logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

dairy farm
ನಾಮವಾಚಕ
ಹೈನುದಾಣ; ಹೈನುಗಾರಿಕೆ ತಾಣ; ಡೈರಿ ಹಾರಮ್‍; ಹೈನುಗಾರಿಕೆ ಯಾ ಹಾಲಿನ ಉತ್ಪನ್ನಗಳಿಗಾಗಿಯೇ ಸ್ಥಾಪಿಸಿದ ದನದ ತೊಟ್ಟಿ, ಸಂಸ್ಕರಣ ಕೇಂದ್ರ, ಮೊದಲಾದವುಗಳಿರುವ ತಾಣ.

dairy products
ನಾಮವಾಚಕ
ಹೈನೋತ್ಪನ್ನಗಳು; ಕ್ಷೀರೋತ್ಪನ್ನಗಳು; ಹಾಲು ಮತ್ತು ಅದರಿಂದ ತಯಾರಿಸುವ ಕೆನೆ, ಗಿಣ್ಣು, ಬೆಣ್ಣೆ, ಮೊದಲಾದವು.

dairying
ನಾಮವಾಚಕ
ಹೈನುಗಾರಿಕೆ:
  • ಹಾಲಿನ ಉತ್ಪನ್ನಗಳಿಗೆ ಸಂಬಂಧಿಸಿದ ವ್ಯಾಪಾರೋದ್ಯಮ.
  • ಹಾಲು, ಬೆಣ್ಣೆ, ಮೊದಲಾದವನ್ನು ತಯಾರಿಸುವುದು.

  • dairymaid
    ನಾಮವಾಚಕ
    ಹೈನುಗಿತ್ತಿ; ಡೈರಿಯಲ್ಲಿ ಕೆಲಸಮಾಡುವ ಹೆಂಗಸು.

    dairyman
    ನಾಮವಾಚಕ
  • ಹೈನಿಗ; ಹೈನುಗಾರ; ಡೇರಿಯಲ್ಲಿ ಕೆಲಸಮಾಡುವವ.
  • ಡೇರಿಯ ಒಡೆಯ ಯಾ ನಿರ್ವಾಹಕ.

  • dais
    ನಾಮವಾಚಕ
  • (ಅಗ್ರಪೀಠ, ಸಿಂಹಾಸನ, ಮೊದಲಾದವುಗಳಿಗಾಗಿ ಕೋಣೆ, ಸಭಾಂಗಣಗಳ ಒಂದು ಕಡೆಯಲ್ಲಿ ಹಾಕಿರುವ) ವೇದಿಕೆ; ಜಗಲಿ.
  • (ಮನೆಯ ಹೊರಗಿನ) ಜಗಲಿ; ಜಗಲಿ ಕಟ್ಟೆ.

  • daisied
    ಗುಣವಾಚಕ
    ಡೇಯ್ಸಿ – ಹೂಗಳಿಂದ ತುಂಬಿದ, ಅಲಂಕೃತವಾದ: daisied lawns ಡೇಯ್ಸಿ ಹಸಲೆಗಳು, ಮೈದಾನಗಳು.

    daisy
    ನಾಮವಾಚಕ ನುಡಿಗಟ್ಟು
    pushing up the daisies(ಅಶಿಷ್ಟ) ಸತ್ತು ಸಮಾಧಿಯಾದದ್ದು; ಸತ್ತು ಹೂತಾಗಿದ್ದು.
  • ಡೇಯ್ಸಿ; ಬೆಲಿಸ್‍ ಪೆರಿನಿಸ್‍ ಕುಲದ, ಹಳದಿ ಪುಷ್ಪಪಾತ್ರವೂ ಬಿಳಿ ದಳವಲಯವೂ ಇರುವ, ಕಾಡಿನಲ್ಲಿ ಬೆಳೆಯುವ ಯಾ ಉದ್ಯಾನವನಗಳಲ್ಲಿ ಬೆಳೆಸುವ, ಯೂರೋಪಿನ ಸಣ್ಣ ಗಿಡ ಯಾ ಅದರ ಹೂವು.
  • ಈ ಗಿಡವನ್ನು ಹೋಲುವ ಇತರ ಗಿಡ, ಮುಖ್ಯವಾಗಿ ದೊಡ್ಡಗೊಳಿಕಣ್ಣಿನ ಡೇಯ್ಸಿ.
  • (ಅಶಿಷ್ಟ) ಅಪರಂಜಿ; ಅತ್ಯುತ್ತಮವಾದದ್ದು; ಯಾವುದಾದರೊಂದರ ಅತ್ಯುತ್ಕೃಷ್ಟ ಮಾದರಿ: he is real daisy ಅವನೊಬ್ಬ ನಿಜವಾದ ಅಪರಂಜಿ.

  • daisy-chain
    ನಾಮವಾಚಕ
    ಡೇಯ್ಸಿ (ಹೂವಿನ) ದಂಡೆ, ಮಾಲೆ, ಪೋಣಿಸಿದ ಡೇಯ್ಸಿ ಹೂಗಳ ಸರ.

    daisy-cutter
    ನಾಮವಾಚಕ
  • ಕಾಲನ್ನು ಹೆಚ್ಚಾಗಿ ಮೇಲಕ್ಕೆತ್ತದೆ ನಡೆವ ಕುದುರೆ.
  • (ಕ್ರಿಕೆಟ್‍) ಉರುಳುಚೆಂಡು; ಪುಟವೇಳದೆ ನೆಲದ ಮೇಲೆ ಉರುಳಿಕೊಂಡು ಹೋಗುವ ಚೆಂಡು.


  • logo