logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

adduce
ಸಕರ್ಮಕ ಕ್ರಿಯಾಪದ
(ದೃಷ್ಟಾಂತ, ಸಾಕ್ಷ್ಯ, ಕಾರಣ, ಮೊದಲಾದವನ್ನು) ಮುಂದಿಡು; ಮಂಡಿಸು.

adduceable
ಗುಣವಾಚಕ
(ದೃಷ್ಟಾಂತ, ಸಾಕ್ಷವಾಗಿ) ಮುಂದಿಡಬಹುದಾದ; ಮಂಡಿಸಬಹುದಾದ.

adducent
ಗುಣವಾಚಕ
(ಶರೀರ ವಿಜ್ಞಾನ) ಅಭಿಕರ್ಷಕ; (ಸ್ನಾಯುಗಳ ವಿಷಯದಲ್ಲಿ) ತನ್ನೆಡೆಗೆ ಸೆಳೆಯುವ; ನಿಯತ ಅಕ್ಷದ ಕಡೆಗೆ ಎಳೆಯುತ್ತಿರುವ.

adducible
ಗುಣವಾಚಕ
= adduceable.

adduct
ಸಕರ್ಮಕ ಕ್ರಿಯಾಪದ
(ಶರೀರ ವಿಜ್ಞಾನ) ಅಭಿಕರ್ಷಿಸು; ನಿಯತ ಅಕ್ಷದ ಕಡೆ ಎಳೆ.

adduction
ನಾಮವಾಚಕ
  • (ದೃಷ್ಟಾಂತ ಮೊದಲಾದವುಗಳ) ಮಂಡನ; (ದೃಷ್ಟಾಂತ ಮೊದಲಾದವನ್ನು) ಮುಂದಿಡುವಿಕೆ; ಮಂಡಿಸುವಿಕೆ.
  • (ಶರೀರ ವಿಜ್ಞಾನ) ಅಭಿಕರ್ಷಣ.

  • adductor
    ನಾಮವಾಚಕ
    (ಶರೀರ ವಿಜ್ಞಾನ) ಅಭಿಕರ್ಷಕ (ಸ್ನಾಯು).

    adenine
    ನಾಮವಾಚಕ
    (ರಸಾಯನವಿಜ್ಞಾನ) ಆಡನೀನ್‍; ನ್ಯೂಕ್ಲೀಯಿಕ್‍ ಆಮ್ಲಗಳ ರಚನೆಯಲ್ಲಿ ಪಾಲ್ಗೊಳ್ಳುವ ನಾಲ್ಕು ನೈಟ್ರೊಜನ್‍ಯುಕ್ತ ಪ್ರತ್ಯಾಮ್ಲಗಳಲ್ಲಿ ಒಂದಾದ, ಕೆಲವು ಎಂಜೈಮುಗಳಲ್ಲಿಯೂ ಕಂಡು ಬರುವ, ಪ್ಯುರೀನ್‍ ಬಳಗದ ಪ್ರತ್ಯಾಮ್ಲ, ${\rm C}_5{\rm H}_5{\rm N}_5$.

    adenoidal
    ಗುಣವಾಚಕ
    ಆಡಿನಾಯ್ಡಿಗೆ ಸಂಬಂಧಿಸಿದ.

    adenoids
    ನಾಮವಾಚಕ
    (ಬಹುವಚನ) (ರೋಗಶಾಸ್ತ್ರ) ಆಡಿನಾಯ್ಡ್‍ ಗ್ರಂಥಿಗಳು; ಒಳಗಂಟಲ ಮಾಳಿಗೆಯಲ್ಲಿರುವ ಕೆಲವೊಮ್ಮೆ ಮಾತನಾಡುವುದಕ್ಕೂ ಉಸಿರಾಟಕ್ಕೂ ತೊಂದರೆಯನ್ನು ಉಂಟು ಮಾಡುವ ಊದಿಕೊಂಡ ಗ್ರಂಥಿಗಳು.


    logo