logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tachistoscopic
ಗುಣವಾಚಕ
ದೃಷ್ಟಿಮಾಪಕದ ಯಾ ಆ ಯಂತ್ರಕ್ಕೆ ಸಂಬಂಧಿಸಿದ.

tacho
ನಾಮವಾಚಕ
(ಆಡುಮಾತು) = tachometer.

tacho-
ಸಮಾಸ ಪೂರ್ವಪದ
ಗತಿ, ವೇಗ, ಎಂಬರ್ಥದ ಸಮಾಸ ಪೂರ್ವಪದ.

tachograph
ನಾಮವಾಚಕ
ವೇಗಲೇಖಿ; ಮುಖ್ಯವಾಗಿ ಭಾರವಾದ ಸರಕುಗಳನ್ನು ಸಾಗಿಸುವ ಮೋಟಾರು ವಾಹನಗಳು, ಕೋಚುಗಳು, ಮೊದಲಾದವುಗಳಲ್ಲಿ ವೇಗ ಮತ್ತು ಚಲನೆಯ ಕಾಲವನ್ನು ಸ್ವಯಂ ದಾಖಲಿಸುವ ಸಲಕರಣೆ.

tachometer
ನಾಮವಾಚಕ
ವೇಗಮಾಪಕ; ಆವರ್ತ ದಂಡವು ಸುತ್ತುವ ವೇಗದ ಪ್ರಮಾಣವನ್ನು ಅಳೆದು, ಆ ಮೂಲಕ ವಾಹನದ ವೇಗ ಯಾ ಗತಿಯನ್ನು ಅಳೆಯುವ ಸಲಕರಣೆ, ಸಾಧನ.

tachy-
ಸಮಾಸ ಪೂರ್ವಪದ
ವೇಗ, ಶೀಘ್ರ, ತ್ವರಿತ, ಎಂಬರ್ಥಗಳ ಸಮಾಸ ಪೂರ್ವಪದ.

tachycardia
ನಾಮವಾಚಕ
(ರೋಗಶಾಸ್ತ್ರ) ಹೃದಯಸ್ಪಂದನಾಧಿಕ್ಯ; ಹೃದಯದ–ಅತಿಸ್ಪಂದನ, ಅತಿಯಾದ ಬಡಿತ, ಮಿಡಿತ.

tachygrapher
ನಾಮವಾಚಕ
ಪ್ರಾಚೀನ ಗ್ರೀಕ್‍ ಯಾ ಲ್ಯಾಟಿನ್‍–ಸಂಕ್ಷಿಪ್ತ ಯಾ ಶೀಘ್ರ ಲಿಪಿಕಾರ.

tachygraphic
ಗುಣವಾಚಕ
= tachygraphical.

tachygraphical
ಗುಣವಾಚಕ
  • ಪ್ರಾಚೀನ ಗ್ರೀಕ್‍ ಯಾ ಲ್ಯಾಟಿನ್‍ ಶೀಘ್ರಲಿಪಿಯ; ಅದಕ್ಕೆ ಸಂಬಂಧಿಸಿದ.
  • ಸಂಕ್ಷಿಪ್ತ ಲಿಪಿಯ.


  • logo