logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lace
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ
(ಆಡುಮಾತು)
  • (ಬೂಟ್ಸು ಮೊದಲಾದವನ್ನು ಷೂಲೇಸು, ಹುರಿ, ನವಾರ, ತೊಗಲಿನ ದಾರ, ಮೊದಲಾದವುಗಳಿಂದ) ಕೂಡಿಸಿ – ಕಟ್ಟು, ಬಿಗಿ.
  • (ಬಿಗಿ ಲಾಡಿ ಎಳೆದು) ಸೊಂಟ – ಬಿಗಿ, ಕಟ್ಟು.
  • (ಹಾಲು, ಕಾಹಿ, ಬಿಯರ್‍, ಮೊದಲಾದವುಗಳಿಗೆ) ಮದ್ಯ ಬೆರಸು; ಮದ್ಯ ಬೆರಸಿ ರುಚಿಕಟ್ಟು; ಮದ್ಯ ಬೆರಸಿ ಚುರುಕಾಗಿಸು.
  • (ಬಣ್ಣಬಣ್ಣದ ಪಟ್ಟಿಗಳಿಂದ, ರೇಖೆಗಳಿಂದ) ಚಿತ್ರಿಸು: cheek laced with blood ರಕ್ತ(ದ ರೇಖೆಗಳಿಂದ) ಚಿತ್ರಿತವಾದ ಕೆನ್ನೆ.
  • ಕಲಾಬತ್ತು ಅಂಚುಕಟ್ಟು; ಜರತಾರಿ, ಸರಿಗೆ, ಮೊದಲಾದವುಗಳ ಪಟ್ಟಿಗಳಿಂದ ಅಲಂಕರಿಸು.
  • (ಹುರಿ ಮೊದಲಾದವನ್ನು) ಪೋಣಿಸು; ಹೆಣೆ; ಮಧ್ಯೆ ತೂರಿಸು.
  • (ಆಡುಮಾತು) (ಬಾರಿನಿಂದ, ಚಾವಟಿಯಿಂದ) ಬಾರಿಸು; ಹೊಡೆ; ಬಡಿ: lace into person ಒಬ್ಬನಿಗೆ ಚಾವಟಿಯಿಂದ ಬಾರಿಸು.
  • (ಆಡುಮಾತು) ಸೋಲಿಸು.
  • ಸರಿಗೆ ಹಾಕು; ಸರಿಗೆದಾರ ಮೊದಲಾದವನ್ನು ಒಳನೆಯ್ದು ಯಾ ಕಸೂತಿ ಹಾಕಿ (ಬಟ್ಟೆಯನ್ನು) ಅಲಂಕರಿಸು.

  • lace-glass
    ನಾಮವಾಚಕ
    ಚಿತ್ತಾರದ ಗಾಜು; ಅಲಂಕಾರದ ಚಿತ್ರಪಟ್ಟಿಯ ಮಾದರಿಯಂಥ ಚಿತ್ತಾರವುಳ್ಳ ವೆನಿಸ್ಸಿನ ಗಾಜಿನ ಸಾಮಾನು.

    lace-making
    ನಾಮವಾಚಕ
    ಲೇಸ್‍ ತಯಾರಿಕೆ; (ಮುಖ್ಯವಾಗಿ ವೃತ್ತಿಯಾಗಿ) ಲೇಸನ್ನು, ಕಸೂತಿ ಬಟ್ಟೆಯನ್ನು ತಯಾರಿಸುವ ಕೆಲಸ, ಕಲೆ.

    lace-pillow
    ನಾಮವಾಚಕ
    ಕಸೂತಿ ಮೆತ್ತೆ; ಚಿತ್ತಾರದ ಮೆತ್ತೆ; ಚಿತ್ರಕಸೂತಿ ಕೆಲಸಮಾಡುವವಳು ತೊಡೆಯ ಮೇಲಿಟ್ಟುಕೊಳ್ಳುವ ಚಿತ್ರ ಕೆಲಸದ ಮೆತ್ತೆ.

    lace-up
    ನಾಮವಾಚಕ
    ಲೇಸಪ್‍; ಲೇಸ್‍ ಕಟ್ಟಿದ ಷೂ.

    lace-up
    ಗುಣವಾಚಕ
    (‘ಷೂ’ನ ವಿಷಯದಲ್ಲಿ) ಲೇಸ್‍ನಿಂದ ಯಾ ಲೇಸ್‍ಗಳಿಂದ ಕಟ್ಟಿದ.

    lace-wing
    ನಾಮವಾಚಕ
    ಲೇಸ್‍ವಿಂಗ್‍; ಎಲೆಯಂಥ ಪೊರೆಯ ರೆಕ್ಕೆಗಳುಳ್ಳ ಕೀಟ.

    lacemaker
    ನಾಮವಾಚಕ
    ಲೇಸ್‍ ತಯಾರಕ; (ಮುಖ್ಯವಾಗಿ ವೃತ್ತಿಯಾಗಿ) ಲೇಸು, ಜಾಲರಿ ಪಟ್ಟಿ, ಹೆಣಿಗೆಪಟ್ಟಿ – ತಯಾರಿಸುವವ.

    lacerable
    ಗುಣವಾಚಕ
    ಹರಿಯಬಲ್ಲ; ಸಿಗಿಯಬಹುದಾದ; ಸೀಳಬಹುದಾದ; ಬಗೆಯಬಲ್ಲ.

    lacerate
    ಸಕರ್ಮಕ ಕ್ರಿಯಾಪದ
  • (ಮುಖ್ಯವಾಗಿ ಮಾಂಸಖಂಡವನ್ನು ಯಾ ಅಂಗಾಂಶವನ್ನು) ಬಗೆ; ಹರಿ; ಬಗಿ; ಸಿಗಿ; ಸೀಳು; ಬಗೆದುಹಾಕು; ಹರಿದುಹಾಕು; ಸಿಗಿದುಬಿಡು.
  • (ಹೃದಯವನ್ನು, ಮನಸ್ಸನ್ನು) ನೋಯಿಸು; ಹಿಂಸಿಸು; ಸಂಕಟಪಡಿಸು; ಚಿತ್ರಹಿಂಸೆ ಮಾಡು; ಹಿಂಸೆಪಡಿಸು.


  • logo