಾನ ಪಡೆದಿದೆ.
ನಡೆಸು; ಮುಂದಾಳತ್ವ ವಹಿಸು; ನೇತೃತ್ವ ವಹಿಸು; ನಿರ್ದೇಶಿಸು; ನಿರ್ದೇಶನ ಮಾಡು: lead orchestra, band, chorus, etc. ವಾದ್ಯ ಗೋಷ್ಠಿ, ತಂಡ, ಮೇಳಗೀತ, ಮೊದಲಾದವನ್ನು ತಾನು ನುಡಿಸಿ ಯಾ ಹಾಡಿ ನಿರ್ದೇಶಿಸು. leads a team of researchers ಸಂಶೋಧಕರ ತಂಡದ ನೇತೃತ್ವ ವಹಿಸುತ್ತಾನೆ.
ತೋರಿಸಿ ಹೇಳಿಕೊಡು; ದೃಷ್ಟಾಂತ ಕೊಟ್ಟು ನಿರ್ದೇಶನ ಮಾಡು.
(ಹ್ಯಾಷನ್ನಿಗೆ) ಮಾದರಿ – ಹಾಕು, ರೂಪಿಸು.
(ಸಂಗೀತಗಾರರ ತಂಡದಲ್ಲಿ) ಮುಖ್ಯ ವಾದಕ ಯಾ ಗಾಯಕನಾಗಿರು; ಪ್ರಧಾನವಾದಕ ಯಾ ಹಾಡುಗಾರ ಆಗಿರು.
(ಇಸ್ಪೀಟು ಆಟ)
ಒಂದು ಪಟ್ಟಿನಲ್ಲಿ ಮೊದಲನೆಯ ಎಲೆಯಾಗಿ – ಇಳಿಸು, ತೂರು, ಆಡು.
ಒಂದು ಪಟ್ಟಿನಲ್ಲಿ ಮೊದಲ ಆಟಗಾರನಾಗು; ಮೊದಲು ಎಲೆ – ಹಾಕುವವನಾಗು, ಇಳಿಸುವವನಾಗು.
(ಮೊದಲನೆ ಎಲೆ ಹಾಕುವಾಗ) ಒಂದೇ ರಂಗಿಗೆ ಸೇರಿದ ಎಲೆಗಳಲ್ಲೊಂದನ್ನು – ಹಾಕು, ಆಡು.
(ಕಥೆಯ ವಿಷಯದಲ್ಲಿ) (ವರ್ತಮಾನ ಪತ್ರಿಕೆಯ ಯಾ ಅದರ ಭಾಗದ ವಿಷಯದಲ್ಲಿ) ಪ್ರಮುಖವಾಗಿರು; ಪ್ರಧಾನವಾಗಿರು: the royal wedding will lead the front page ಅರಸನ ವಿವಾಹ ಪತ್ರಿಕೆಯ ಪ್ರಧಾನ ಸುದ್ದಿಯಾಗುತ್ತದೆ.
(ಹಗ್ಗ, ನೀರು, ಮೊದಲಾದವನ್ನು) ಕಪ್ಪಿ, ರಾಟೆ, ಕಾಲುವೆ, ಮೊದಲಾದವುಗಳ ಮೂಲಕ – ಹಾದು ಹೋಗುವಂತೆ ಮಾಡು, ಹಾಯಿಸು.
(ಉದ್ದೇಶ, ಸಂದರ್ಭಗಳ ವಿಷಯದಲ್ಲಿ) ಮುಂದಾಳಾಗಿ ನಡೆಸು; ಮಾರ್ಗದರ್ಶಕನಾಗು; ಮಾರ್ಗದರ್ಶಿಯಾಗು; ಕರೆದೊಯ್ಯಿ: curiosity led him to Delhi ಕುತೂಹಲ ಅವನನ್ನು ದೆಹಲಿಗೆ ಕರೆದೊಯ್ದಿತು.
(ಸೇನಾ ನಾಯಕನ ವಿಷಯದಲ್ಲಿ) ಚಲನವಲನಗಳನ್ನು – ನಡೆಸು, ನಿರ್ದೇಶಿಸು.
ಪ್ರಭಾವ ಬೀರು ಯಾ ಮಾಡಲು ಪ್ರೇರಿಸು: lead one to suppose etc. ಭಾವಿಸುವಂತೆ (ವ್ಯಕ್ತಿಯನ್ನು) ಪ್ರಭಾವಗೊಳಿಸು; ಪ್ರೇರಿಸು.
(ಸಾಕ್ಷಿಯನ್ನು) ಉತ್ತರ ಗರ್ಭಿತವಾದ, ಉತ್ತರಸೂಚಕವಾದ, ಉತ್ತರ ಸೂಚಿಸುವಂಥ ಪ್ರಶ್ನೆಗಳನ್ನು ಕೇಳು; ತನಗೆ ಬೇಕಾದ ಉತ್ತರ ಅಡಗಿರುವ ಯಾ ಬರುವ ಪ್ರಶ್ನೆಗಳನ್ನು ಹಾಕು; (ಉತ್ತರ) ಸೂಚಕ ಪ್ರಶ್ನೆ ಹಾಕು; ಉತ್ತರಗರ್ಭಿತ ಪ್ರಶ್ನೆ ಕೇಳು.
(ಪಕ್ಷದ) ಅಧಿಕೃತ ನಿರ್ದೇಶಕ ಯಾ ವಕ್ತಾರಾಗಿರು.
(ಬ್ರಿಟಿಷ್ ಪ್ರಯೋಗ) (ಮೊಕದ್ದಮೆಯಲ್ಲಿ) ಪ್ರಧಾನ ನ್ಯಾಯವಾದಿಯಾಗಿ, ಮುಖ್ಯ ವಕೀಲನಾಗಿ – ವಕಾಲತ್ತು ವಹಿಸು ( ಅಕರ್ಮಕ ಕ್ರಿಯಾಪದ ಸಹ).
lead
ನಾಮವಾಚಕ
ನುಡಿಗಟ್ಟು
give one a lead ಮಾಡಿ ತೋರಿಸು; ತಾನು ಮೊದಲು ಮಾಡಿ (ಮುಖ್ಯವಾಗಿ ಬೇಟೆಯಲ್ಲಿ ಬೇಲಿಯನ್ನು ಮೊದಲು ಹಾರಿ) ಮತ್ತೊಬ್ಬನನ್ನು ಪ್ರೋತ್ಸಾಹಿಸು.
ಮಾರ್ಗದರ್ಶನ; ಉದಾಹರಣೆ; ನಿದರ್ಶನ; ಮೇಲ್ಪಂಕ್ತಿ: follow the lead of (-ನ) ಮೇಲ್ಪಂಕ್ತಿಯನ್ನು ಅನುಸರಿಸು.
ಅಗ್ರಸ್ಥಾನ; ಮುಂದಾಳುತನ; ಮುಂದಾಳುತ್ವ; ನೇತೃತ್ವ; ನಾಯಕತ್ವ: is in the lead ಅಗ್ರಸ್ಥಾನದಲ್ಲಿದ್ದಾನೆ. take the lead
ನಾಯಕತ್ವವಹಿಸು; ಮುಂದಾಳಾಗು.
(ಆಟ, ಪಂದ್ಯಗಳಲ್ಲಿ) ಮುಂದಿನವನಾಗು; ಮುಂದೆ ಹೋಗು.
ಅಧಿಕ್ಯ; ಹೆಚ್ಚುವರಿ; ಇತರ ಸ್ವರ್ಧಾಳುಗಳಿಗಿಂತ ಮುಂದೆ ಇರುವ ಪ್ರಮಾಣ: a lead of ten yards ಹತ್ತು ಗಜಗಳ ಆಧಿಕ್ಯ.
ಸುಳಿವು (ಮುಖ್ಯವಾಗಿ ಒಂದು ಸಮಸ್ಯೆಯ ಪರಿಹಾರಕ್ಕೆ ಮೊದಲೇ ದೊರೆತದ್ದು): is the first real lead in the case ಕೇಸಿನಲ್ಲಿ ನಿಜವಾಗಿ ಮೊದಲು ದೊರೆತ ಸುಳಿವು.
ವಾಹಕ; ವಿದ್ಯುದಾಕರದಿಂದ ಉಪಕರಣಕ್ಕೆ ವಿದ್ಯುತ್ತನ್ನು ಒದಗಿಸುವ ಸಾಧನ (ಮುಖ್ಯವಾಗಿ ತಂತಿ).
ಮುಖ್ಯ ಪಾತ್ರ; ನಾಯಕ ಪಾತ್ರ.
ಮುಖ್ಯ ಪಾತ್ರಧಾರಿ; ಮುಖ್ಯ ಪಾತ್ರ ವಹಿಸುವವನು.
ಪ್ರಮುಖ ಸುದ್ದಿ; ವೃತ್ತಪತ್ರಿಕೆ ಯಾ ನಿಯತಕಾಲಿಕದಲ್ಲಿ ಅತ್ಯಂತ ಮಹತ್ತ್ವ ಕೊಟ್ಟಿರುವ ಸುದ್ದಿ.
(ಇಸ್ಪೀಟು) ಮೊದಲಿಳಿತ; ಮೊದಲಿಳಿತದ ಹಕ್ಕು: return lead ಜೊತೆಗಾರ ಇಳಿದ ರಂಗನ್ನೇ ಹಾಕುವುದು.
(ಇಸ್ಪೀಟು) ಮೊದಲಿಳಿಸಿದ ಕಾರ್ಡು.
ಇಳಿದೂರ; ಒಂದು ಸುತ್ತು ತಿರುಗಿಸಿದಾಗ ಸ್ಕ್ರೂಮೊಳೆ ಒಳಗಿಳಿದ ಪ್ರಮಾಣ.
(ಮುಖ್ಯವಾಗಿ ಜಲಯಂತ್ರಕ್ಕೆ ಹೋಗುವ) ತೋಡುಗಾಲುವೆ.
ನೀರ್ಗಲ್ಲ ಮೈದಾನದಲ್ಲಿರುವ ಕಾಲುವೆ.
lead
ನಾಮವಾಚಕ
ಪದಗುಚ್ಛ
ನುಡಿಗಟ್ಟು
swing the lead (ಅಶಿಷ್ಟ) (ಸಿಪಾಯಿ ಯಾ ನಾವಿಕ) ಕೆಲಸ ತಪ್ಪಿಸಿಕೊಳ್ಳಲು ರೋಗ ನಟಿಸು; ಕೆಲಸಕ್ಕೆ ಹಿಂದೇಟುಹಾಕು; ಮೈಗಳ್ಳತನ ಮಾಡು.
(ರಸಾಯನವಿಜ್ಞಾನ) ಸೀಸ; ಸೀಸದ ಸಲೆಡ್; ಅದುರಿನಲ್ಲಿ ಸ್ವಾಭಾವಿಕವಾಗಿ ದೊರೆಯುವ, ಕಟ್ಟಡ ಹಾಗೂ ಮಿಶ್ರಲೋಹಗಳ ತಯಾರಿಕೆಯಲ್ಲಿ ಬಳಸುವ, ಪರಮಾಣು ಸಂಖ್ಯೆ 82, ಪರಮಾಣು ತೂಕ 207 ಉಳ್ಳ, ನಸುನೀಲಿ – ಊದಾ ಬಣ್ಣದ, ಮೃದುವಾದ, ತಗಡಾಗಿ ಬಡಿಯಬಹುದಾದ, ಭಾರವಾದ ಲೋಹಧಾತು, ಸಂಕೇತ Pb.