logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

mackintosh
ನಾಮವಾಚಕ
  • ಮ್ಯಾಕಿಂಟಾಷ್‍ ಬಟ್ಟೆ; ಉಡುಪುಗಳಿಗೆ ಬಳಸುವ, ಬಟ್ಟೆಯ ಪದರಗಳನ್ನು ರಬ್ಬರಿನಿಂದ ಅಂಟಿಸಿ, ತಯಾರಿಸಿದ, ಒಂದು ರೀತಿಯ ನೀರಿಳಿಯದ ಬಟ್ಟೆ.
  • (ಬ್ರಿಟಿಷ್‍ ಪ್ರಯೋಗ) (ಇದರಿಂದ ಮಾಡಿದ) ನಿಲುವಂಗಿ, ಕೋಟು, ಮೊದಲಾದವು.

  • mackle
    ನಾಮವಾಚಕ
    (ಮುದ್ರಣದಲ್ಲಿ) ಅಚ್ಚುಮಚ್ಚೆ; ಅಚ್ಚು – ಕರೆ, ಕಲೆ; ಅಚ್ಚುಮಾಡಿದ್ದರ ಮೇಲೆಯೇ ಅಚ್ಚನ್ನು ಮತ್ತೊಂದು ಸಲ ಒತ್ತಿದಾಗ ಕಾಣುವಂಥ ಕರೆ.

    macle
    ನಾಮವಾಚಕ
  • ಅವಳಿ ಹರಳು; ಜೋಡಿ ಹರಳು; ಒಂದೇ ಬಗೆಯ ಎರಡು ಹರಳುಗಳು ಒಂದು ಕ್ರಮದಲ್ಲಿ ಜೋಡಿಸಿಕೊಂಡು ಬೆಳೆದಿರುವ ಸಂಯುಕ್ತ ಹರಳು.
  • ಮ್ಯಾಕಲ್‍; ಖನಿಜದಲ್ಲಿ ಕೆಲವು ವೇಳೆ ಕಂಡುಬರುವ ಕಪ್ಪು ಮಚ್ಚೆ.

  • Macon
    ನಾಮವಾಚಕ
    (ಹ್ರಾನ್ಸಿನ) ಮಾಕಾನ್‍ (ಪ್ರದೇಶದ) ಆಸುಪಾಸಿನಲ್ಲಿ ತಯಾರಾದ, ಕೆಂಪು ಯಾ ಬಿಳಿ ಬರ್ಗಂಡಿ (ಮದ್ಯ).

    macrame
    ನಾಮವಾಚಕ
  • (ಅಂಕಾರಕ್ಕಾಗಿ) ಹುರಿಯಿಂದ ಬಗೆಬಗೆಯ ವಿನ್ಯಾಸಗಳಲ್ಲಿ ಹೆಣೆದ ಅಲಂಕಾರದ ಅಂಚು, ಕುಚ್ಚು, ಕರೆ, ಮೊದಲಾದವು.
  • ಈ ರೀತಿಯಲ್ಲಿ ಹೆಣೆಯುವ ಕಲೆ.

  • macro-
    ಸಮಾಸ ಪೂರ್ವಪದ
    ಉದ್ದನೆಯ, ನಿಡು, ನೀಳ, ದೊಡ್ಡ, ಭಾರಿ – ಗಾತ್ರದ, ಪ್ರಮಾಣದ ಎಂಬರ್ಥಗಳ ಸಮಾಸ ಪೂರ್ವಪದ.

    macrobiotic
    ಗುಣವಾಚಕ
    ದೀರ್ಘಾಯುಪಥ್ಯದ; ಆಯುಸ್ಸನ್ನು ವೃದ್ಧಿ ಮಾಡುವ ಸಲುವಾಗಿ ಶುದ್ಧವಾದ ತರಕಾರಿ, ‘ಪಾಲಿಷ್‍’ ಮಾಡದ ಅಕ್ಕಿ, ಮೊದಲಾದವುಗಳಿಂದ ತಯಾರಿಸಿದ ಆಹಾರವನ್ನು ಸೇವಿಸುವ ಯಾ ಅದಕ್ಕೆ ಸಂಬಂಧಿಸಿದ.

    macrobiotic
    ನಾಮವಾಚಕ
    ದೀರ್ಘಾಯುಪಥ್ಯದ ಬಳಕೆ ಯಾ ಸಿದ್ಧಾಂತ.

    macrocarpa
    ನಾಮವಾಚಕ
    ‘ಕುಪ್ರೆಸೆಸ್‍ ಮ್ಯಾಕ್ರೋಕಾರ್ಪ’ ಕುಲಕ್ಕೆ ಸೇರಿದ, ಒಂದು ಬಗೆಯ ನಿತ್ಯಹರಿದ್ವರ್ಣದ ಮರ.

    macrocephalic
    ಗುಣವಾಚಕ
    ನಿಡು ತಲೆಯ; ದೊಡ್ಡದಾದ ತಲೆಯುಳ್ಳ; ದೀರ್ಘಶಿರದ; ದೀರ್ಘಶೀರ್ಷದ.


    logo