logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

earthward
ಕ್ರಿಯಾವಿಶೇಷಣ
ನೆಲದತ್ತ; ಭೂಮಿಯತ್ತ; ಭೂಮಿಗಭಿಮುಖವಾಗಿ; ನೆಲದ ಕಡೆಗೆ.

earthwards
ಕ್ರಿಯಾವಿಶೇಷಣ
= earthward.

earthwax
ನಾಮವಾಚಕ
(ಖನಿಜಶಾಸ್ತ್ರ) ಭೂಮೇಣ; ಖನಿಜ ರೂಪದಲ್ಲಿ ಸಿಕ್ಕುವ, ಮೇಣದಂತಹ ಹೈಡ್ರೊಕಾರ್ಬನ್ನುಗಳ ಮಿಶ್ರಣ.

earthwork
ನಾಮವಾಚಕ
  • (ಸೇನೆಯ ರಕ್ಷಣೆ, ಕೋಟೆ ಕಟ್ಟುವುದು, ರಸ್ತೆ ಮಾಡುವುದು, ಮೊದಲಾದವಲ್ಲಿ ಹಾಕುವ) ಮಣ್ಣುದಿಬ್ಬ; ಮಣ್ಣುದಂಡೆ; ಮಣ್ಣಿನ ಏರಿ.
  • ಮಣ್ಣುಕೆಲಸ; ಮಟ್ಟಿಕಾಮಗಾರಿ.
  • ಮಣ್ಣುದಂಡೆ ಹಾಕುವುದು; ಮಣ್ಣು ಏರಿ ಹಾಕುವುದು.

  • earthworm
    ನಾಮವಾಚಕ
  • ಮಣ್ಣುಹುಳು; ಎರೆಹುಳು.
  • (ರೂಪಕವಾಗಿ) ಡೊಗ್ಗು ಸಲಾಮು ಹಾಕುವವನು; ನೆಲದವರೆಗೆ ಕುಗ್ಗಿ ಯಾ ಬಗ್ಗಿ ಅನುಸರಣೆ ಮಾಡುವವನು; ಕಾಲು ನೆಕ್ಕುವವನು; ಅತ್ಮಗೌರವವಿಲ್ಲದವನು.

  • earthy
    ಗುಣವಾಚಕ
  • ಭೂಮಿಯ; ಮಣ್ಣಿನ; ಮಣ್ಣಿನಂಥ; ಪಾರ್ಥಿವ.
  • (ರೂಪಕವಾಗಿ) ಕೇವಲ ಐಹಿಕವಾದ; ಪ್ರಾಪಂಚಿಕ; ವ್ಯಾವಹಾರಿಕ; ಲೌಕಿಕ.
  • ಒರಟಾದ; ನಯವಿಲ್ಲದ; ಅಸಂಸ್ಕೃತ: his earthy egoism ಅವನ ಒರಟು ಅಹಂಭಾವ.
  • ಅಸಭ್ಯ; ಅಶ್ಲೀಲ; ಬಂಡು; ಮರ್ಯಾದೆಯಿಲ್ಲದ: earthy jokes ಅಸಭ್ಯ ಹಾಸ್ಯ.

  • earwig
    ನಾಮವಾಚಕ
    ಕರ್ಣಕೀಟ; ಗುಗ್ಗುರು; ತಗಣಿಗಂಡ; ಕಿವಿಯ ಮೂಲಕ ತಲೆಯನ್ನು ಹೊಗುವುದೆಂದು ಹಿಂದೆ ನಂಬಲಾಗಿದ್ದ, ಡರ್ಮಾಪ್ಟರ ಗಣದ, ತುದಿಯಲ್ಲಿ ದೊಡ್ಡ ದೊಡ್ಡ ಚಿಮುಟದಂಥ ಅಂಗಗಳುಳ್ಳ ಹುಳು.
  • (ಅಮೆರಿಕನ್‍ ಪ್ರಯೋಗ) ಚಿಕ್ಕ ಸಾವಿರಗಾಲು ಕೀಟ.

  • earwig
    ಸಕರ್ಮಕ ಕ್ರಿಯಾಪದ
    (ಪ್ರಾಚೀನ ಪ್ರಯೋಗ) ಕಿವಿಕಚ್ಚು; ಕಿವಿಯಲ್ಲಿ ತುಂಬು; ಒಬ್ಬನಿಗೆ ವಿಷಯ ಗುಟ್ಟಾಗಿ ತಿಳಿಸಿ ಪ್ರಚೋದಿಸು.

    ease
    ನಾಮವಾಚಕ ಪದಗುಚ್ಛ ನುಡಿಗಟ್ಟು
  • ನೋವು ಯಾ ತೊಂದರೆ ಇಲ್ಲದಿರುವುದು.
  • ಅನಿರ್ಬಂಧತೆ.
  • ಸಮಾಧಾನ; ಸ್ವಾಸ್ಥ್ಯ.
  • ಹಾಯಿ; ಸುಖ; ಆರಾಮ; ನಿರಾತಂಕತೆ; ನಿಶ್ಚಿಂತತೆ; ಅರ್ಥಿಕ ಮೊದಲಾದ ಕಷ್ಟವಿಲ್ಲದಿರುವುದು: he lives a life of ease with a limited income ಮಿತವಾದ ವರಮಾನದಿಂದಲೇ ಅವನು ಸುಖವಾದ ಜೀವನ ನಡೆಸುತ್ತಾನೆ.
  • ನೋವಿನ ಶಮನ, ಪರಿಹಾರ: the medicine brought almost instant ease ಆ ಔಷಧಿಯಿಂದ ಕೊಡಲೇ ಪರಿಹಾರ ಸಿಕ್ಕಿತು.
  • ಸರಾಗ; ಸುಗಮತೆ; ಸಲೀಸು; ಸುಕರತೆ; ಸುಲಭತೆ; ಅನಾಯಾಸತೆ; ನಿರಾಯಾಸತೆ.

  • ease
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ ನುಡಿಗಟ್ಟು
    ನೋವು, ತೊಂದರೆ, ಮೊದಲಾದವನ್ನು — ತಪ್ಪಿಸು, ಪರಿಹರಿಸು, ನೀಗು, ಕಳೆ. ease off (or up) = 2 ease ಅಕರ್ಮಕ ಕ್ರಿಯಾಪದ \((1)\).
  • (ತನಗೆ ಯಾ ಇನ್ನೊಬ್ಬನಿಗೆ) ಮನಶ್ಯಾಂತಿ ತಂದುಕೊ, ಕೊಡು; ಕ್ಲೇಶವಿಲ್ಲದಂತೆ ಮಾಡು, ಮಾಡಿಕೊ; ಶಮನಮಾಡು; ಶಮನಗೊಳಿಸು; ಮನಸ್ಸಿನ ಭಾರ ಇಳಿಸು.
  • (ಹಾಸ್ಯ ಪ್ರಯೋಗ) (ಒಬ್ಬನ ದುಡ್ಡಿನ ಚೀಲ ಮೊದಲಾದವನ್ನು) ಕದಿ; ಲಪಟಾಯಿಸು.
  • (ರೂಪಕವಾಗಿ ಸಹ) (ಬಹಳ ಬಿಗಿಯಾಗಿರುವುದನ್ನು) ಸಡಿಲಗೊಳಿಸು; ಸರಾಗಗೊಳಿಸು; ಸರಿಪಡಿಸು.
  • (ನೌಕಾಯಾನ) (ಹಗ್ಗ, ಹಾಯಿಪಟ, ಮೊದಲಾದವನ್ನು) ಸಡಿಲಮಾಡು; ಸಡಿಲಗೊಳಿಸು.


  • logo