(ರಸಾಯನವಿಜ್ಞಾನ) ಸತು; ಸತುವು; ನಿಸರ್ಗದಲ್ಲಿ ಸಂಯುಕ್ತ ಖನಿಜ ರೂಪದಲ್ಲಿ ಸಿಕ್ಕುವ ಸತುವಿನ ಅದುರಿನಿಂದ ಪಡೆಯುವ, ಹಿತ್ತಾಳೆ ತಯಾರಿಸಲು ತಾಮ್ರದೊಂದಿಗೆ ಮಿಶ್ರಲೋಹ ಮಾಡುವ, ಗ್ಯಾಲ್ವನೀಕರಣಕ್ಕೂ ವಿದ್ಯುತ್ ಬ್ಯಾಟರಿ ತಯಾರಿಕೆಗೂ ಮುದ್ರಣತಟ್ಟೆಗಳಲ್ಲೂ ಬಳಸುವ, ಪರಮಾಣು ಸಂಖ್ಯೆ 30, ಪರಮಾಣುತೂಕ 65.38 ಉಳ್ಳ ಬಿಳಿಯ ಲೋಹಧಾತು, ಸಂಕೇತ Zn. flowers of zink = zinc oxide.
zinc
ಸಕರ್ಮಕ ಕ್ರಿಯಾಪದ
ಸತುಲೇಪ ಮಾಡು; ಸತುವಿನ ಮುಲಾಮು ಮಾಡು.
zinc blende
ನಾಮವಾಚಕ
= blende.
zinc chloride
ನಾಮವಾಚಕ
(ರಸಾಯನವಿಜ್ಞಾನ) ಸತು ಕ್ಲೋರೈಡು; ಸತು ಮತ್ತು ಕ್ಲೋರೀನ್‍ಗಳಿಂದಾದ, ಆದ್ರೀಕಾರಕ ಗುಣವುಳ್ಳ, ಬಿಳಿಯ ಪುಡಿಯಾಗಿರುವ, ಪದಾರ್ಥಗಳನ್ನು ಕೆಡದಂತಿಡುವುದು ಮೊದಲಾದವುಗಳಿಗಾಗಿ ಬಳಸುವ ದ್ವಿಧಾತು ಸಂಯುಕ್ತ, ಸೂತ್ರ ${\rm ZnCl}_2$.
zinc oxide
ನಾಮವಾಚಕ
(ರಸಾಯನವಿಜ್ಞಾನ) ಸತುವಿನ ಆಕ್ಸೆ ಡು; ಸತುವು ಮತ್ತು ಆಕ್ಸಿಜನ್‍ಗಳಿಂದಾದ, ವೈದ್ಯಕೀಯ ಮುಲಾಮುಗಳ ತಯಾರಿಕೆಯಲ್ಲಿ ಬಳಸುವ, ಬಿಳಿಪುಡಿಯಾದ, ದ್ವಿಧಾತು ಸಂಯುಕ್ತ, ZnO.
zinc sulphate
ನಾಮವಾಚಕ
(ರಸಾಯನವಿಜ್ಞಾನ) ಸತುವಿನ ಸಲೆಟು; ರಂಗಾರೆ ಕೆಲಸದಲ್ಲಿ ಬಳಸುವ, ನೀರಿನಲ್ಲಿ ಕರಗುವ, ಬಿಳಿ ಸ್ಫಟಿಕೀಯ ಪದಾರ್ಥ, ${\rm ZnSO}_4$.
zinced
ಗುಣವಾಚಕ
ಸತುಲಿಪ್ತ; ಸತುವನ್ನು ಲೇಪಿಸಿದ.
zinco
ನಾಮವಾಚಕ
(ಬಹುವಚನ Zincos). = 1zincograph.
zinco
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ zincos; ಭೂತರೂಪ & ಭೂತಕೃದಂತ zincoed). = 2zincograph.