logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ultimately
ಕ್ರಿಯಾವಿಶೇಷಣ
  • ಕಟ್ಟಕಡೆಯದಾಗಿ; ಅಂತಿಮವಾಗಿ.
  • ಕೊನೆಯಲ್ಲಿ; ನಿರ್ಣಾಯಕವಾಗಿ: I should ultimately succeed ನಾನು ಕೊನೆಯಲ್ಲಿ ಗೆಲ್ಲಲೇಬೇಕು.

  • ultimateness
    ನಾಮವಾಚಕ
    ಅಂತ್ಯ; ಕೊನೆ.

    ultimatum
    ನಾಮವಾಚಕ
  • ಅಂತಿಮ ಬೇಡಿಕೆ; (ಯಾವುದನ್ನು ನಿರಾಕರಿಸಿದ್ದೇ ಆದರೆ ಸಂಬಂಧ ವಿಚ್ಫೇದ, ಯುದ್ಧ ಘೋಷಣೆ, ಮೊದಲಾದವಕ್ಕೆ ಆಸ್ಪದವಾಗುವುದೋ ಆ) ಕಟ್ಟಕಡೆಯ ಕೋರಿಕೆ ಯಾ ಕಟ್ಟಕಡೆಯ ಷರತ್ತುಗಳ ಘೋಷಣೆ.
  • ಕೊನೆಯ ನಿರ್ಧಾರ; ಕಡೇ ಮಾತು; ಅಂತಿಮ ತೀರ್ಮಾನ.

  • ultimo
    ಗುಣವಾಚಕ
    (ವಾಣಿಜ್ಯ) (ವ್ಯಾವಹಾರಿಕ ಪತ್ರಗಳಲ್ಲಿ) ಹೋದ ತಿಂಗಳಿನ; ಹಿಂದಿನ ತಿಂಗಳಿನ; ಗತಮಾಸದ: the 28th ultimo ಹೋದ ತಿಂಗಳು ೨೮ನೇ ತಾರೀಖಿನ.

    ultimogeniture
    ನಾಮವಾಚಕ
    ಕನಿಷ್ಠ ಪುತ್ರಾಧಿಕಾರ ಪದ್ಧತಿ; ಕೊನೆಯ ಮಗನಿಗೆ ಮಾತ್ರ ಆಸ್ತಿಯ ಹಕ್ಕಿರುವ ಪದ್ಧತಿ.

    ultra
    ಗುಣವಾಚಕ
    (ಮುಖ್ಯವಾಗಿ ಧರ್ಮ, ರಾಜಕೀಯಗಳಲ್ಲಿ) ಉಗ್ರವಾದಿ; ಉಗ್ರಪಂಥವನ್ನು, ಉಗ್ರಾಭಿಪ್ರಾಯಗಳನ್ನು, ಉಗ್ರಕಾರ್ಯಾಚರಣೆಗಳನ್ನು ಬೆಂಬಲಿಸುವ.

    ultra
    ನಾಮವಾಚಕ
    ಉಗ್ರವಾದಿ; ಉಗ್ರ ಪಂಥದವನು.

    ultra vires
    ಕ್ರಿಯಾವಿಶೇಷಣ
    ಒಬ್ಬನ (ನ್ಯಾಯವಾದ, ಕಾನೂನುಬದ್ಧ) ಅಧಿಕಾರಕ್ಕೆ ಮೀರಿ.

    ultra vires
    ಗುಣವಾಚಕ
    ಉತ್ತರ ಒಬ್ಬನ (ನ್ಯಾಯವಾದ) ಅಧಿಕಾರಕ್ಕೆ ಮೀರಿದ.

    ultra-
    ಸಮಾಸ ಪೂರ್ವಪದ
  • (ಯಾವುದೋ ಒಂದರ) ಆಚೆಯ; ಆಚೆಕಡೆಯ.
  • ಅತಿ; ವಿಪರೀತ; ಅತಿಯಾಗಿ; ಅತಿಯಾದ: ultra-fashionable ಅತಿ ನಾಜೂಕಿನ. ultra-conservative ಅತಿ ಸಂಪ್ರದಾಯನಿಷ್ಠ.
  • ತೀರಾ; ಅತಿ: ultra-modern ತೀರಾ ಆಧುನಿಕ.


  • logo