logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inappetence
ನಾಮವಾಚಕ
  • ಹಸಿವಾಗದಿರುವುದು: complained of inappetence and slight nausea ಹಸಿವಾಗುವುದಿಲ್ಲವೆಂದೂ, ಸ್ವಲ್ಪ ಓಕರಿಕೆಯಾಗುತ್ತದೆಂದೂ ಹೇಳಿಕೊಂಡ.
  • ಅನಿಚ್ಛೆ; ಅನಭಿಲಾಷೆ; ಬಯಕೆ ಯಾ ಹಂಬಲ ಇಲ್ಲದಿರುವುದು: irresistible impulse struggling against total inappetence ಸಂಪೂರ್ಣ ಅನಿಚ್ಛೆಯ ವಿರುದ್ಧ ಹೋರಾಡುವ ಅದಮ್ಯ ಪ್ರವೃತ್ತಿ.

  • inappetency
    ನಾಮವಾಚಕ
    = inappetence.

    inappetent
    ಗುಣವಾಚಕ
  • ಹಸಿವಾಗದ; ಹಸಿವಿಲ್ಲದಿರುವ.
  • ಅನಿಚ್ಛೆಯ; ಇಚ್ಛೆಯಿಲ್ಲದಿರುವ.

  • inapplicability
    ನಾಮವಾಚಕ
    (ಸಂದರ್ಭಕ್ಕೆ, ಉದ್ದೇಶಕ್ಕೆ) (ಸರಿ)ಹೊಂದದಿರುವಿಕೆ; ಒಪ್ಪದಿರುವುದು; ಅನ್ವಯಿಸದಿರುವುದು; ಅನ್ವಯಿಸಲಾಗದಿರುವುದು; ಅನುಪಪತ್ತಿ; ಅನನ್ವಯತೆ.

    inapplicable
    ಗುಣವಾಚಕ
    (ಸಂದರ್ಭಕ್ಕೆ, ಉದ್ದೇಶಕ್ಕೆ) (ಸರಿ)ಹೊಂದದ; ಒಪ್ಪದ; ಅನ್ವಯಿಸದ; ಅನುಪಪನ್ನ.

    inapplicably
    ಕ್ರಿಯಾವಿಶೇಷಣ
    (ಸಂದರ್ಭಕ್ಕೆ, ಉದ್ದೇಶಕ್ಕೆ) ಸರಿಹೊಂದದಂತೆ; ಒಪ್ಪದಂತೆ; ಅನ್ವಯಿಸದಂತೆ; ಅನುಪಪನ್ನವಾಗಿ.

    inapposite
    ಗುಣವಾಚಕ
    ತಕ್ಕದ್ದಲ್ಲದ; ಉಚಿತವಲ್ಲದ; ಅಸಮಂಜಸ(ವಾದ); ತಗದ; ಒಪ್ಪದ; ಅಸಂಗತ; ಅಯುಕ್ತ; ಅನುರೂಪವಲ್ಲದ; ಅಸಾಧು(ವಾದ).

    inappositely
    ಕ್ರಿಯಾವಿಶೇಷಣ
    ತಕ್ಕದ್ದಲ್ಲದಂತೆ; ಅಸಮಂಜಸವಾಗಿ; ತಗದಂತೆ; ಅಸಂಗತವಾಗಿ; ಅಯುಕ್ತವಾಗಿ; ಅಸಾಧುವಾಗಿ; ಅನುರೂಪವಾಗಿಲ್ಲದಂತೆ; ಉಚಿತವಲ್ಲದ, ಒಪ್ಪದ – ರೀತಿಯಲ್ಲಿ.

    inappreciable
    ಗುಣವಾಚಕ
  • ಅತಿ ಸೂಕ್ಷ್ಮ; ಅತ್ಯಲ್ಪ; ಗೋಚರಕ್ಕೆ, ಲೆಕ್ಕಕ್ಕೆ ಬಾರದ; ಗಣನಾರ್ಹವಲ್ಲದ: an inappreciable difference ಕಣ್ಣಿಗೆ ಬೀಳದಷ್ಟು ಅಲ್ಪ ವ್ಯತ್ಯಾಸ.
  • ಗುಣಗ್ರಾಹಿಯಾಗಿರದ; ಯೋಗ್ಯತೆಯನ್ನರಿಯಲಾಗದ; ಗುಣವನ್ನಳೆಯಲಾಗದ; ಸ್ವಾರಸ್ಯವನ್ನು ಗ್ರಹಿಸಲಾಗದ.

  • inappreciably
    ಕ್ರಿಯಾವಿಶೇಷಣ
  • ಅತಿಸೂಕ್ಷ್ಮವಾಗಿ; ಅತ್ಯಲ್ಪವಾಗಿ; ಗೋಚರಕ್ಕೆ, ಲೆಕ್ಕಕ್ಕೆ ಬಾರದಂತೆ; ಗಣನಾರ್ಹವಲ್ಲದಂತೆ.
  • ಗುಣ ಗ್ರಹಿಸದಂತೆ; ಗುಣಗ್ರಾಹಿಯಾಗದಂತೆ; ಯೋಗ್ಯತೆಯನ್ನರಿಯಲಾಗದಂತೆ.


  • logo